/newsfirstlive-kannada/media/post_attachments/wp-content/uploads/2024/08/KL_RAHUL_NEW-1.jpg)
ಇತ್ತೀಚೆಗೆ ಪರ್ತ್ ಇಂಟರನ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಅವರು ತಮ್ಮ ಫುಟ್ಬಾಲ್ ಕೌಶಲ್ಯ ಪ್ರದರ್ಶಿಸಿದ್ರು.
ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ತಮ್ಮ ಕಾಲುಗಳನ್ನು ಬಳಸಿ ಚೆಂಡನ್ನು ಕೈಗೆ ತೆಗೆದುಕೊಂಡರು. ರಾಹುಲ್ ಥೇಟ್ ಫುಟ್ಬಾಲ್ ಪ್ಲೇಯರ್ ರೀತಿ ಕ್ರಿಕೆಟ್ ಚೆಂಡಿನೊಂದಿಗೆ ಆಡಿದ್ದು ಎಲ್ಲರನ್ನು ಅಚ್ಚರಿ ಮೂಡಿಸಿತ್ತು. ಕನ್ನಡಿಗ ಈ ಕೌಶಲ್ಯಕ್ಕೆ ಆಸ್ಟ್ರೇಲಿಯಾದ ಕಾಮೆಂಟೇಟರ್ಸ್ಗಳ ಅಚ್ಚರಿಪಟ್ಟರು. ಈ ಬೆನ್ನಲ್ಲೇ ರಾಹುಲ್ ಪೋಸ್ಟ್ ಮಾಡಿರೋ ಇನ್ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕನಿಗೆ ರಾಹುಲ್ ಸಂದೇಶ
ತಮ್ಮ ಫುಟ್ಬಾಲ್ ಆಟದ ಕೌಶಲ್ಯದ ವಿಡಿಯೋ ಕ್ಲಿಪ್ ಇನ್ಸ್ಟಾ ಸ್ಟೋರಿಯಲ್ಲಿ ಹಾಕಿದ್ದ ರಾಹುಲ್ ಅವರು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕ ಪಾರ್ಥ್ ಜಿಂದಾಲ್ ಅವರನ್ನು ಟ್ಯಾಗ್ ಮಾಡಿ ಬೆಂಗಳೂರು ಎಫ್ಸಿ ತಂಡದಲ್ಲಿ ಓಪನಿಂಗ್ ಇದೆಯಾ? ಎಂದು ಕೇಳಿದ್ದಾರೆ. ಈ ಇನ್ಸ್ಟಾ ಸ್ಟೋರಿ ಸಖತ್ ಸುದ್ದಿಯಾಗಿದೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಎಲ್ಲಾ ಐಪಿಎಲ್ ತಂಡಗಳು ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಬಿಡ್ ಮಾಡುವ ಮೂಲಕ ಬಲಿಷ್ಠ ತಂಡಗಳನ್ನು ಕಟ್ಟಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಬರೋಬ್ಬರಿ 14 ಕೋಟಿ ನೀಡಿ ಖರೀದಿಸಿದೆ. ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಯಾರಿಗೆ? ಅನ್ನೋ ಚರ್ಚೆ ಶುರುವಾಗಿದೆ.
ಐಪಿಎಲ್ ಮೆಗಾ ಹರಾಜಿಗೆ ಮುನ್ನ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಕರೆತಂದು ಆರ್‌ಸಿಬಿ ತಂಡದ ನಾಯಕ ಪಟ್ಟ ಕಟ್ಟಲಾಗುತ್ತದೆ ಎನ್ನುವ ಚರ್ಚೆ ಜೋರಾಗಿ ಕೇಳಿ ಬಂದಿತ್ತು. ಇದಷ್ಟೇ ಅಲ್ಲದೇ ಕೆ.ಎಲ್ ರಾಹುಲ್ ಕೂಡ ತವರಿನ ತಂಡದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ರು. ಹೀಗಾಗಿ ಮುಂದಿನ ಸೀಸನ್ಗೆ ರಾಹುಲ್ ಆರ್‌ಸಿಬಿ ಕ್ಯಾಪ್ಟನ್ ಆದ್ರೂ ಅಚ್ಚರಿಯಿಲ್ಲ ಎಂಬ ಚರ್ಚೆ ಜೋರಾಗಿತ್ತು. ಈಗ ರಾಹುಲ್ ಡೆಲ್ಲಿ ತಂಡದ ಪಾಲಾಗಿದ್ದಾರೆ.
ಇದನ್ನೂ ಓದಿ: IPL 2025: ಡೆಲ್ಲಿ ತಂಡದ ಕ್ಯಾಪ್ಟನ್ಸಿ ನಿರೀಕ್ಷೆಯಲ್ಲಿದ್ದ KL ರಾಹುಲ್ಗೆ ಬಿಗ್ ಶಾಕ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ