/newsfirstlive-kannada/media/post_attachments/wp-content/uploads/2023/12/Virat-Kohli_Test1.jpg)
ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದೆ. ಈ ಪ್ರತಿಷ್ಠಿತ ಟೆಸ್ಟ್ ಸರಣಿ ಗೆಲ್ಲೋಕೆ ಟೀಮ್ ಇಂಡಿಯಾ, ಯುವ ಆಟಗಾರರನ್ನೊಳಗೊಂಡ ಬಲಿಷ್ಟ ತಂಡವನ್ನೇ ಕಟ್ಟಿದೆ. ಯುದ್ಧಕ್ಕೆ ಸಿದ್ಧತೆ ನಡೆಸ್ತಿರೋ ಮ್ಯಾನೇಜ್ಮೆಂಟ್ಗೆ ಗೊಂದಲವೊಂದು ಬಿಡದೇ ಕಾಡ್ತಿದೆ. 4ನೇ ಸ್ಲಾಟ್ನಲ್ಲಿ ಆಡೋದ್ಯಾರು ಅನ್ನೋ ಪ್ರಶ್ನೆಗೆ ಪರ್ಫೆಕ್ಟ್ ಉತ್ತರವೇ ಸಿಗ್ತಿಲ್ಲ.
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಯುಗಾಂತ್ಯವಾಗಿದೆ. ಸುದೀರ್ಘ 14 ವರ್ಷಗಳ ಜರ್ನಿಗೆ ಗುಡ್ ಬೈ ಹೇಳಿ ತಿಂಗಳೇ ಕಳೆದಿವೆ. ಈಗ ವಿರಾಟ್ ಅಲಭ್ಯತೆಯಲ್ಲಿ ಮೊದಲ ಟೆಸ್ಟ್ ಸರಣಿಗೆ ಅಣಿಯಾಗ್ತಿರೋ ಟೀಮ್ ಇಂಡಿಯಾಗೆ ಹೊಸ ತಲೆನೋವು ಶುರುವಾಗಿದೆ. ನಂಬರ್ 4 ಸ್ಲಾಟ್ ಆಡೋದ್ಯಾರು ಎಂಬ ಪ್ರಶ್ನೆಗೆ ಪರ್ಫೆಕ್ಟ್ ಉತ್ತರವೇ ಸಿಗ್ತಿಲ್ಲ.
ಇದನ್ನೂ ಓದಿ: ಹನಿಮೂನ್ಗೆ ಬಂದ ಜೋಡಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.. ಭಾರೀ ಸಂಚಲನ ಸೃಷ್ಟಿಸಿದ್ದ ಕೇಸ್ಗೆ ಪತ್ನಿಯೇ ವಿಲನ್..!
ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿಯೊಂದಿಗೆ ನಂಬರ್ 4 ಸ್ಲಾಟ್ ಖಾಲಿಯಾಗಿದೆ. ಸಚಿನ್ ತೆಂಡುಲ್ಕರ್ ನಿವೃತ್ತಿಯ ಬಳಿಕ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದ ಕೊಹ್ಲಿ, ಟನ್ ಗಟ್ಟಲೇ ರನ್ ಹೊಡೆದಿದ್ರು. ಟೀಮ್ ಇಂಡಿಯಾದ ಬಲವನ್ನೇ ಹೆಚ್ಚಿಸಿದ್ದರು. ಇದೀಗ ವಿರಾಟ್ ಕೊಹ್ಲಿಯಿಂದ ತೆರವಾದ ಸ್ಥಾನದಲ್ಲಿ ಯಾರನ್ನು ಆಡಿಸೋದು ಎಂಬ ಪ್ರಶ್ನೆ ಟೀಮ್ ಮ್ಯಾನೇಜ್ಮೆಂಟ್ಗೆ ಕಾಡ್ತಿದೆ.
ಕಿಂಗ್ ಕೊಹ್ಲಿಯ ಸ್ಥಾನಕ್ಕೆ ಉತ್ತರವಾಗ್ತಾರಾ ಪ್ರಿನ್ಸ್..?
ಕಿಂಗ್ ಕೊಹ್ಲಿಯಿಂದ ತೆರವಾದ ಸ್ಲಾಟ್ಗೆ ಪ್ರಿನ್ಸ್ ಶುಭ್ಮನ್ ಪರ್ಫೆಕ್ಟ್ ಚಾಯ್ಸ್. ಯಾಕಂದ್ರೆ, ಟೆಕ್ನಿಕಲಿ ವಿರಾಟ್ ಕೊಹ್ಲಿಯನ್ನೇ ಹೋಲುವ ಶುಭ್ಮನ್, ಪ್ರತಿ ಕಂಡೀಷನ್ಸ್ನ ಅಡ್ಜೆಸ್ಟ್ ಮಾಡಿಕೊಳ್ಳಬಲ್ಲರು. ಆರಂಭದಲ್ಲಿ ಓಪನರ್ ಆಗಿದ್ದ ಗಿಲ್, ಈಗ 3ನೇ ಕ್ರಮಾಂಕದಲ್ಲಿ ಆಡ್ತಿದ್ದಾರೆ. ಕೊಹ್ಲಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದಾರೆ. ಹೀಗಾಗಿ ಶುಭ್ಮನ್ನ 4ನೇ ಸ್ಲಾಟ್ನಲ್ಲಿ ಆಡಿಸೋ ಲೆಕ್ಕಾಚಾರ ಮ್ಯಾನೇಜ್ಮೆಂಟ್ ವಲಯದಲ್ಲಿ ನಡೀತಿದೆ. ನಾಯಕನಾಗಿರುವ ಶುಭ್ಮನ್, 4ನೇ ಕ್ರಮಾಂಕದಲ್ಲಿ ಆಡಿದ್ರೆ ಓತ್ತಡವೂ ಕಡಿಮೆ ಅನ್ನೋ ಲೆಕ್ಕಾಚಾರವೂ ಇದೆ.
ಇದನ್ನೂ ಓದಿ: IPL-2025 ಮೂಲಕ ಬಿಸಿಸಿಐ ಆದಾಯದಲ್ಲಿ ಭಾರೀ ಏರಿಕೆ.. ಈ ವರ್ಷ ಎಷ್ಟು ಸಾವಿರ ಕೋಟಿ ಗಳಿಸಿದೆ..?
4ನೇ ಕ್ರಮಾಂಕಕ್ಕೆ ‘ಕ್ರೈಸಿಸ್ ಮ್ಯಾನ್’ ರಾಹುಲ್..?
ಕೆ.ಎಲ್.ರಾಹುಲ್.. ಟೀಮ್ ಇಂಡಿಯಾದ ಕ್ರೈಸಿಸ್ ಮ್ಯಾನ್. ಟಾಪ್ ಆರ್ಡರ್ನಿಂದ ಲೋವರ್ ಆರ್ಡರ್ವರೆಗೆ ಎಲ್ಲಾ ಸ್ಲಾಟ್ನಲ್ಲೂ ಬ್ಯಾಟ್ ಬೀಸಬಲ್ಲ ಆಪತ್ಭಾಂದವ. ಕಷ್ಟಕರ ಸನ್ನಿವೇಶಗಳಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬಲ್ಲ ಕಲೆಗಾರ. ಇಂಗ್ಲೆಂಡ್ನಂಥ ಟಫ್ ಕಂಡೀಷನ್ಸ್ನಲ್ಲಿ ಆಡಿದ ಅನುಭವ ಹೊಂದಿರುವ ಕನ್ನಡಿಗ ರಾಹುಲ್, ಪರಿಸ್ಥಿತಿಗೆ ತಕ್ಕಂತೆ ಆಡಬಲ್ಲರು. 4ನೇ ಕ್ರಮಾಂಕದಲ್ಲಿ ಆಡಲು ರಾಹುಲ್ ಕೂಡ ಒಳ್ಳೆಯ ಆಯ್ಕೆನೇ.. ಆದ್ರೆ, ಕೆ.ಎಲ್.ರಾಹುಲ್, 4ನೇ ಕ್ರಮಾಂಕಕ್ಕೆ ಬಂದ್ರೆ ಓಪನರ್ ಯಾರ್ ಆಗ್ತಾರೆ ಅನ್ನೋ ಇನ್ನೊಂದು ಪ್ರಶ್ನೆ ಉದ್ಭವಾಗುತ್ತೆ.
ಕೊಹ್ಲಿ ಸ್ಥಾನ ತುಂಬ್ತಾರಾ ಕನ್ನಡಿಗ ಕರುಣ್?
ಗಿಲ್, ರಾಹುಲ್, ನಂಬರ್ 4 ಸ್ಲಾಟ್ನಲ್ಲಿ ಆಡಲ್ಲ ಎಂದಾದ್ರೆ ಟೀಮ್ ಮ್ಯಾನೇಜ್ಮೆಂಟ್ ಮುಂದಿರುವ ಕೊನೆ ಚಾಯ್ಸ್ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್. 8 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿರೋ ಕರುಣ್, ಕೂಲ್ ಅಂಡ್ ಕಾಮ್ ಬ್ಯಾಟಿಂಗ್ ನಡೆಸುವಲ್ಲಿ ಎತ್ತಿದೆ ಕೈ. ಟಾಪ್-5ನಲ್ಲಿ ಆಡಿದ ಅನುಭವ ಕರುಣ್ ನಾಯರ್ಗೆ ಇದೆ. ಇಂಗ್ಲೆಂಡ್ನ ಕೌಂಟಿಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಸಕ್ಸಸ್ ಕಂಡಿರುವ ಕರುಣ್, ಸದ್ಯ ಇಂಗ್ಲೆಂಡ್ ಲಯನ್ಸ್ ಎದುರಿನ ಅನಧಿಕೃತ ಟೆಸ್ಟ್ನಲ್ಲೂ ಒಳ್ಳೆ ಆಟವಾಡಿದ್ದಾರೆ. ಹೀಗಾಗಿ ಕರುಣ್ ನಾಯರ್, ವಿರಾಟ್ ಕೊಹ್ಲಿಯಿಂದ ತೆರವಾದ 4ನೇ ಸ್ಲಾಟ್ಗೆ ಪರ್ಫೆಕ್ಟ್ ಚಾಯ್ಸ್ ಅನ್ನೋದು ಹಲವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: KL ರಾಹುಲ್, ಕ್ಯಾಪ್ಟನ್ ಈಶ್ವರನ್ ಭರ್ಜರಿ ಹಾಫ್ಸೆಂಚುರಿ.. ಕನ್ನಡಿಗ ಕರುಣ್ ಔಟ್!
ಎಡಗೈ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ಗೂ 4ನೇ ಕ್ರಮಾಂಕದಲ್ಲಿ ಆಡೋ ಸಾಮರ್ಥ್ಯವಿದೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ 3ನೇ ಕ್ರಮಾಂಕದಲ್ಲಿ ಆಡಿರುವ ಅನುಭವ ಹೊಂದಿರುವ ಸುದರ್ಶನ್ಗೆ 4ನೇ ಕ್ರಮಾಂಕದಲ್ಲಿ ಆಡೋದು ಹೆಚ್ಚೆನೂ ಡಿಫರೆನ್ಸ್ ಮಾಡಲ್ಲ. ಕೊಹ್ಲಿ ಸ್ಥಾನವನ್ನ ಸಮರ್ಥವಾಗಿ ತುಂಬ್ತಾರಾ ಅಂದ್ರೆ ಅದಕ್ಕೆ ಉತ್ತರವಿಲ್ಲ.
ಮ್ಯಾನೇಜ್ಮೆಂಟ್ ನಾಲ್ವರು ಆಟಗಾರರನ್ನ 4ನೇ ಕ್ರಮಾಂಕಕ್ಕೆ ಶಾರ್ಟ್ಲಿಸ್ಟ್ ಮಾಡಿಕೊಂಡಿದೆ. ಇವರ ಪೈಕಿ ಯಾರನ್ನ ಕೊಹ್ಲಿ ಸ್ಥಾನದಲ್ಲಿ ಕಣಕ್ಕಿಳಿಸಬೇಕು ಅನ್ನೋದು ಇನ್ನೂ ಕ್ಲೀಯರ್ ಆಗಿಲ್ಲ. ಅಂತಿಮವಾಗಿ ಮ್ಯಾನೇಜ್ಮೆಂಟ್ ಯಾರನ್ನ ಆಡಿಸುತ್ತೆ.? ಕಾದು ನೋಡೋಣ.
ಇದನ್ನೂ ಓದಿ: KL ರಾಹುಲ್, ಕ್ಯಾಪ್ಟನ್ ಈಶ್ವರನ್ ಭರ್ಜರಿ ಹಾಫ್ಸೆಂಚುರಿ.. ಕನ್ನಡಿಗ ಕರುಣ್ ಔಟ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ