Advertisment

ಕ್ರಿಕೆಟ್ ಕಾಶಿಯಲ್ಲಿ ಕನ್ನಡಿಗನ ಕ್ಲಾಸ್ ಆಟ.. ಭಾರತದಲ್ಲಿ ಬರೀ 1, ವಿದೇಶದಲ್ಲಿ 9 ಏನದು..?

author-image
Ganesh
Updated On
ಕ್ರಿಕೆಟ್ ಕಾಶಿಯಲ್ಲಿ ಕನ್ನಡಿಗನ ಕ್ಲಾಸ್ ಆಟ.. ಭಾರತದಲ್ಲಿ ಬರೀ 1, ವಿದೇಶದಲ್ಲಿ 9 ಏನದು..?
Advertisment
  • ಲಾರ್ಡ್ಸ್​ ಅಂಗಳದಲ್ಲಿ ಕನ್ನಡಿಗನ​ ಕಮಾಲ್
  • ಕ್ರಿಕೆಟ್​ ಕಾಶಿಯಲ್ಲಿ ರಾಹುಲ್​ ಶತಕ ವೈಭವ
  • ಲಾರ್ಡ್ಸ್​​ ಮೈದಾನದಲ್ಲಿ 2ನೇ ಶತಕ ಸಾಧನೆ

ಲಂಡನ್​ನ ಲಾರ್ಡ್ಸ್​ನಲ್ಲಿ ಕನ್ನಡಿಗ ಅಬ್ಬರ ಜೋರಾಗಿತ್ತು. ಆಂಗ್ಲ ಪಡೆದ ಬೌಲಿಂಗ್​​ ದಾಳಿಗೆ ಕೆ.ಎಲ್​ ರಾಹುಲ್​ ಕ್ಲಾಸ್​ ಆಟದಿಂದಲೇ ಆನ್ಸರ್​ ಕೊಟ್ರು. ಐಕಾನಿಕ್​ ಸ್ಟೇಡಿಯಂನಲ್ಲಿ ಸಾಲಿಡ್​ ಆಟವಾಡಿದ ರಾಹುಲ್​ ವಿಶೇಷ ಸಾಧನೆ ಮಾಡಿದ್ರು.

Advertisment

ಇಂಗ್ಲೆಂಡ್​ ಎದುರಿನ ಲಾರ್ಡ್ಸ್​ ಟೆಸ್ಟ್​​ನಲ್ಲಿ ಟೀಮ್​ ಇಂಡಿಯಾ ಸಾಲಿಡ್​ ಫೈಟ್​ಬ್ಯಾಕ್​ ಮಾಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ​ ಬ್ಯಾಟಿಂಗ್​ ಶುರು ಮಾಡಿದ ಆರಂಭದಲ್ಲಿ ಟೀಮ್​ ಇಂಡಿಯಾ ಹಿನ್ನಡೆಯ ಆತಂಕಕ್ಕೆ ಸಿಲುಕಿತ್ತು. ಅತ್ಯದ್ಭುತ ಕಮ್​​ಬ್ಯಾಕ್​ ಮಾಡಿದೆ. ಈ ಕಮ್​​​ಬ್ಯಾಕ್​​ ಹಿಂದಿನ ಕಲೆಗಾರ ಯಾರು ಗೊತ್ತಾ? ಒನ್​ ಅಂಡ್ ಒನ್ಲಿ ಕನ್ನಡಿಗ ಕೆ.ಎಲ್​ ರಾಹುಲ್​.

ಇದನ್ನೂ ಓದಿ: 5 ವಿಕೆಟ್​​​ ಬೇಟೆಯಲ್ಲಿ ಬೂಮ್ರಾನೇ ನಂ- 1.. ಕ್ರಿಕೆಟ್​ ದಿಗ್ಗಜರನ್ನೇ ಹಿಂದಿಕ್ಕಿದ ಸ್ಟಾರ್ ಪೇಸರ್​!

publive-image

387 ರನ್​ಗಳ ಬಿಗ್​ಸ್ಕೋರ್​ ಕಲೆ ಹಾಕಿ ಇಂಗ್ಲೆಂಡ್​ ಫಸ್ಟ್​ ಇನ್ನಿಂಗ್ಸ್​ನಲ್ಲಿ ಆಲೌಟ್​ ಆಯ್ತು. ಈ ದೊಡ್ಡ ಗುರಿಯನ್ನ ದಾಟಿ ಲೀಡ್​ ಪಡೆದುಕೊಳ್ಳೋ ಗುರಿ ಟೀಮ್​ ಇಂಡಿಯಾದ್ದಾಗಿತ್ತು. ಒಳ್ಳೆ ಆರಂಭನೇ ಸಿಗಲಿಲ್ಲ. ಯಶಸ್ವಿ ಜೈಸ್ವಾಲ್​ ಮಿಂಚಿ ಮರೆಯಾದ್ರೆ, ಕರುಣ್​ ನಾಯರ್​, ಶುಭ್​ಮನ್​ ಗಿಲ್​​ ಭರವಸೆಯನ್ನ ಹುಸಿಗೊಳಿಸಿದ್ರು. ಆಗ ತಂಡಕ್ಕಾಗಿ ಟೊಂಕ ಕಟ್ಟಿ ನಿಂತಿದ್ದು, ಕನ್ನಡಿಗ ರಾಹುಲ್​.

Advertisment

ಲಾರ್ಡ್ಸ್​ ಅಂಗಳದಲ್ಲಿ ಕನ್ನಡಿಗನ​ ಕಮಾಲ್

ಆರಂಭಿಕನಾಗಿ ಕಣಕ್ಕಿಳಿದ ರಾಹುಲ್​​ ಕ್ರಿಕೆಟ್​ ಕಾಶಿಯಲ್ಲಿ ಕ್ಲಾಸ್​ ಇನ್ನಿಂಗ್ಸ್​ ಕಟ್ಟಿದ್ರು. ಒಂದು ಕಡೆ ವಿಕೆಟ್​ ಬೀಳ್ತಾ ಇದ್ರೆ, ಇನ್ನೊಂದು ತುದಿಯಲ್ಲಿ ಕ್ರಿಸ್​​​ ಕಚ್ಚಿ ನಿಂತಿದ್ರು. ಎಚ್ಚರಿಕೆ ಆಟದಿಂದಲೇ ಇಂಗ್ಲೆಂಡ್​ ಬೌಲಿಂಗ್​ ದಾಳಿಯನ್ನ ಹಿಮ್ಮೆಟ್ಟಿಸಿದ ರಾಹುಲ್​​, ಕ್ಲಾಸಿಕ್​ ಬ್ಯಾಟಿಂಗ್​ ನಡೆಸಿದ್ರು. ಇಂಜುರಿಯ ನೋವಿನ ನಡುವೆ ನರಳಾಡ್ತಿದ್ದ ರಿಷಭ್​ ಪಂತ್​ ಜೊತೆಗೆ ಅದ್ಭುತ ಆಟವಾಡಿ ತಂಡಕ್ಕೆ ಆಸರೆಯಾದ್ರು.

ಕ್ರಿಕೆಟ್​ ಕಾಶಿಯಲ್ಲಿ ರಾಹುಲ್​ ಶತಕ ವೈಭವ

2ನೇ ದಿನದಾಟದಲ್ಲಿ 97 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿ ಅಜೇಯರಾಗುಳಿದಿದ್ದ ರಾಹುಲ್​, 3ನೇ ದಿನದಾಟದಲ್ಲೂ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ಕ್ಲಾಸ್​ ಆಟದಿಂದಲೇ ರಾಹುಲ್​ ಬ್ಯಾಟ್​​ ಸೌಂಡ್​ ಮಾಡ್ತು. ತಾಳ್ಮೆಯಿಂದ ರಕ್ಷಣಾತ್ಮಕ ಆಟವಾಡಿದ ಕನ್ನಡಿಗ ರನ್​ ಕೊಳ್ಳೆ ಹೊಡೆದ್ರು. 176 ಎಸೆತಗಳಲ್ಲಿ ಕ್ರಿಕೆಟ್​ ಕಾಶಿಯಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ರು. ಐಕಾನಿಕ್​ ವೆನ್ಯೂನಲ್ಲಿ ಟೆಸ್ಟ್​ ಕ್ರಿಕೆಟ್​​ನ 10ನೇ ಸೆಂಚುರಿ ಪೂರೈಸಿದ್ರು.

ಕ್ರಿಕೆಟ್​ ಕಾಶಿಯಲ್ಲಿ ರಾಹುಲ್​ 2ನೇ ಶತಕ ಸಾಧನೆ..!

ಐಕಾನಿಕ್​ ಲಾರ್ಡ್ಸ್​ ಸ್ಟೇಡಿಯಂನಲ್ಲಿ ಒಂದು ಟೆಸ್ಟ್ ಶತಕ ಸಿಡಿಸಿದ್ರೆ ಸಾಕು ಕರಿಯರ್​​ ಸಾರ್ಥಕ ಅನ್ನೋದು ಎಲ್ಲಾ ಕ್ರಿಕೆಟರ್​ಗಳ ಮನದ ಮಾತು. ಸುನಿಲ್​ ಗವಾಸ್ಕರ್​, ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ.. ಟೀಮ್​ ಇಂಡಿಯಾದ ಈ ಮೂರು ತಲೆಮಾರಿನ ದಿಗ್ಗಜರಿಗೆ ಒಂದೇ ಒಂದು ಬಾರಿ ಕೂಡ ಈ ಸಾಧನೆ ಮಾಡೋಕೆ ಆಗಿಲ್ಲ. ಕೆ.ಎಲ್​ ರಾಹುಲ್​ ಒಂದಲ್ಲ.. ಎರಡು ಬಾರಿ ಲಾರ್ಡ್ಸ್​​​ ಟೆಸ್ಟ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

Advertisment

ಇದನ್ನೂ ಓದಿ: ಕೇವಲ ಒಂದು ರನ್​ ಅಂತರದಲ್ಲಿ 3 ವಿಕೆಟ್ ಪತನ.. ಮೊದಲ ಇನ್ನಿಂಗ್ಸ್​ ಟೈನಲ್ಲಿ ಅಂತ್ಯ..!

ಭಾರತದಲ್ಲಿ 1, ವಿದೇಶದಲ್ಲಿ 9 ಟೆಸ್ಟ್​ ಶತಕ..!

ಕೆ.ಎಲ್​ ರಾಹುಲ್​ರ ಟೆಸ್ಟ್​ನ ಟ್ರ್ಯಾಕ್​​ ರೆಕಾರ್ಡ್​​ ಸಖತ್​ ಇಂಟರೆಸ್ಟಿಂಗ್​ ಇದೆ. ವಿದೇಶಿ ಕಂಡಿಷನ್ಸ್​ನಲ್ಲಿ ಬ್ಯಾಟಿಂಗ್​ ನಡೆಸೋದು ಉಳಿದ ಬ್ಯಾಟ್ಸ್​ಮನ್​ಗಳಿಗೆ ಕಷ್ಟವಾದ್ರೆ, ರಾಹುಲ್​ ಪಾಲಿಗದು ಸಿಕ್ಕಾಪಟ್ಟೆ ಈಸೀ. ಭಾರತಕ್ಕಿಂತ ವಿದೇಶದಲ್ಲೇ ರಾಹುಲ್​ಗೆ ಸಕ್ಸಸ್​ ಸಿಕ್ಕಿದೆ. ರಾಹುಲ್​ ಈವರೆಗೆ ಟೆಸ್ಟ್​ನಲ್ಲಿ 10 ಶತಕ ಸಿಡಿಸಿದ್ದಾರೆ. ಈ ಪೈಕಿ 9 ಶತಕಗಳು ಬಂದಿರೋದು ವಿದೇಶದಲ್ಲಿ.

publive-image
KL ರಾಹುಲ್​ ವಿದೇಶಿ ಪಿಚ್​​ಗಳಲ್ಲಿ ಟೀಮ್​ ಇಂಡಿಯಾದ ಒನ್​​ ಆಫ್​ ದ ಸಕ್ಸಸ್​ಫುಲ್​ ಬ್ಯಾಟರ್​ ಅನ್ನೋದ್ರಲ್ಲಿ ಡೌಟೇ ಇಲ್ಲ. ಈವರೆಗೆ ಇಂಗ್ಲೆಂಡ್​ 4 ಶತಕ ಸಿಡಿಸಿರೋ ರಾಹುಲ್​, ಸೌತ್​ ಆಫ್ರಿಕಾದಲ್ಲಿ 2, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್​ ಇಂಡಿಸ್​ನಲ್ಲಿ 1 ಸೆಂಚುರಿ ಬಾರಿಸಿದ್ದಾರೆ. ಇಂಗ್ಲೆಂಡ್​ ಟೂರ್​​ನಲ್ಲಿ ಸಾಲಿಡ್​ ಟಚ್​ನಲ್ಲಿರೋ ರಾಹುಲ್​ ಲಾರ್ಡ್ಸ್​ ಅಂಗಳದಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಕುಸಿದ ತಂಡಕ್ಕೆ ಚೇತರಿಕೆ ನೀಡಿದ್ದಾರೆ. ಕನ್ನಡಿಗನ ಕ್ಲಾಸ್​ ಆಟ ಹೀಗೆ ಮುಂದುವರೆಯಲಿ.

Advertisment

ಇದನ್ನೂ ಓದಿ: ರವಿಚಂದ್ರನ್ ಹೇಳಿದ ಶಿಲ್ಪಾ ಶೆಟ್ಟಿ ಸೀರೆ ಕಥೆ.. ಆ ದಿನಗಳ ಮೆಲುಕು ಹಾಕಿದ ಪ್ರೀತ್ಸೋದ್ ತಪ್ಪಾ ಜೋಡಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment