newsfirstkannada.com

×

ಐಪಿಎಲ್​ಗೂ ಮೊದಲು ಮಹಾಶಕ್ತಿಯ ಮೊರೆ ಹೋದ K.L ರಾಹುಲ್; ಕನ್ನಡಿಗ ಈ ಬಾರಿ ಹೋಗಿದ್ದೆಲ್ಲಿಗೆ..?

Share :

Published March 21, 2024 at 1:06pm

    IPLಗೂ ಮುನ್ನ ದೇವರ ಮೊರೆ ಹೋದ ರಾಹುಲ್​​

    ಕುಟುಂಬ ಸಮೇತ ನಂಬಿದ ದೇವರ ದರ್ಶನ

    ಕಳೆದ ವರ್ಷ ರಾಹುಲ್ ದಂಪತಿ ದೇಗುಲಕ್ಕೆ ಭೇಟಿ

ಕೆ.ಎಲ್.ರಾಹುಲ್​​​​ ಫುಲ್ ಫಿಟ್ ಆಗಿದ್ದಾರೆ. ಇನ್ನೇನಿದ್ರೂ ಅಖಾಡಕ್ಕೆ ಧುಮುಕಿ ಬೌಲರ್ಸ್​ ಬೆಂಡೆತ್ತೋದೊಂದೇ ಬಾಕಿ. ಆದರೆ ಐಪಿಎಲ್ ಅಖಾಡಕ್ಕೆ ಧುಮುಕುವ ಮುನ್ನ ಮಹಾಶಕ್ತಿಯ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಆ ಮಹಾಶಕ್ತಿ ಯಾವುದು?

ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಗಾಯಗೊಂಡ ಕೆ.ಎಲ್ ಸದ್ಯ ಫುಲ್​ ಫಿಟ್ ಆಗಿದ್ದಾರೆ. ದೇಶದಲ್ಲಿ ನಾಳೆಯಿಂದ ಐಪಿಎಲ್​​ ಹಬ್ಬ ಶುರುವಾಗಲಿದೆ. ರಾಹುಲ್​ ಶೀಘ್ರದಲ್ಲೆ ಲಕ್ನೋ ಸೂಪರ್​​​​​​​ ಜೈಂಟ್ಸ್​​ ಕ್ಯಾಂಪ್​​​​ ಸೇರಿಕೊಂಡು, ಐಪಿಎಲ್​​​​​​​​​​​​ ಸಂಗ್ರಾಮಕ್ಕೆ ರಣಕಹಳೆ ಊದಲಿದ್ದಾರೆ. ಅದಕ್ಕೂ ಮುನ್ನ ಸ್ಟಾರ್ ಬ್ಯಾಟ್ಸ್​​​ಮನ್ ದೇವರ ಮಂತ್ರ ಜಪಿಸಿದ್ದಾರೆ.

IPLಗೂ ಮುನ್ನ ದೇವರ ಮೊರೆ ಹೋದ ರಾಹುಲ್​​
ಸದ್ಯಕ್ಕಂತೂ ರಾಹುಲ್​​ ಫುಲ್​​ ಫಿಟ್​ ಅಂಡ್ ಫೈನ್ ಆಗಿದ್ದಾರೆ ನಿಜ. ಆದರೆ ಐಪಿಎಲ್​ ಲೋಕದಲ್ಲಿ ಘರ್ಜಿಸಲು ಇಷ್ಟೆ ಸಾಲಲ್ಲ. ದೇವರ ಬಲವು ಬೇಕು. ಇದನ್ನರಿತ ಕೆ.ಎಲ್.ರಾಹುಲ್​ ಪವಿತ್ರ 12 ಜೋರ್ತಿಲಿಂಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ಮಂದಿರಕ್ಕೆ ರಾಹುಲ್ ಕುಟುಂಬಸ್ಥರ ಜತೆ ಭೇಟಿ ನೀಡಿದ್ರು. ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ ರಾಹುಲ್ ಹಾಗೂ ಅವರ ತಂದೆ-ತಾಯಿ ತಮ್ಮ ಇಷ್ಠಾರ್ಥ ನೆರವೇರಿಸುವಂತೆ ಭಕ್ತಿಯಿಂದ ಬೇಡಿಕೊಂಡರು.

ರಾಹುಲ್​ ಕುಟುಂಬಸ್ಥರ ಜೊತೆ ಮಂಗಳವಾರ ರಾತ್ರಿ ದೇಗುಲಕ್ಕೆ ಭೇಟಿ ನೀಡಿದ್ರು. ಈ ವೇಳೆ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿ ರಾಹುಲ್​ರನ್ನ ಆತ್ಮೀಯವಾಗಿ ಬರಮಾಡಿಕೊಂಡ್ರು. ರಾಹುಲ್ ದೇವಸ್ಥಾನದಿಂದ ನಿರ್ಗಮಿಸುವ ವೇಳೆ ಅರ್ಚಕರು ಫೋಟೋ ತೆಗೆದುಕೊಂಡಿದ್ದಾರೆ.

ಮಹಾಕಾಳೇಶ್ವರನ ಮಹಾಭಕ್ತ ರಾಹುಲ್​​​..!
ರಾಹುಲ್​​​​ ಉಜ್ಜಯಿನಿ ಮಹಾಕಾಳೇಶ್ವರ ದರ್ಶನ ಪಡಿತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಪತ್ನಿ ಆಥಿಯಾ ಶೆಟ್ಟಿ ಜತೆಗೆ ದೇಗುಲಕ್ಕೆ ಭೇಟಿ ನೀಡಿ, ಮಹಾಕಾಳನ ಭಸ್ಮಾರತಿ ಪೂಜೆಯಲ್ಲಿ ಭಾಗಿಯಾಗಿದ್ರು. ಭಸ್ಮಾರತಿ ನಂತರ ರಾಹುಲ್-ಆಥಿಯ ಜೋಡಿ, ನಂದಿ ಬಳಿ ಕುಳಿತು ಕೆಲ ಕಾಲ ಏಕಭಕ್ತಿಯಿಂದ ಧ್ಯಾನ ಮಾಡಿದ್ರು. ನಂತರ ನವಗ್ರಹಳಿಗೂ ಪೂಜಾ ಸಲ್ಲಿಸಿದ ನವವಿವಾಹಿತ ಜೋಡಿ, ದೇವಸ್ಥಾನ ಪ್ರದಕ್ಷಿಣೆ ಹಾಕಿದ್ದರು.

IPLನಲ್ಲಿ ರಾಹುಲ್ ಕೈಹಿಡಿತಾನಾ ಮಹಾಕಾಳೇಶ್ವರ..?
ಸದ್ಯಕ್ಕಂತೂ ಕೆ.ಎಲ್.ರಾಹುಲ್​ ಗುಡ್​ ಟಚ್​​ನಲ್ಲಿದ್ದಾರೆ. ಇಂಜುರಿಯಿಂದ ಗುಣಮುಖರಾಗಿ ಐಪಿಎಲ್​​ ಬ್ಯಾಟಲ್​ನಲ್ಲಿ ರನ್ ಕೊಳ್ಳೆಯಲು ಎದುರು ನೋಡ್ತಿದ್ದಾರೆ. ಅದಕ್ಕೂ ಮುನ್ನ ಮಹಾಕಾಳೇಶ್ವರ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆರ್ಭಟಿಸುವ ಇರಾದೆಯಲ್ಲಿರೋ ರಾಹುಲ್​​ ರನ್ನ ಉಜ್ಜಯಿನಿಯ ಮಹಾಕಾಳೇಶ್ವರ ಕೈಹಿಡಿತಾನಾ ? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಐಪಿಎಲ್​ಗೂ ಮೊದಲು ಮಹಾಶಕ್ತಿಯ ಮೊರೆ ಹೋದ K.L ರಾಹುಲ್; ಕನ್ನಡಿಗ ಈ ಬಾರಿ ಹೋಗಿದ್ದೆಲ್ಲಿಗೆ..?

https://newsfirstlive.com/wp-content/uploads/2024/03/KL-RAHUL.jpg

Load More