newsfirstkannada.com

ಟೀಮ್​ ಇಂಡಿಯಾ ವಿರುದ್ಧ ಆಕ್ರೋಶ ಹೊರಹಾಕಿದ ಕನ್ನಡಿಗ ರಾಹುಲ್​​.. ಏನಂದ್ರು ಗೊತ್ತಾ?

Share :

Published April 30, 2024 at 4:42pm

Update April 30, 2024 at 4:45pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್​

    ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ

    ಚುಟುಕು ಸಮರಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಿದ ಬಿಸಿಸಿಐ!

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯೋ ಚುಟುಕು ಸಮರಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಅಳೆದು ತೂಗಿ ತಂಡ ಪ್ರಕಟಿಸಿರೋ ಬಿಸಿಸಿಐ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್ ಅವರನ್ನು ತಂಡದಿಂದ ಕೈ ಬಿಟ್ಟಿದೆ.

ತನ್ನನ್ನು ಟೀಮ್​ ಇಂಡಿಯಾದಿಂದ ಕೈ ಬಿಟ್ಟಿದ್ದಕ್ಕೆ ಸ್ಟಾರ್​ ಕ್ರಿಕೆಟರ್​​ ಕೆ.ಎಲ್​ ರಾಹುಲ್​ ಆಕ್ರೋಶ ಹೊರಹಾಕಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಮೌನವೇ ಉತ್ತರ, ಎಲ್ಲಾ ಸಂದರ್ಭಕ್ಕೂ ನಗುವೇ ಸರಿಯಾದ ಪ್ರತಿಕ್ರಿಯೆ ಎಂದು ಖಾರವಾಗಿ ಸ್ಟೇಟಸ್​ ಹಾಕಿದ್ದಾರೆ.

ಕೆ.ಎಲ್​​​ ರಾಹುಲ್​ ಬದಲಿಗೆ ವಿಕೆಟ್​ ಕೀಪರ್​ ಬ್ಯಾಟರ್​ ಆಗಿ ಟೀಮ್​ ಇಂಡಿಯಾದ ಮೊದಲ ಆಯ್ಕೆ ಸಂಜು ಸ್ಯಾಮ್ಸನ್​ ಆಗಿದ್ದಾರೆ. ಜತೆಗೆ ಬರೋಬ್ಬರಿ 2 ವರ್ಷಗಳ ಬಳಿಕ ರಿಷಭ್​ ಪಂತ್​ ಕೂಡ ಕಮ್​ಬ್ಯಾಕ್​ ಮಾಡಿದ್ದಾರೆ.

ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನ ಖಾಲಿ ಇತ್ತು. ಆ ಸ್ಥಾನದ ಮೇಲೆ ಹಲವಾರು ಪ್ಲೇಯರ್ಸ್ ಕಣ್ಣಿಟ್ಟಿದ್ದರು. ಅದರಲ್ಲಿ ಕೆಎಲ್ ರಾಹುಲ್ ಸಹ ಒಬ್ಬರು ಇದ್ದರು. ವಿಕೆಟ್​ ಕೀಪರ್ ಸ್ಥಾನಕ್ಕೆ ಪಂತ್, ಜುರೆಲ್, ಜಿತೇಶ್, ಇಶಾನ್, ಸಂಜು ಹೀಗೆ ಸಾಲು ಸಾಲು ಆಟಗಾರರು ರೇಸ್​ನಲ್ಲಿದ್ದರು. ಕೊನೆಗೂ ರಾಹುಲ್​​ಗೆ ಕೊಕ್​ ನೀಡಲಾಗಿದೆ.

ಇದನ್ನೂ ಓದಿ:

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾ ವಿರುದ್ಧ ಆಕ್ರೋಶ ಹೊರಹಾಕಿದ ಕನ್ನಡಿಗ ರಾಹುಲ್​​.. ಏನಂದ್ರು ಗೊತ್ತಾ?

https://newsfirstlive.com/wp-content/uploads/2024/01/KL-Rahul_IND.jpg

Load More