/newsfirstlive-kannada/media/post_attachments/wp-content/uploads/2025/03/KL_RAHUL-2.jpg)
ಯಾವ ಅಬ್ಬರನೂ ಇಲ್ಲ, ಘರ್ಜನೆಯೂ ಇಲ್ಲ. ಸೈಲೆಂಟ್ ಆಟ, ಎದುರಾಳಿಗಳಿಗೆ ಕಾಟ. ಕನ್ನಡಿಗ ಕೆ.ಎಲ್ ರಾಹುಲ್ ಏಕದಿನ ಟೂರ್ನಮೆಂಟ್ಗಳಲ್ಲಿ ಸೈಲೆಂಟ್ ಆಟಕ್ಕೆ ಎದುರಾಳಿ ಬೆಸ್ತು ಬಿದ್ದಿದ್ದಾರೆ. ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್, ಏಷ್ಯಾಕಪ್ ಟೂರ್ನಿ ಯಾವುದೇ ಇರಲಿ, ರಾಹುಲ್ ಮಾತಾಡಲ್ಲ.. ಸೈಲೆಂಟ್ ಸ್ಟಾರ್ ಬ್ಯಾಟ್ & ಪರ್ಫಾಮೆನ್ಸ್ ಸೌಂಡ್ ಮಾಡುತ್ತೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಫೈಟ್ನ ಫೀವರ್ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. ಸೂಪರ್ ಸಂಡೇ ನಡೆಯೋ ಬ್ಲಾಕ್ ಬಸ್ಟರ್ ಕದನದಲ್ಲಿ ಕಿವೀಸ್ ಕಿವಿ ಹಿಂಡಿ 2ನೇ ಚಾಂಪಿಯನ್ಸ್ ಟ್ರೋಫಿ ಗೆಲ್ಲೋ ವಿಶ್ವಾಸ ಟೀಮ್ ಇಂಡಿಯಾದಲ್ಲಿ ಮನೆ ಮಾಡಿದೆ. ಸಾಲಿಡ್ ಫಾರ್ಮ್ನಲ್ಲಿ ಜಬರ್ದಸ್ತ್ ಆಟವಾಡ್ತಿರೋ ಆಟಗಾರರು ಫೈನಲ್ ಫೈಟ್ನಲ್ಲಿ ಘರ್ಜಿಸಲು ಸಿದ್ಧತೆ ನಡೆಸ್ತಿದ್ದಾರೆ. ಟೀಮ್ ಇಂಡಿಯನ್ಸ್ ಆಟಗಾರ ಎದುರಾಳಿ ನ್ಯೂಜಿಲೆಂಡ್ ಪಾಳಯದಲ್ಲಿ ಈಗಾಗಲೇ ನಡುಕ ಹುಟ್ಟಿಸಿದೆ. ಅದ್ರಲ್ಲೂ ಟೀಮ್ ಇಂಡಿಯಾ ಸೈಲೆಂಟ್ ಸ್ಟಾರ್, ಕನ್ನಡಿಗ ಕೆ.ಎಲ್ ರಾಹುಲ್ ನ್ಯೂಜಿಲೆಂಡ್ ಪಡೆಯ ಚಿಂತೆ ಹೆಚ್ಚಿಸಿದ್ದಾರೆ.
ರಗಡ್ ಫಾರ್ಮ್ನಲ್ಲಿ ‘ಸೈಲೆಂಟ್ ಸ್ಟಾರ್’ ರಾಹುಲ್.!
ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಸೈಲೆಂಟ್ ಸ್ಟಾರ್. ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶದ ಹಿಂದೆ ಕನ್ನಡಿಗನ ಪರಿಶ್ರಮ ಅಪಾರ. ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಮೊಹ್ಮದ್ ಶಮಿ, ರೋಹಿತ್, ಶ್ರೇಯಸ್ ಇವರೆಲ್ಲರ ಹೆಸರು ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಸಖತ್ ಸದ್ದು ಮಾಡ್ತಿವೆ. ಇದ್ರ ನಡುವೆ ಕನ್ನಡಿಗ ರಾಹುಲ್ ಆಡ್ತಿರೋ ಕ್ಲಾಸಿಕ್ ಆಟವೇ ಈ ಟೂರ್ನಿಯಲ್ಲಿ ಮಾತಾಡ್ತಿದೆ. ಸೈಲೆಂಟ್ ಆಗಿ ತಾನಾಯ್ತು, ತನ್ನ ಆಟವಾಯ್ತು ಅಂತಾ ಆಡ್ತಿರೋ ರಾಹುಲ್ ಎದುರಾಳಿಗಳ ಪಾಲಿಗೆ ಸೈಲೆಂಟ್ ಪ್ಲೇಯರ್ ಆಗಿ ಬಿಟ್ಟಿದ್ದಾರೆ.
ಆಡಿದ 4 ಪಂದ್ಯಗಳ ಪೈಕಿ 3 ಇನ್ನಿಂಗ್ಸ್ಗಳಲ್ಲಿ ರಾಹುಲ್ ಬ್ಯಾಟಿಂಗ್ ಮಾಡಿದ್ದಾರೆ. 6ನೇ ಕ್ರಮಾಂಕದಲ್ಲಿ ಕಣಕ್ಕಿಳೀತಾ ಇರೋ ರಾಹುಲ್ ಫಿನಿಶಿಂಗ್ ರೋಲ್ನ ಪರ್ಫೆಕ್ಟ್ ಆಗಿ ಪ್ಲೇ ಮಾಡ್ತಿದ್ದಾರೆ. 106ರ ಸರಾಸರಿಯಲ್ಲಿ ರನ್ ಕಲೆ ಹಾಕಿರೋದು ರಾಹುಲ್ ಅದ್ಭುತ ಆಟಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಅದ್ಭುತ ಆಟವೇ ಕಿವಿಸ್ ಸಂಕಟಕ್ಕೆ ಕಾರಣವಾಗಿರೋದು.
ಏಕದಿನ ವಿಶ್ವಕಪ್ನಲ್ಲೂ ಬೊಂಬಾಟ್ ಬ್ಯಾಟಿಂಗ್.!
ಒನ್ ಡೇ ಫಾರ್ಮೆಟ್ನ ಬಿಗ್ ಟೂರ್ನಮೆಂಟ್ ಎಂದ್ರೆ, ಕನ್ನಡಿಗ ರಾಹುಲ್ ಬ್ಯಾಟ್ ಯಾವಗ್ಲೂ ಸಖತ್ ಸದ್ದು ಮಾಡುತ್ತೆ. ಸದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತವಾದ ಆಟವಾಡ್ತಿರೋ ರಾಹುಲ್, ಏಕದಿನ ವಿಶ್ವಕಪ್ನಲ್ಲೂ ಬೊಂಬಾಟ್ ಬ್ಯಾಟಿಂಗ್ ನಡೆಸಿದ್ರು. 2023ರ ಒನ್ ಡೇ ವರ್ಲ್ಡ್ಕಪ್ನಲ್ಲೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದ ಕನ್ನಡಿಗ ಟೀಮ್ ಇಂಡಿಯಾ ಬಲ ಹೆಚ್ಚಿಸಿದರು. ಅದಕ್ಕೂ ಹಿಂದಿನ 2019ರ ವಿಶ್ವಕಪ್ನಲ್ಲೂ ತನ್ನ ಆಟದಿಂದಲೇ ಎದುರಾಳಿಗಳ ಕಂಗೆಡಿಸಿದರು.
ODI ವಿಶ್ವಕಪ್ ಟೂರ್ನಿಗಳಲ್ಲಿ ರಾಹುಲ್
ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ 19 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಕೆ.ಎಲ್ ರಾಹುಲ್ 813 ರನ್ಗಳಿಸಿದ್ದಾರೆ. 58.07ರ ಸರಾಸರಿಯಲ್ಲಿ ರನ್ಗಳಿಸಿರುವ ಕನ್ನಡಿಗ 2 ಶತಕ, 4 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಏಷ್ಯಾಕಪ್ನಲ್ಲೂ ರಾಹುಲ್ ರೋರಿಂಗ್ ಪರ್ಫಾಮೆನ್ಸ್.!
ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಯಲ್ಲೂ ರಾಹುಲ್ ಅದ್ಭುತ ಆಟವಾಡಿದ್ದಾರೆ. ಕನ್ಸಿಸ್ಟೆಂಟ್ ಪರ್ಫಾಮೆನ್ಸ್ನಿಂದ ಮಿಂಚಿರುವ ಕನ್ನಡಿಗ ಬರೋಬ್ಬರಿ 76.33ರ ಸರಾಸರಿಯಲ್ಲಿ ರನ್ ಕೊಳ್ಳೆ ಹೊಡೆದಿದ್ದಾರೆ.
ಏಷ್ಯಾಕಪ್ ಟೂರ್ನಿಗಳಲ್ಲಿ ರಾಹುಲ್
ಒನ್ ಡೇ ಫಾರ್ಮೆಟ್ನ ಏಷ್ಯಾಕಪ್ ಟೂರ್ನಿಗಳಲ್ಲಿ 4 ಇನ್ನಿಂಗ್ಸ್ಗಳಲ್ಲಿ 229 ರನ್ ಕಲೆ ಹಾಕಿರುವ ರಾಹುಲ್, 76.33ರ ಬೊಂಬಾಟ್ ಸರಾಸರಿಯನ್ನ ಹೊಂದಿದ್ದಾರೆ. 1 ಶತಕ, 1 ಅರ್ಧಶತಕಗಳಿಸಿ ಮಿಂಚಿದ್ದಾರೆ.
ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಆಕಸ್ಮಿಕ ಸಾವು, ನೋವುಗಳಿಗೆ ಮಿಡಿದ ಸಿಎಂ; ನಿರೀಕ್ಷೆಗೂ ಮೀರಿದ ಪರಿಹಾರ..
ಚಾಂಪಿಯನ್ಸ್ ಟ್ರೋಫಿಯಲ್ಲಿ 106, ವಿಶ್ವಕಪ್ನಲ್ಲಿ 58.07, ಏಷ್ಯಾಕಪ್ನಲ್ಲಿ 76.33.. ಈ ರನ್ಗಳಿಕೆಯ ಸರಾಸರಿಯೇ ರಾಹುಲ್ ಬ್ಯಾಟಿಂಗ್ ವೈಭವವನ್ನ ಸಾರಿ ಸಾರಿ ಹೇಳ್ತಿದೆ. ಈಗ ಚಾಂಪಿಯನ್ಸ್ ಟ್ರೋಫಿಯಲ್ಲೀ ಅದೇ ಕನ್ಸಿಸ್ಟೆಂಟ್ ಆಟವನ್ನ ರಾಹುಲ್ ಆಡ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಬಿಗ್ ಸ್ಕೋರ್ ಕಲೆ ಹಾಕದಿದ್ರೂ, ತನ್ನ ಆಟದಿಂದ ತಂಡವನ್ನಂತೂ ಗೆಲುವಿನ ದಡ ಸೇರಿಸಿದ್ದಾರೆ. ಇನ್ಫ್ಯಾಕ್ಟ್.. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಫಿಯರ್ಲೆಸ್ ಆಟ ಆಡ್ತಿರೋದಕ್ಕೂ ರಾಹುಲ್ ಪರೋಕ್ಷ ಕಾರಣವಾಗಿದ್ದಾರೆ. ಕೆಳ ಕ್ರಮಾಂಕದಲ್ಲಿ ರಾಹುಲ್ ಇರೋದು ಟಾಪ್ ಆರ್ಡರ್ ಬ್ಯಾಟರ್ಗಳ ಆತ್ಮವಿಶ್ವಾಸ ಹೆಚ್ಚಿಸಿದೆ.
ಏಕದಿನ ಟೂರ್ನಮೆಂಟ್ಗಳ ಟ್ರ್ಯಾಕ್ ರೆಕಾರ್ಡ್, ಸದ್ಯದ ಹಾಲಿ ಫಾರ್ಮ್ ಫೈನಲ್ಗೂ ಮುನ್ನ ಕಿವೀಸ್ ಕಂಗೆಡಿಸಿದೆ. ರಾಹುಲ್ ಕಟ್ಟಿ ಹಾಕಲು ತಂತ್ರಗಳನ್ನ ಕಿವೀಸ್ ಪಡೆ ಹೆಣೆಯೋದಂತೂ ಪಕ್ಕಾ. ನ್ಯೂಜಿಲೆಂಡ್ನ ಆ ಟ್ರ್ಯಾಪ್ಗೆ ರಾಹುಲ್ ಬೀಳದಿರಲಿ. ಫೈನಲ್ಸ್ನಲ್ಲಿ ಕನ್ನಡಿಗ ಮಿಂಚಿನ ಪರ್ಫಾಮೆನ್ಸ್ ನೀಡಲಿ ಅನ್ನೋದು ಕ್ರಿಕೆಟ್ ಪ್ರೇಮಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ