/newsfirstlive-kannada/media/post_attachments/wp-content/uploads/2024/05/KL-RAHUL-10.jpg)
ಟೀಂ ಇಂಡಿಯಾ ಸ್ಟಾರ್, ಕನ್ನಡಿಗ ಕೆ.ಎಲ್.ರಾಹುಲ್ ಟ್ವಿಟರ್​ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಐಪಿಎಲ್ ಟೂರ್ನಿ ಮುಕ್ತಾಯಗೊಂಡಿದೆ. ಕೆ.ಎಲ್. ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು. ಇವರ ನೇತೃತ್ವದಲ್ಲಿ ಎಲ್​ಎಸ್​ಜಿ 14 ಪಂದ್ಯಗಳನ್ನು ಆಡಿ 7 ರಲ್ಲಿ ಸೋತು 7 ರಲ್ಲಿ ಗೆದ್ದಿತು. ಆದರೆ ಪ್ಲೇ-ಆಫ್ ಪ್ರವೇಶಿಸಲು ವಿಫಲವಾಗಿತ್ತು. ಈ ನಡುವೆ ಸತತ ಸೋಲುಗಳಿಂದ ಅಸಮಾಧಾನ ವ್ಯಕ್ತಪಡಿಸಿದ್ದ ಎಲ್​ಎಸ್​ಜಿ ಮಾಲೀಕ, ರಾಹುಲ್ ಅವರನ್ನು ಸರ್ವಜನಿಕವಾಗಿ ನಿಂದಿಸಿದ್ದರು.
ಇದನ್ನೂ ಓದಿ:ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!
ಇದೀಗ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಆದರೆ ಕೆಎಲ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನವನ್ನು ನೀಡಿಲ್ಲ. ವಿಶ್ವಕಪ್​ಗೆ ರಾಹುಲ್ ಆಯ್ಕೆ ಆಗುತ್ತಾರೆ ಎನ್ನಲಾಗಿತ್ತು. ಬಿಸಿಸಿಐ ಆಯ್ಕೆ ಸಮಿತಿ ರಾಹುಲ್​​ರನ್ನು ತಂಡದಿಂದ ಕೈಬಿಟ್ಟಿದೆ. ಎರಡೆರಡು ಆಘಾತಗಳ ನಡುವೆ ರಾಹುಲ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
— K L Rahul (@klrahul) May 29, 2024
ಇದೀಗ ಬೇಸರದಲ್ಲಿರುವ ಫೋಟೋವನ್ನು ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪಾರ್ಕ್​ ಒಂದರಲ್ಲಿ ವಾಕ್ ಮಾಡುತ್ತಿರುವ ಫೋಟೋ ಅದಾಗಿದೆ. ಅದರಲ್ಲಿ ಕೆ.ಎಲ್.ರಾಹುಲ್ ಅವರ ಮುಖ ನೋಡಿದ್ರೆ ಬೇಸರದಲ್ಲಿರೋದು ಗೊತ್ತಾಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಊಹೆ ಮಾಡಿಕೊಳ್ತಿದ್ದಾರೆ. ಅದರಲ್ಲೂ ಆರ್​ಸಿಬಿ ಅಭಿಮಾನಿಗಳು ಬೆಂಗಳೂರು ತಂಡಕ್ಕೆ ಸೇರಿಕೊಳ್ಳಿ. ನಾವು ಅವಮಾನವನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮತ್ತೊಂದು ರಹಸ್ಯ ಫೋಟೋ ಶೇರ್ ಮಾಡಿದ ಪಾಂಡ್ಯ ಪತ್ನಿ.. ಟಾಂಟ್ ಕೊಟ್ರಾ..?
We miss you in world cup #KL
— KUDALINGAM MUTHU (@KUDALINGAM49671) May 29, 2024
ಇನ್ನು ಕೆಲವರು ಟಿ20 ವಿಶ್ವಕಪ್​ ಉಲ್ಲೇಖಿಸಿ ಕಮೆಂಟ್ ಮಾಡಿದ್ದಾರೆ. ಖಂಡಿತವಾಗಿಯೂ ನಾವು, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ತಂಡದಲ್ಲಿ ಇರಬೇಕಿತ್ತು ಎಂದಿದ್ದಾರೆ. ಇನ್ನೂ ಕೆಲವರು ಗಾರ್ಡನ್​​ನಲ್ಲಿ ನಿಮ್ಮ ಬಟ್ಟೆಗಳು ಒದ್ದೆಯಾಗಿವೆ. ಮುಂದೆ ಭಾರತ ತಂಡಕ್ಕೆ ಆಯ್ಕೆ ಆಗ್ತೀರಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ