/newsfirstlive-kannada/media/post_attachments/wp-content/uploads/2025/06/KL-RAHUL-4.jpg)
ಕನ್ನಡಿಗ ಕೆ.ಎಲ್.ರಾಹುಲ್ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸದ್ಯ ಇಂಗ್ಲೆಂಡ್ನ ಲೀಡ್ಸ್ನಲ್ಲಿ ಭಾರತ ತಂಡವು ಟೆಸ್ಟ್ ಪಂದ್ಯವನ್ನು ಆಡ್ತಿದೆ.
ಮೊದಲ ಟೆಸ್ಟ್ ಆಡ್ತಿರುವ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳಿಗೆ ನಿನ್ನೆ ಮೂರನೇ ದಿನದ ಕದನ. ಪಂದ್ಯದ ವೇಳೆ ಕೆಎಲ್ ರಾಹುಲ್ ಸುದ್ದಿಯಾಗಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಪೆವಿಲಿಯನ್ಗೆ ಆಟಗಾರರು ಹೋಗುತ್ತಿದ್ದರು. ಆಗ ರಾಹುಲ್, ಬ್ಯಾಟ್ ಮಳೆಯಿಂದ ನೆನೆಯಬಾರದು ಅನ್ನೋ ಕಾರಣಕ್ಕೆ ತಮ್ಮ ಜರ್ಸಿ ಒಳಗೆ ಮುಚ್ಚಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: SENA ದೇಶಗಳ ವಿರುದ್ಧ ಬೂಮ್ರಾ ವಿಶೇಷ ದಾಖಲೆ.. ರೆಕಾರ್ಡ್ ಬ್ರೇಕ್ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್!
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಎಲ್ ರಾಹುಲ್ ಈ ನಡೆ ಕ್ರಿಕೆಟ್ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಅಂತಾ ಕೊಂಡಾಡುತ್ತಿದ್ದಾರೆ. ಅಂದ್ಹಾಗೆ ಸೆಕೆಂಡ್ ಇನ್ನಿಂಗ್ಸ್ನಲ್ಲೂ ಕೆಎಲ್ ರಾಹುಲ್ ತಂಡಕ್ಕೆ ಮರೆಯಲಾದ ಕೊಡುಗೆ ನೀಡುತ್ತಿದ್ದಾರೆ. ನಿನ್ನೆ ಆಟದ ಅಂತ್ಯಕ್ಕೆ ರಾಹುಲ್, 75 ಬಾಲ್ನಲ್ಲಿ 47 ರನ್ ಚಚ್ಚಿದ್ದಾರೆ. ಅದರಲ್ಲಿ 7 ಬೌಂಡರಿ ಕೂಡ ಸೇರಿದ್ದು, ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಭಾರತ ತಂಡವು ಇರಡನೇ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಕಳೆದುಕೊಂಡು 90 ರನ್ಗಳಿಸಿದೆ. ಆ ಮೂಲಕ ಇಂಗ್ಲೆಂಡ್ ವಿರುದ್ಧ 96 ರನ್ಗಳ ಮುನ್ನಡೆಯನ್ನು ಸಾಧಿಸಿದೆ.
ಇದನ್ನೂ ಓದಿ: ಕೈಕೊಟ್ಟ ಜೈಸ್ವಾಲ್, ಸಾಯಿ.. ಟೀಂ ಇಂಡಿಯಾಗೆ ಕನ್ನಡಿಗ KL ರಾಹುಲ್ ಆಸರೆ, ಭರವಸೆ..!
The way KL Rahul saving his bat when rain arrives.❤️👌 pic.twitter.com/91NPkSSOjY
— Tanuj (@ImTanujSingh) June 22, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ