KL ರಾಹುಲ್, ಪಂತ್, ಗಿಲ್, ಜೈಸ್ವಾಲ್​ ಬ್ಯಾಟಿಂಗ್​ ಓಕೆ.. ಉಳಿದ ಆಟಗಾರರ ಪರ್ಫಾಮೆನ್ಸ್​​ಗೆ ಬೇಸರ!

author-image
Bheemappa
Updated On
KL ರಾಹುಲ್, ಪಂತ್, ಗಿಲ್, ಜೈಸ್ವಾಲ್​ ಬ್ಯಾಟಿಂಗ್​ ಓಕೆ.. ಉಳಿದ ಆಟಗಾರರ ಪರ್ಫಾಮೆನ್ಸ್​​ಗೆ ಬೇಸರ!
Advertisment
  • ಕೇಲವೇ ಕೆಲವು ರನ್​​ಗಳ ಅಂತರದಲ್ಲಿ 7 ವಿಕೆಟ್​ಗಳು ಫಿನಿಶ್​
  • 2ನೇ ಇನ್ನಿಂಗ್ಸ್​ ಟೀಮ್ ಇಂಡಿಯಾ ಘೋರ, ಬ್ಯಾಟಿಂಗ್ ಡಲ್
  • ಲೀಡ್ಸ್​ನಲ್ಲಿ ಭಾರತದ ಟಾಪ್​​- 5 ಬ್ಯಾಟರ್​​​ಗಳ ಒಟ್ಟು ರನ್​ 721

ಲೀಡ್ಸ್​ ಟೆಸ್ಟ್​ ಮುಗೀತು. ಬ್ಯಾಟರ್​ಗಳ ದರ್ಬಾರ್​ ಜೋರಾಗಿತ್ತು. ಬೂಮ್ರಾ ಬೆಂಕಿ ಪರ್ಫಾಮೆನ್ಸ್ ನೀಡಿದರು. ಇದೆಲ್ಲ ಓಕೆ. ಆದ್ರೆ, ಇವರ ಪರ್ಫಾಮೆನ್ಸ್ ನೋಡಿ ಖುಷಿಪಡಬೇಕೋ, ಇಲ್ಲ ಅವರ ಆಟ ನೋಡಿ ಏನಯ್ಯಾ ಈ ಆಟ ಅಂತ ಕೊರಗಬೇಕೋ ನಿಜಕ್ಕೂ ಅರ್ಥವಾಗ್ತಿಲ್ಲ. ಅದ್ಯಾಕೆ ಈ ಮಾತು ಅಂತೀರಾ.?

ಲೀಡ್ಸ್​ ಟೆಸ್ಟ್​ ಟೀಮ್ ಇಂಡಿಯಾ ಪಾಲಿಗೆ ಎಂದೆಂದಿಗೂ ಮರೆಯಲಾಗದ ಪಂದ್ಯ. ಇಲ್ಲಿ ಅಕ್ಷರಶಃ ನಡೆದಿದ್ದು ಟೀಮ್ ಇಂಡಿಯಾ ಬ್ಯಾಟರ್​ಗಳ ಪಾರಮ್ಯ. ಟೀಮ್ ಇಂಡಿಯಾ ಬ್ಯಾಟರ್​​ಗಳು ಸರಾಗವಾಗಿ ಗಳಿಸುತ್ತಿದ್ದ ರನ್​, ಎದುರಾಳಿ ನಾಯಕ ಬೆನ್ ಸ್ಟೋಕ್ಸ್​ಗೆ ಹೊಟ್ಟೆಯಲ್ಲಿ ಹುಳ ಬಿಟ್ಟಂತಿತ್ತು. ಪ್ರತಿ ಬೌಂಡರಿಗೆ ಮುಖ ಬಾಡುತ್ತಿತ್ತು. ಪ್ರಸ್ಟ್ರೇಷನ್​​ನಲ್ಲಿ ಲೀಡ್ಸ್​ ಟೆಸ್ಟ್ ಸೋಲು ಗ್ಯಾರಂಟಿ ಎಂಬ ಲೆಕ್ಕಾಚಾರಕ್ಕೆ ಬಂದಿದ್ದರು. ಹೀಗಾದ್ರೂ ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ಚಿಂತೆ ಕಾಡ್ತಿದೆ.

publive-image

5 ಶತಕ.. ಫ್ಯಾನ್ಸ್​ ಖುಷ್​.. ಕ್ಯಾಂಪ್​ನಲ್ಲಿ ಇಲ್ಲ ನೆಮ್ಮದಿ..!

ಇದು ಸದ್ಯ ಟೀಮ್ ಇಂಡಿಯಾ ಪರಿಸ್ಥಿತಿ. ಯಾಕಂದ್ರೆ, ಲೀಡ್ಸ್​ನಲ್ಲಿ ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರಿಷಭ್ ಪಂತ್ ಆಟಕ್ಕೆ ಬಹುಪರಾಕ್ ಹೇಳ್ತಿದ್ದಾರೆ. ಇಂಗ್ಲೆಂಡ್ ಬ್ಯಾಟರ್​ಗಳಿಗೆ ​, ಬ್ಯಾಟಿಂಗ್ ಪಾಠ ಕಲಿಸಿದ ಈ ನಾಲ್ವರ ಶತಕಕ್ಕೆ ಫ್ಯಾನ್ಸ್​ ಫುಲ್ ಖುಷ್​ ಆಗಿದ್ದಾರೆ. ಆದ್ರೆ, ಇನ್ನುಳಿದ 6 ಮಂದಿ ಆಟ ಆಕ್ಷರಶಃ ನಿದ್ದೆಗೆಡಿಸಿದೆ. ಇದಕ್ಕೆ ಕಾರಣ ಲೀಡ್ಸ್​ ಟೆಸ್ಟ್​ನಲ್ಲಿ ಮಿಡಲ್ ಆರ್ಡರ್​ ಆ್ಯಂಡ್ ಲೋವರ್ ಆರ್ಡರ್​ನ ಆಟ.

ಫಸ್ಟ್​ ಇನ್ನಿಂಗ್ಸ್​ 430 ರನ್​​ಗೆ 3 ವಿಕೆಟ್​.. 471ಕ್ಕೆ ಆಲೌಟ್​.!

ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಸುಲಭಕ್ಕೆ 600 ಪ್ಲಸ್ ರನ್ ಗಳಿಸಬಹುದಿತ್ತು. ಯಾಕಂದ್ರೆ, ಒಂದು ಹಂತದಲ್ಲಿ 430 ರನ್​​ಗಳಿಗೆ ಕೇವಲ 3 ವಿಕೆಟ್ ಕಳೆದುಕೊಂಡಿತಷ್ಟೇ. ಆದ್ರೆ, ಯಾವಾಗ ಶುಭ್​ಮನ್ ವಿಕೆಟ್ ಕಳೆದುಕೊಂಡಿದ್ದೇ ತಡ. ಪವಿಲಿಯನ್ ಪರೇಡ್ ಶುರುವಾಯ್ತು. ಈ ಪೆವಿಲಿಯನ್ ಪರೇಡ್ ಯಾವ ಮಟ್ಟಕ್ಕಿಂತು ಅಂದ್ರೆ, ಕೇವಲ 41 ರನ್​​ಗಳ ಅಂತರಕ್ಕೆ 7 ವಿಕೆಟ್ ಕಳೆದುಕೊಳ್ತು.

333ಕ್ಕೆ 4 ವಿಕೆಟ್.. 364ಕ್ಕೆ ಆಲೌಟ್​.. 31 ರನ್​​ಗೆ 6

ಫಸ್ಟ್ ಇನ್ನಿಂಗ್ಸ್​ ಏನೋ ತಪ್ಪಾಯ್ತು. 2ನೇ ಇನ್ನಿಂಗ್ಸ್​ನಲ್ಲಾದರೂ​ ತಪ್ಪು ತಿದ್ದಿಕೊಳ್ತಾರೆ ಅಂದ್ರೆ, ಆ ಮಹಾನುಭಾವರು ಮಾಡಿದ್ದು ಘನಘೋರ. ಕನ್ನಡಿಗ ಕೆ.ಎಲ್.ರಾಹುಲ್ ವಿಕೆಟ್ ಕೈಚೆಲ್ಲಿದ್ದೇ ತಡ ರನ್ನಿಂಗ್ ರೇಸ್​​​​​​​​​​ ಶುರುವಾಯ್ತು. ಅದು ಯಾವ ಮಟ್ಟಕಂದ್ರೆ, ಒಂದು ಹಂತದಲ್ಲಿ 333 ರನ್​ಗೆ ಜಸ್ಟ್​ 4 ವಿಕೆಟ್ ಕಳೆದುಕೊಂಡಿದ್ದ ಇಂಡಿಯಾ, ಜಸ್ಟ್​ 31 ರನ್​​ಗೆ 6 ವಿಕೆಟ್ ಕಳೆದುಕೊಂಡು 364 ರನ್​ಗೆ ಆಲೌಟ್ ಆಯಿತು.

ಇದನ್ನೂ ಓದಿ: ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ.. ಈ ಪ್ರವಾಸಿ ತಾಣಗಳಿಗೆ ನಿರ್ಬಂಧ

publive-image

6 ಮಂದಿ ಬ್ಯಾಟರ್ಸ್​ ಸೇರಿ ದಾಟಲಿಲ್ಲ ಮೂರಂಕಿ..!

ಲೀಡ್ಸ್​ನಲ್ಲಿ ಟೀಮ್ ಇಂಡಿಯಾ ಕೈ ಹಿಡಿದಿದ್ದು ಟಾಪ್​​-5 ಬ್ಯಾಟರ್ಸ್​. ಪ್ರಮುಖವಾಗಿ ಕೆ.ಎಲ್.ರಾಹುಲ್, ರಿಷಭ್ ಪಂತ್​ ಎರಡೂ ಇನ್ನಿಂಗ್ಸ್ ಕೈಹಿಡಿದ್ರೆ. ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್ ಮೊದಲ ಇನ್ನಿಂಗ್ಸ್​ ಶತಕ ದಾಖಲಿಸಿ ನೆರವಾದರು. ಅಕಸ್ಮಾತ್ ಈ ಟಾಪ್-5 ಬ್ಯಾಟರ್ಸ್ ಕೈ ಹಿಡಿದಿಲ್ಲ ಅಂದಿದ್ರೆ. ಟೀಮ್ ಇಂಡಿಯಾ ಸ್ಥಿತಿ ಅದೋಗತಿ. ಯಾಕಂದ್ರೆ, ಈ ಐವರಿಂದ 721 ರನ್ ಅರಿದು ಬಂದ್ರೆ. ಇನ್ನುಳಿದ 6 ಮಂದಿಯಿಂದ ದಾಖಲಾದ ಒಟ್ಟು ರನ್ 65 ರನ್​ ಮಾತ್ರ.

ಸುಧಾರಿಸಬೇಕು ಟೀಮ್ ಇಂಡಿಯಾ ಬ್ಯಾಟಿಂಗ್..!

ಲೀಡ್ಸ್​ನ ಬ್ಯಾಟಿಂಗ್ ಪಿಚ್​ನಲ್ಲೇ ಸಾಯಿ ಸುದರ್ಶನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ರನ್ ಗಳಿಸಲು ಪರದಾಡಿದ್ದಾರೆ. ಇನ್​ ಎಕ್ಸ್​ಪಿರಿಯನ್ಸ್​ ಬೌಲರ್​ಗಳ ಎದುರೇ ಇವರು ವೈಫಲ್ಯ ಇವರಿಗೆ ಮುಂದೆ ಬಿಗೆಸ್ಟ್ ಚಾಲೆಂಜ್ ಎದುರಾಗಲಿದೆ. ಯಾಕಂದ್ರೆ, ಮುಂದಿನ ಪಂದ್ಯಗಳನ್ನಾಡುವುದು ಬರ್ಮಿಂಗ್ಯಾಮ್, ಲಾರ್ಡ್ಸ್​, ಮ್ಯಾನ್​ಚೆಸ್ಟರ್​​, ಓವಲ್​ನಂಥ ಟಫ್ ಕಂಡೀಷನ್ಸ್​ನಲ್ಲಾಗಿದೆ. ಹೀಗಾಗಿ ಲೀಡ್ಸ್​ನಂಥ ಬ್ಯಾಟಿಂಗ್ ಫ್ರೆಂಡ್ಲಿಯಲ್ಲೇ ತಡಕಾಡಿದವರು, ಮುಂದೆ ಕಮ್​​ಬ್ಯಾಕ್ ಮಾಡಿದ್ರೆ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿವುದು ಗ್ಯಾರಂಟಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment