IPL 2025 Auction; ಚಹಾಲ್​ಗಿಂತ ಅತ್ಯಂತ ಕಡಿಮೆ ದುಡ್ಡು ಪಡೆದ KL ರಾಹುಲ್​.. ಎಷ್ಟು ಕೋಟಿಗೆ ಸೇಲ್ ಆದ್ರು?

author-image
Bheemappa
Updated On
IPL 2025 Auction; ಚಹಾಲ್​ಗಿಂತ ಅತ್ಯಂತ ಕಡಿಮೆ ದುಡ್ಡು ಪಡೆದ KL ರಾಹುಲ್​.. ಎಷ್ಟು ಕೋಟಿಗೆ ಸೇಲ್ ಆದ್ರು?
Advertisment
  • 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಚಹಾಲ್ ಪಡೆದ ಹಣ ಎಷ್ಟು?
  • ಹರಾಜಿನಲ್ಲಿ ಮಾರಾಟ ಆಗಿರುವ ಕನ್ನಡಿಗ ಕೆ.ಎಲ್ ರಾಹುಲ್, ಚಹಾಲ್
  • ಕೆ.ಎಲ್ ರಾಹುಲ್​ರನ್ನ ಖರೀದಿ ಮಾಡಿರುವ ಐಪಿಎಲ್ ಟೀಮ್ ಇದು

IPL 2025 ಮೆಗಾ ಆಕ್ಷನ್​​ ಆರಂಭವಾಗಿದ್ದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆಟಗಾರರ ಹರಾಜು ನಡೆಯುತ್ತಿದೆ. ಹರಾಜಿನಲ್ಲಿ ಈಗಾಗಲೇ ಕೆಲ ಆಟಗಾರರು ಸೇಲ್ ಆಗಿದ್ದಾರೆ. ಈ ಹಿಂದೆ ಆರ್​ಸಿಬಿಯ ಆಟಗಾರರು ಆಗಿದ್ದ ಯಜುವೇಂದ್ರ ಚಹಾಲ್ ಹಾಗೂ ಕೆ.ಎಲ್ ರಾಹುಲ್ ಮಾರಾಟ ಆಗಿದ್ದಾರೆ. ಅಚ್ಚರಿ ಎಂದರೆ ಚಹಾಲ್​ಗಿಂತ ರಾಹುಲ್ ಕಡಿಮೆ ಹಣಕ್ಕೆ ಸೇಲ್ ಆಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು​ ಕನ್ನಡಿಗ ಕೆ.ಎಲ್​ ರಾಹುಲ್​ ಅವರನ್ನು 14 ಕೋಟಿ ನೀಡಿ ಖರೀದಿ ಮಾಡಿದೆ. ಇದೇ ಚಹಾಲ್​ರನ್ನ 18 ಕೋಟಿ ರೂಪಾಯಿ ನೀಡಿ ಪಂಜಾಬ್​ ಟೀಮ್ ಖರೀದಿ ಮಾಡಿದೆ. ಈ ಇಬ್ಬರು ಪಡೆದ ಹಣದಲ್ಲಿ ವ್ಯತ್ಯಾಸ ನೋಡಿದರೆ ಕೆ.ಎಲ್​ ರಾಹುಲ್​ಗಿಂತ ಯಜುವೇಂದ್ರ ಚಹಾಲ್ ಅವರು 4 ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ಪಡೆದಿದ್ದಾರೆ. ಚಹಾಲ್ ಕೇವಲ ಸ್ಪಿನ್ನರ್ ಆಗಿದ್ದು ಬ್ಯಾಟಿಂಗ್ ಏನೂ ಮಾಡುವುದಿಲ್ಲ. ಆದರೆ ಹರಾಜಿನಲ್ಲಿ ಹಣ ಲೂಟಿ ಮಾಡಿದ್ದಾರೆ.

ಇದನ್ನೂ ಓದಿ:IPL Auction; ಸ್ಟಾರ್ ಪ್ಲೇಯರ್ಸ್ ಖರೀದಿ ಮಾಡದ RCB.. ರಾಹುಲ್, ಪಂತ್, ಅಯ್ಯರ್​ ಬಿಟ್ಟುಕೊಟ್ಟ ಬೆಂಗಳೂರು

publive-image

ಆದರೆ ಕೆ.ಎಲ್ ರಾಹುಲ್ ಅವರು ಉತ್ತಮ ಬ್ಯಾಟಿಂಗ್, ವಿಕೆಟ್​ ಕೀಪಿಂಗ್ ಮಾಡಬಲ್ಲರು. ಅಲ್ಲದೇ ಫೀಲ್ಡಿಂಗ್​ ಕೂಡ ಅದ್ಭುತವಾಗಿ ಮಾಡಬಲ್ಲರು. ಇನ್ನುಳಿದಂತೆ ಬ್ಯಾಟಿಂಗ್​ನಲ್ಲಿ ಯಾವ ಸ್ಲಾಟ್​​ನಲ್ಲಿ ಇಳಿಸಿದರೂ ರಾಹುಲ್ ಅದ್ಭುತವಾದ ಬ್ಯಾಟ್ ಬೀಸಬಲ್ಲರು. ಆದರೆ ಆಕ್ಷನ್​​ನಲ್ಲಿ ಮಾತ್ರ ರಾಹುಲ್ ಕೇವಲ 14 ಕೋಟಿ ಹಣ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: IPL Auction; RCB ಖರೀದಿ ಮಾಡಿದ ಮೊದಲ ಸ್ಟಾರ್​ ಪ್ಲೇಯರ್​ ಯಾರು? ಪವರ್​​ ಹಿಟ್ಟರ್​ ಎಂಟ್ರಿ!

ಭಾರತದ ಸ್ಟಾರ್ ಪ್ಲೇಯರ್ ಆಗಿರುವ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಇದುವರೆಗೆ 132 ಪಂದ್ಯ ಆಡಿದ್ದು 45.47 ಸರಾಸರಿ ಮತ್ತು 134.61 ಸ್ಟ್ರೈಕ್ ರೇಟ್‌ನಲ್ಲಿ 4,683 ರನ್ ಗಳಿಸಿದ್ದಾರೆ. ಅಲ್ಲದೇ ರಾಹುಲ್ 4 ಶತಕ ಸಿಡಿಸಿದ್ದು, 37 ಬಾರಿ ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment