newsfirstkannada.com

KL​​ ರಾಹುಲ್​ ಟೀಂ ಇಂಡಿಯಾಗೆ ಆಯ್ಕೆಯಾಗಲು ಕಾರಣವೇನು? ಹಿಂದಿನ ಉದ್ದೇಶವೇನು?

Share :

Published September 9, 2023 at 5:30pm

    ರಾಹುಲ್ ಕಮ್​ಬ್ಯಾಕ್, ತಂಡಕ್ಕೆ ತಪ್ಪದ ಸಂಕಷ್ಟ.!

    ಟೀಮ್ ಇಂಡಿಯಾದ ಹಾಟ್ ಟಾಪಿಕ್ ರಾಹುಲ್..!

    ಕೆ.ಎಲ್.ರಾಹುಲ್ ಆಯ್ಕೆಯ ಸುತ್ತ ಕಾಡ್ತಿವೆ ಪ್ರಶ್ನೆಗಳು..!

ಸದ್ಯ ಟೀಮ್ ಇಂಡಿಯಾದ ಹಾಟ್​ ಟಾಪಿಕ್ ವಿಚಾರ ಅಂದ್ರೆ, ಅದು ಕೆ.ಎಲ್.ರಾಹುಲ್ ಸೆಲೆಕ್ಷನ್​..! ಈತ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದೇ ತಡ ಟೀಮ್ ಇಂಡಿಯಾದಲ್ಲಿ ಹಲವು ಪ್ರಶ್ನೆಗಳು ತಂಡದಲ್ಲಿ ಹುಟ್ಟಿಕೊಂಡಿವೆ. ಅವುಗಳಿ ಉತ್ತರ ಸಿಗೋದು ಕಷ್ಟವಾಗಿದೆ. ಅಷ್ಟಕ್ಕೂ ಆ ಪ್ರಶ್ನೆಗಳು ಯಾವವು..? ಇಲ್ಲಿದೆ ನೋಡಿ..!

ಏಷ್ಯಾಕಪ್​ನ ಲೀಗ್​ ಸ್ಟೇಜ್ ಮುಗಿಸಿರುವ ಟೀಮ್ ಇಂಡಿಯಾ, ಈಗ ಸೂಪರ್-4​ ಹಣಾಹಣಿಗೆ ಸಜ್ಜಾಗ್ತಿದೆ. ಸೂಪರ್-4ನ ಮೊದಲ ಪಂದ್ಯದಲ್ಲೇ ಬದ್ಧವೈರಿ ಪಾಕ್ ಎದುರು ಹೋರಾಟಕ್ಕೆ ಇಳಿಯುತ್ತಿದ್ದು, ಗೆಲ್ಲುವ ಜಿದ್ದಿನಲ್ಲಿದೆ. ಇದೇ ವೇಳೆ ಕೆ.ಎಲ್.ರಾಹುಲ್, ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡಿರೋದು ತಂಡದ ಬಲವನ್ನ ಹೆಚ್ಚಿಸಿದೆ. ಆದ್ರೆ, ಹೈ ಪ್ರೆಶರ್​​​​​​​​​ ಗೇಮ್​ನಲ್ಲಿ ಕಮ್​​ಬ್ಯಾಕ್​ ಮಾಡ್ತಿರುವ ರಾಹುಲ್​​​ ಮುಂದೆ ಸವಾಲುಗಳ ಬೆಟ್ಟವೇ ಇದೆ. ಅಷ್ಟೇ ಅಲ್ಲ.! ಹಲವು ಪ್ರಶ್ನೆಗಳನ್ನೇ ಉದ್ಭವಿಸುವಂತೆ ಮಾಡಿವೆ.

ರಾಹುಲ್​ ತಂಡಕ್ಕೆ ಎಂಟ್ರಿ..! ಎಕ್ಸಿಟ್ ಯಾರು..?

ಸದ್ಯ ಟೀಮ್ ಇಂಡಿಯಾಗೆ ಕಾಡ್ತಿರೋ ಮೊದಲ ಪಶ್ನೆಯೇ ಕೆ.ಎಲ್.ರಾಹುಲ್ ಎಂಟ್ರಿಯಾದ್ರೆ ಬೆಂಚ್ ಕಾಯೋದು ಯಾರು.? ಅನ್ನೋದು. ಈಗಾಗಲೇ ಫಸ್ಟ್​ ಚಾಯ್ಸ್​ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಅನ್ನೋದನ್ನ ಸ್ವತಃ ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಅಗರ್ಕರ್ ಹೇಳಿದ್ದಾರೆ. ಹೀಗಾಗಿ ರಾಹುಲ್​ಗೆ ತಂಡದಲ್ಲಿ ಸ್ಥಾನ ನೀಡುವುದಾದ್ರೆ, ಇಶಾನ್ ಕಿಶನ್ ಅಥವಾ ಶುಭ್​ಮನ್​ ಗಿಲ್​ ಇಬ್ಬರಲ್ಲಿ ಯಾರಿಗೆ ಕೊಕ್​ ಎಂಬ ಪ್ರಶ್ನೆ ಉದ್ಭವಿಸಿದೆ.

ಯಾವ ಸ್ಲಾಟ್​ನಲ್ಲಿ ಬ್ಯಾಟಿಂಗ್ ಮಾಡ್ತಾರೆ ರಾಹುಲ್​..?

ಸದ್ಯ ಎದುರಾಗಿರುವ 2ನೇ ಪ್ರಶ್ನೆಯೇ ಕೆ.ಎಲ್.ರಾಹುಲ್ ಬ್ಯಾಟಿಂಗ್ ಸ್ಲಾಟ್. ಓಪನರ್ & ಮಿಡಲ್ ಆರ್ಡರ್ ಬ್ಯಾಟ್ಸ್​ಮನ್ ಆಗಿ ಸಕ್ಸಸ್​ ಕಂಡಿರೋ ರಾಹುಲ್, ಸದ್ಯ 5ನೇ ಸ್ಲಾಟ್​ನ ಮೇನ್ ಪ್ಲೇಯರ್. ಆದರೆ, ರಾಹುಲ್ ಬದಲಿಗೆ ಸಿಕ್ಕ ಚಾನ್ಸ್​​​ನಲ್ಲಿ ಇಶಾನ್​​ ಮಿಂಚಿದ್ದಾರೆ. ಹೀಗಾಗಿ ಯಾವ ಸ್ಲಾಟ್​​ನಲ್ಲಿ ರಾಹುಲ್ ಬ್ಯಾಟಿಂಗ್ ಮಾಡ್ತಾರೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.

ಫ್ರೆಷರ್​ ಗೇಮ್​ಗೆ ಪ್ರಿಪೇರ್ ಆಗಿದ್ದಾರಾ..?

ಕೆ.ಎಲ್.ರಾಹುಲ್ ಏಕದಿನ ಫಾರ್ಮೆಟ್​ನಲ್ಲಿ ಬ್ಯಾಟ್ ಬೀಸಿ ಬರೋಬ್ಬರಿ 6 ತಿಂಗಳೇ ಕಳೆದಿವೆ. ಸ್ಪರ್ಧಾತ್ಮಕ ಕ್ರಿಕೆಟ್ ಆಡದ ಕೆ.ಎಲ್.ರಾಹುಲ್, ಜಸ್ಟ್​ ನೆಟ್ಸ್​ನಲ್ಲಿ ಮಾತ್ರ ತಮ್ಮ ಬ್ಯಾಟಿಂಗ್ ಪ್ರತಾಪ ತೋರಿದ್ದಾರೆ. ಆದ್ರೆ, ಕಮ್​ಬ್ಯಾಕ್ ಮಾಡ್ತಿರೋ ಪಂದ್ಯದಲ್ಲೇ ಕೆ.ಎಲ್.ರಾಹುಲ್ ಬದ್ಧವೈರಿ ಪಾಕ್ ಎದುರು ಸೆಣಸಾಡಬೇಕು. ಇಂಥಹ ಹೈಟೆನ್ಶನ್​ ಮ್ಯಾಚ್​ಗೆ ರಾಹುಲ್ ಮೆಂಟಲಿ ಸಜ್ಜಾಗಿದ್ದಾರಾ ಅನ್ನೋದೂ ಪ್ರಶ್ನೆಯಾಗಿದೆ.

ರಾಹುಲ್ ಕೀಪಿಂಗ್ ಮಾಡ್ತಾರಾ..? ಮಾಡಲ್ವಾ..?

ಫಸ್ಟ್​ ಚಾಯ್ಸ್ ವಿಕೆಟ್ ಕೀಪರ್ ಅಂತಾನೇ ಕೆ.ಎಲ್.ರಾಹುಲ್​ನ ಬಿಂಬಿಸಲಾಗ್ತಿದೆ. ಆದ್ರೆ, ಇಂಜುರಿಯಿಂದ ಕಮ್​ಬ್ಯಾಕ್ ಮಾಡಿರೋ ರಾಹುಲ್, 50 ಓವರ್ ಕೀಪಿಂಗ್​ ಜೊತೆ ಜೊತೆಗೆ ಬ್ಯಾಟಿಂಗ್ ಮಾಡೋದು ಸುಲಭದ ವಿಚಾರ ಅಲ್ವೇ ಅಲ್ಲ. ಇಂಡೋರ್ ನೆಟ್ಸ್​ನಲ್ಲಿ ಜಸ್ಟ್​ ಬ್ಯಾಟಿಂಗ್​ಗೆ ಮಾತ್ರ ಸಿಮೀತವಾಗಿದ್ದ ರಾಹುಲ್, ವಿಕೆಟ್ ಕೀಪಿಂಗ್ ಮಾಡುವಷ್ಟು ಸಮರ್ಥರಿದ್ದಾರಾ ಎಂಬ ಅನುಮಾನ ಇದ್ದೇ ಇದೆ.

ಹಳೆ ಶೇಪ್​ನಲ್ಲಿ ಇರ್ತಾರಾ ಕೆ.ಎಲ್.ರಾಹುಲ್..?

ಕೆ.ಎಲ್.ರಾಹುಲ್.. ಪಕ್ಕಾ ಕ್ಲಾಸ್ ಬ್ಯಾಟ್ಸ್​ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಆದರೆ, ಇಂಜುರಿಗೆ ತುತ್ತಾಗಿದ್ದ ಕೆ.ಎಲ್​​.ರಾಹುಲ್, ಮೊದಲಿನಷ್ಟೇ ಮೊನಚಾಗಿದ್ದಾರಾ ಅನ್ನೋ ಪ್ರಶ್ನೆ ಸಹಜವಾಗೇ ಕಾಡಲಿದೆ. ಒಟ್ಟಿನಲ್ಲಿ, ಕೆ.ಎಲ್.ರಾಹುಲ್ ಕಮ್​​ಬ್ಯಾಕ್​ನಿಂದ ತಂಡಕ್ಕೆ ಬಲ ಬಂತು ಅನ್ನೋದು ಒಂದೆಡೆಯಾದ್ರೆ, ಇನ್ನೊಂದೆಡೆ ಮ್ಯಾನೇಜ್​ಮೆಂಟ್​ ಸೆಲೆಕ್ಷನ್​ ಹೆಡ್ಡೇಕ್​ ಶುರುವಾಗಿರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KL​​ ರಾಹುಲ್​ ಟೀಂ ಇಂಡಿಯಾಗೆ ಆಯ್ಕೆಯಾಗಲು ಕಾರಣವೇನು? ಹಿಂದಿನ ಉದ್ದೇಶವೇನು?

https://newsfirstlive.com/wp-content/uploads/2023/08/KL_RAHUL-1.jpg

Load More