/newsfirstlive-kannada/media/post_attachments/wp-content/uploads/2025/05/KL-RAHUL-10.jpg)
ಗುಜರಾತ್ ಟೈಟನ್ಸ್ ವಿರುದ್ಧ ಕನ್ನಡಿಗ ಕೆ.ಎಲ್.ರಾಹುಲ್ ಶತಕ ಬಾರಿಸಿ ಮಿಂಚಿದ್ದಾರೆ. ದೆಹಲಿಯ ಜೇಟ್ಲಿ ಸ್ಟೇಡಿಯಂನಲ್ಲಿ ಇಂದು ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಆಗಿವೆ. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಕಳೆದುಕೊಂಡು 199 ರನ್ಗಳಿಸಿದೆ.
ಕನ್ನಡಿಗ ಕೆಎಲ್ ರಾಹುಲ್ ಶತಕ..
ಡೆಲ್ಲಿ ಕ್ಯಾಪಿಟಲ್ಸ್ ಪರ ರಾಹುಲ್ ಇಂದು ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದರು. 60 ಬಾಲ್ನಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. 170 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ರಾಹುಲ್, 4 ಸಿಕ್ಸರ್, 12 ಬೌಂಡರಿ ಬಾರಿಸಿ ಶತಕ ಪೂರೈಸಿದರು. ಒಟ್ಟು 65 ಬಾಲ್ ಆಡಿರುವ ರಾಹುಲ್ 112 ರನ್ಗಳಿಸಿದರು.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ಗೆ ಮತ್ತೊಂದು ಗೆಲುವು, ಆದರೂ ಪ್ಲೇ-ಆಫ್ ಎಂಟ್ರಿ ಖಚಿತವಾಗಿಲ್ಲ..!
ಡೆಲ್ಲಿ ಪರ ಅಭಿಷೇಕ್ ಪೋರೆಲ್ 30 ರನ್ ಗಳಿಸಿದರು. ಕ್ಯಾಪ್ಟನ್ ಅಕ್ಸರ್ ಪಟೇಲ್ 25 ರನ್ಗಳ ಕಾಣಿಕೆ ನೀಡಿದರು. ಇನ್ನು ಗುಜರಾತ್ ಟೈಟನ್ಸ್ಗೆ ಗೆಲ್ಲಲು 200 ರನ್ಗಳ ಅಗತ್ಯ ಇದೆ. ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಗೆಲುವು ಮುಖ್ಯ. ಒಂದು ವೇಳೆ ಗುಜರಾತ್ ಟೈಟನ್ಸ್ ಗೆದ್ದರೆ, ಪ್ಲೇ-ಆಫ್ ಪ್ರವೇಶ ಮಾಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ, ಐಪಿಎಲ್ ಟ್ರೋಫಿಗಾಗಿ ಡೆಲ್ಲಿ ನಡೆಸ್ತಿರುವ ಹೋರಾಟ ಜೀವಂತವಾಗಿರಲಿದೆ.
ಇದನ್ನೂ ಓದಿ: ಅಂತಿಮ ಹಂತ ತಲುಪಿದ್ದರೂ ಪ್ಲೇ-ಆಫ್ ಬಗ್ಗೆ ಕ್ಲಾರಿಟಿನೇ ಇಲ್ಲ.. 5 ತಂಡ, 4 ಸ್ಥಾನ..! RCB ಕತೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್