‘ಡ್ರೆಸ್ಸಿಂಗ್ ರೂಮ್​ನಿಂದ ಕ್ರೀಸ್​ವರೆಗೆ ಎಮೋಷನ್ಸ್ ಇವೆ’.. ಚಿನ್ನಸ್ವಾಮಿ ಸ್ಟೇಡಿಯಂ ಬಗ್ಗೆ KL ರಾಹುಲ್ ಭಾವುಕ ಆದ್ರಾ?

author-image
Bheemappa
Updated On
‘ಡ್ರೆಸ್ಸಿಂಗ್ ರೂಮ್​ನಿಂದ ಕ್ರೀಸ್​ವರೆಗೆ ಎಮೋಷನ್ಸ್ ಇವೆ’.. ಚಿನ್ನಸ್ವಾಮಿ ಸ್ಟೇಡಿಯಂ ಬಗ್ಗೆ KL ರಾಹುಲ್ ಭಾವುಕ ಆದ್ರಾ?
Advertisment
  • ಎಂ ಚಿನ್ನಸ್ವಾಮಿ ಮೈದಾನದಲ್ಲಿ ಹಳೆ ನೆನಪಿನ ಬಗ್ಗೆ ಏನು ಹೇಳಿದರು?
  • ನಿಮ್ಮೆಲ್ಲರನ್ನು ನೋಡಲು ನಾನು ಇಷ್ಟ ಪಡುತ್ತೇನೆ- ಕೆ.ಎಲ್ ರಾಹುಲ್
  • ಕೆ.ಎಲ್​ ರಾಹುಲ್ ಹೇರ್​ಸ್ಟೈಲ್​ ಬಗ್ಗೆ ಜಡೇಜಾ ಹೇಳಿರುವುದು ಏನು?

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಕಳೆದ 2 ದಿನಗಳಿಂದ ಉಭಯ ತಂಡಗಳು ಭರ್ಜರಿ ಅಭ್ಯಾಸ ನಡೆಸಿವೆ. ರೋಹಿತ್​ ಶರ್ಮಾ ನೇತೃತ್ವದ ಭಾರತ ತಂಡದ ಆಟಗಾರರು ಕಿವೀಸ್​ಗೆ ಟಕ್ಕರ್ ಕೊಡಲು ನೆಟ್ಸ್​ನಲ್ಲಿ ಬೆವರಿಳಿಸಿದ್ದಾರೆ. ಅಲ್ಲದೇ ತವರಿನಲ್ಲಿ ಟೆಸ್ಟ್ ಆಡುತ್ತಿರುವ ಕೆ.ಎಲ್ ರಾಹುಲ್ ಅವರು ಚಿನ್ನಸ್ವಾಮಿ ಸ್ಟೇಡಿಯಂ ಜೊತೆಗಿನ ತಮ್ಮ ಅನಿಸಿಕೆಗಳನ್ನು ಶೇರ್ ಮಾಡಿಕೊಂಡಿದ್ದಾರೆ.

publive-image

ಚಿನ್ನಸ್ವಾಮಿಗೆ ಕಮ್​ಬ್ಯಾಕ್ ಮಾಡುತ್ತಿರುವುದು ತುಂಬಾ ವಿಶೇಷವಾಗಿದೆ. ನಾನು ಹನ್ನೊಂದುವರೆ ವರ್ಷದ ಬಾಲಕನಾಗಿದ್ದಾಗ ಚಿನ್ನಸ್ವಾಮಿಯಲ್ಲಿ ಮೊದಲು ಬ್ಯಾಟ್ ಬೀಸಿದ್ದೆ. ಈಗ ನನಗೆ 32 ವರ್ಷ ಆಗಿವೆ. ಇಲ್ಲಿವರೆಗೆ ಸಾಕಷ್ಟು ಬದಲಾವಣೆಗಳು ಆಗಿವೆ. ಆವತ್ತು ಮೊದಲ ಬಾರಿಗೆ 11 ವರ್ಷದ ಬಾಲಕನಾಗಿ ಕ್ರಿಕೆಟ್​ ಆಡಿದ ಫೀಲಿಂಗ್ ಈಗಲೂ ಹಾಗೇ ಇದೆ. ಇಲ್ಲಿಗೆ ಬಂದಾಗ ಅದನ್ನು ನೆನಪು ಮಾಡಿಕೊಂಡೆ. ಡ್ರೆಸ್ಸಿಂಗ್ ರೂಮ್​ನಿಂದ ಕ್ರೀಸ್​ವರೆಗೂ ಸಾಕಷ್ಟು ಎಮೋಷನ್ಸ್​ ಇವೆ. ಅವೆಲ್ಲ ನೆನಪಾಗುತ್ತಿವೆ ಎಂದು ಹೇಳಿದ್ದಾರೆ.

ಕ್ರಿಕೆಟರ್ ಆದ ಮೇಲೆ ಚಿನ್ನಸ್ವಾಮಿಯಿಂದ ಜರ್ನಿ ಆರಂಭವಾಗಿದೆ. 13, 16, 19 ವರ್ಷದೊಳಗಿನ ಟೂರ್ನ್​ಮೆಂಟ್ ರಣಜಿ ಟ್ರೋಫಿ, ಐಪಿಎಲ್​, ಭಾರತ ತಂಡದಲ್ಲಿ ಆಡಿರುವುದೆಲ್ಲ ನೆನಪಿಸಿಕೊಂಡರೆ ರೋಮಾಂಚನ ಆಗುತ್ತದೆ. ವಿಶ್ವದ, ಭಾರತದ ಕ್ರಿಕೆಟ್ ಪ್ಲೇಯರ್ಸ್ ಬೆಂಗಳೂರಲ್ಲಿ ಐಪಿಎಲ್ ಸೇರಿದಂತೆ ಇತರೆ ಟೂರ್ನಿಯಲ್ಲಿ ಕ್ರಿಕೆಟ್ ಆಡಿ ಸಖತ್ ಎಂಜಾಯ್ ಮಾಡುತ್ತಾರೆ. ಹೀಗಾಗಿ ಬೆಂಗಳೂರನ್ನು ಬ್ಯೂಟಿಫುಲ್ ಸಿಟಿ ಎಂದು ಕರೆಯಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತ, ನ್ಯೂಜಿಲೆಂಡ್​ ಮಧ್ಯೆ ಮಹತ್ವದ ಟೆಸ್ಟ್​ ಸರಣಿ; ಟೂರ್ನಿಯಿಂದಲೇ ಸ್ಟಾರ್​ ಪ್ಲೇಯರ್ ಔಟ್​​​

publive-image

ರಣಜಿ ಟ್ರೋಫಿ ಆಡುವಾಗ ಚಿನ್ನಸ್ವಾಮಿ ಮೈದಾನದ ಕ್ಲಬ್​ ಹೌಸ್​ನ ಹಿಂದೆ ಇರುವ ಕ್ಯಾಂಟೀನ್​​ನಲ್ಲಿ ದೋಸೆ, ಟೀ, ಕಾಫಿಯನ್ನು ಗೆಳೆಯರ ಜೊತೆ ಸವಿದಿದ್ದೇನೆ. ಗಂಟೆ ಗಂಟ್ಟಲೇ ಕ್ಯಾಂಟೀನ್​ನಲ್ಲಿ ಸಮಯ ಕಳೆದಿದ್ದೇನೆ ಎಂದು ಹಳೆ ನೆನಪುಗಳನ್ನು ಮತ್ತೊಮ್ಮೆ ರಾಹುಲ್ ಮೆಲುಕು ಹಾಕಿದ್ದಾರೆ. ಇನ್ನು ಇದೇ ವೇಳೆ ಕನ್ನಡದಲ್ಲಿ ಮಾತನಾಡಿದ ಕೆ.ಎಲ್ ರಾಹುಲ್​, ಟೆಸ್ಟ್​ ಪಂದ್ಯ ನೋಡಲು ಎಲ್ಲರೂ ಸ್ಟೇಡಿಯಂಗೆ ಬನ್ನಿ. ಚಿನ್ನಸ್ವಾಮಿಯಲ್ಲಿ ಇಂಟರ್​ನ್ಯಾಷನಲ್​ ಪಂದ್ಯ ಜಾಸ್ತಿ ದಿನದಿಂದ ಆಡಿಲ್ಲ. ಫ್ಯಾನ್ಸ್ ಎಲ್ಲ ಎಕ್ಸೈಟ್ ಆಗಿರುತ್ತೀರಿ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾರತಕ್ಕೆ ಸಪೋರ್ಟ್ ಮಾಡಿ. ನಿಮ್ಮೆಲ್ಲರನ್ನು ನೋಡಲು ನಾನು ಇಷ್ಟ ಪಡುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.

ಇನ್ನು ಇದೇ ವೇಳೆ ಕೆ.ಎಲ್ ರಾಹುಲ್ ಅವರ ಲಾಂಗ್​ ಹೇರ್​ಸ್ಟೈಲ್​ ಕುರಿತು ಟೀಮ್ ಇಂಡಿಯಾದ ಆಲ್​ರೌಂಡರ್​ ಜಡೇಜಾ ಮಾತನಾಡಿದ್ದಾರೆ. ಕರ್ಲಿ ಹೇರ್​ ಮೆಂಟೇನ್ ಮಾಡುವುದು ತುಂಬಾ ಕಷ್ಟ ಇದೆ. ಆದರೆ ಕೆ.ಎಲ್ ರಾಹುಲ್ ಸಾಫ್ಟ್ ಹೇರ್ ಇರುವುದರಿಂದ ಮೆಂಟೇನ್ ಮಾಡುವುದು ಈಜಿ ಆಗಿದೆ ಎಂದರು.


">October 15, 2024

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment