/newsfirstlive-kannada/media/post_attachments/wp-content/uploads/2024/08/KL_RAHUL-1-1.jpg)
ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್. 2025ರ IPL ಟೂರ್ನಿಗಾಗಿ ಎಲ್ಲಾ 10 ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ರಿಲೀಸ್​ ಮಾಡಿವೆ. ಲಕ್ನೋ ಸೂಪರ್ ಜೈಂಟ್ಸ್ ತಂಡವು ರೀಟೈನ್​ ಲಿಸ್ಟ್​ ರಿಲೀಸ್​ ಮಾಡಿದ್ದು, ನಾಯಕ ಕೆಎಲ್ ರಾಹುಲ್ ಅವರನ್ನೇ ಕೈ ಬಿಟ್ಟಿದೆ.
ಲಕ್ನೋ ತಂಡದಿಂದ ಯಾರಿಗೆ ಮಣೆ?
ಐಪಿಎಲ್ 2025ರ ಮೆಗಾ ಹರಾಜಿಗೆ ಕೆಎಲ್ ರಾಹುಲ್ ಬಂದಿದ್ದು, ಭಾರೀ ಕುತೂಹಲ ಮೂಡಿಸಿದೆ. ಇವರ ಬದಲಿಗೆ ಲಕ್ನೋ ತಂಡದ ಮೊದಲ ಆಟಗಾರನಾಗಿ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟರ್-ವಿಕೆಟ್ ಕೀಪರ್ ನಿಕೋಲಸ್ ಪುರನ್ ಅವರನ್ನು ರೀಟೈನ್​ ಮಾಡಿಕೊಂಡಿದೆ. ಪೂರನ್​ಗೆ ಬರೋಬ್ಬರಿ 21 ಕೋಟಿ ನೀಡಲಾಗಿದೆ.
ಇನ್ನು, 2ನೇ ಆಟಗಾರನಾಗಿ ಮಾಯಾಂಕ್ ಯಾದವ್ ಮತ್ತು ರವಿ ಬಿಷ್ಣೋಯ್ ಅವರನ್ನು ರೀಟೈನ್​ ಮಾಡಿಕೊಳ್ಳಲಾಗಿದೆ. ಮಯಾಂಕ್​​, ರವಿ ಬಿಷ್ಣೋಯ್ ಇಬ್ಬರಿಗೂ ತಲಾ 11 ಕೋಟಿ ಕೊಟ್ಟು ಉಳಿಸಿಕೊಳ್ಳಲಾಗಿದೆ. ಅನ್‌ಕ್ಯಾಪ್ಡ್ ಪ್ಲೇಯರ್ಸ್​ ಆದ ಆಯುಷ್ ಬದೋನಿ ಮತ್ತು ಮೋಸಿನ್​ ಖಾನ್​​ ಅವರಿಗೆ ತಲಾ 4 ಕೋಟಿ ನೀಡಿ ಉಳಿಸಿಕೊಂಡಿದೆ.
ಕೆ.ಎಲ್​ ರಾಹುಲ್​ ಕೈ ಬಿಡಲು ಕಾರಣವೇನು?
ಮೆಗಾ ಆಕ್ಷನ್​ಗೆ ಮುನ್ನವೇ ಕ್ಯಾಪ್ಟನ್​ ಕೆ.ಎಲ್​ ರಾಹುಲ್​​ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ದೂರ ಆಗಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೆ.ಎಲ್​ ರಾಹುಲ್​ ಅವರನ್ನು ಉಳಿಸಿಕೊಳ್ಳಲು ಲಕ್ನೋ ತಂಡ ಮುಂದಾಗಿತ್ತು. ಆದರೆ, ಇವರು ಪರ್ಸನಲ್​​ ಮತ್ತು ಪ್ರೊಫೆಷನಲ್​ ಕಾರಣಕ್ಕೆ ತಂಡ ತೊರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೆಗಾ ಹರಾಜಿಗೆ ಮುನ್ನ ಲಕ್ನೋ ತಂಡ ಕೆ.ಎಲ್​ ರಾಹುಲ್​ ಅವರನ್ನು 18 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈಗ ಯಾವುದೇ ತಂಡ ಕೆ.ಎಲ್​ ರಾಹುಲ್​ ಅವರನ್ನು ಖರೀದಿ ಮಾಡಬೇಕು ಅನ್ನೋದಾದ್ರೆ ಕನಿಷ್ಠ 18 ಕೋಟಿಯಿಂದ ಗರಿಷ್ಠ 20 ಕೋಟಿ ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us