KL ರಾಹುಲ್​ ಪಾಲಿಗೆ ಬಾಕ್ಸಿಂಗ್ ‘ಡೇ’ ಟೆಸ್ಟ್ ಸ್ಪೆಷಲ್.. ಧೋನಿಯಿಂದ ಇದನ್ನ ಪಡೆದಿದ್ದ ಕನ್ನಡಿಗ

author-image
Bheemappa
Updated On
KL ರಾಹುಲ್​ ಪಾಲಿಗೆ ಬಾಕ್ಸಿಂಗ್ ‘ಡೇ’ ಟೆಸ್ಟ್ ಸ್ಪೆಷಲ್.. ಧೋನಿಯಿಂದ ಇದನ್ನ ಪಡೆದಿದ್ದ ಕನ್ನಡಿಗ
Advertisment
  • ಭಾರತದ ಈ ಕ್ರಿಕೆಟರ್ಸ್ ರೆಕಾರ್ಡ್ ಬ್ರೇಕ್ ಮಾಡ್ತಾರಾ ರಾಹುಲ್..?
  • ಬಾಕ್ಸಿಂಗ್ ಡೇ ಟೆಸ್ಟ್​ಗೂ ಕೆ.ಎಲ್ ರಾಹುಲ್​ಗೂ ಇದೆ ವಿಶೇಷ ನಂಟು
  • KL ರಾಹುಲ್ ‘ಟೆಸ್ಟ್​’ ಕರಿಯರ್ ಆರಂಭಿಸಿ ಎಷ್ಟು ವರ್ಷ ಆಯಿತು?

ಮೆಲ್ಬರ್ನ್ ಬಾಕ್ಸಿಂಗ್ ಡೇ ಟೆಸ್ಟ್​. ಇದು ಕೆ.ಎಲ್.ರಾಹುಲ್ ಡೇ. ಯಾಕಂದ್ರೆ, ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಬಾಸ್ ಅಲ್ಲ. ಕೆ.ಎಲ್.ರಾಹುಲ್​ ಕೂಡ ಬಾಕ್ಸಿಂಗ್ ಡೇ ಟೆಸ್ಟ್​ ಕಾ ಬಾಸ್.​ ಅದ್ಯಾಕೆ ಈ ಮಾತು ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಹೈ ಕ್ಲಾಸ್​ ಬ್ಯಾಟಿಂಗ್, ಪ್ಯೂರ್ ಟೆಕ್ನಿಕ್ ಆ್ಯಂಡ್ ಟೆಂಪರ್​ಮೆಂಟ್. ಸಾಲಿಡ್ ಡಿಫೆನ್ಸ್​. ಚಾಲೆಂಜಿಂಗ್ ಕಂಡೀಷನ್ಸ್​ಗೆ ತಕ್ಕಂತೆ ಚಾಲೆಂಜ್​ ಹಾಕುವ ಮೆಂಡ್​ಸೆಟ್. ಕ್ಲಾಸಿ ಕವರ್ ಡ್ರೈವ್ಸ್​​. ಆಸ್ಟ್ರೇಲಿಯನ್ ಪ್ರವಾಸದಲ್ಲಿ ಕೆ.ಎಲ್​ ರಾಹುಲ್​​, ಕ್ಲಾಸ್ ಬ್ಯಾಟಿಂಗ್​ನ ಝಲಕ್ ಇದು​​​​. ಕೆ.ಎಲ್.ರಾಹುಲ್​ರ ಇದೇ ಆಟ ಆಸ್ಟ್ರೇಲಿಯನ್ಸ್​ ಪಾಲಿನ ಟೆನ್ಶನ್ ಹೆಚ್ಚಿಸಿದೆ.

publive-image

ಪ್ರಸಕ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆ.ಎಲ್.ರಾಹುಲ್, ಕಾಂಗರೂಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಸಾಲಿಡ್ ಬ್ಯಾಟಿಂಗ್​ನಿಂದ ಎದುರಾಳಿ ಪಾಲಿಗೆ ವಿಲನ್ ಆಗ್ತಿರುವ ಕೆ.ಎಲ್.ರಾಹುಲ್​ಗೆ ಮೆಲ್ಬರ್ನ್​ನ ಬಾಕ್ಸಿಂಗ್ ಡೇ ಟೆಸ್ಟ್ ಮೋಸ್ಟ್ ಸ್ಪೆಷಲ್​.

ಧೋನಿ ಕೈಯಿಂದ ಕ್ಯಾಪ್ ಪಡೆದಿದ್ದ ರಾಹುಲ್

ಮೆಲ್ಬರ್ನ್ ಬಾಕ್ಸಿಂಗ್ ಡೇ ಟೆಸ್ಟ್​ಗೂ ಕೆ.ಎಲ್.ರಾಹುಲ್​ಗೂ ವಿಶೇಷ ನಂಟಿದೆ. ಯಾಕಂದ್ರೆ, ಕನ್ನಡಿಗ ಟೆಸ್ಟ್ ಕರಿಯರ್​ ಆರಂಭವಾಗಿದ್ದೇ ಮೆಲ್ಬರ್ನ್​ನ ಬಾಕ್ಸಿಂಗ್ ಡೇ ಟೆಸ್ಟ್​ನಿಂದ.. ​ 2014ರ ಡಿಸೆಂಬರ್.. ಅಂದ್ರೆ 10 ವರ್ಷಗಳ ಹಿಂದೆ ಇದೇ ಸ್ಟೇಡಿಯಂನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಧೋನಿ ಕೈಯಿಂದ ಕ್ಯಾಪ್ ಪಡೆದಿದ್ದ ರಾಹುಲ್, ಟೆಸ್ಟ್​​ ಕ್ರಿಕೆಟ್​​ಗೆ ಡೆಬ್ಯೂ ಮಾಡಿದ್ದರು. ಇದೀಗ ಅದೇ ಸ್ಟೇಡಿಯಂನಲ್ಲಿ ವೃತ್ತಿ ಜೀವನದ 10ನೇ ವರ್ಷಕ್ಕೆ ಕಾಲಿಡ್ತಿರುವ ರಾಹುಲ್, ಆ ದಿನವನ್ನು ಸ್ಮರಣೀಯವಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

ಕೆ.ಎಲ್.ರಾಹುಲ್ ಲವ್ಸ್​ ಬಾಕ್ಸಿಂಗ್ ಡೇ ಟೆಸ್ಟ್​..!

ಬಾಕ್ಸಿಂಗ್ ಡೇ ಟೆಸ್ಟ್​ ಮೂಲಕ ಕರಿಯರ್ ಆರಂಭಿಸಿದ್ದ ಕೆ.ಎಲ್.ರಾಹುಲ್​, ಡೆಬ್ಯೂ ಮ್ಯಾಚ್​ನಲ್ಲಿ ಫೇಲ್​ ಆದ್ರು. ಆದ್ರೆ, ಡೆಬ್ಯು ಮ್ಯಾಚ್ ಹೊರತು ಪಡೆಸಿದ್ರೆ, ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಕೆ.ಎಲ್.ರಾಹುಲ್ ಕಮಾಲ್ ಮಾಡಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಆಡಿರುವ 3 ಪಂದ್ಯಗಳ ಪೈಕಿ 2ರಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

2021ರಲ್ಲಿ ಸೌತ್ ಆಫ್ರಿಕಾ ಎದುರು ಸೆಂಚುರಿಯನ್​ನ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಅಮೋಘ ಶತಕ ಸಿಡಿಸಿದ್ದ ಕೆ.ಎಲ್.ರಾಹುಲ್​, ಟೀಮ್ ಇಂಡಿಯಾಗೆ ಗೆಲುವಿನ ಕಾಣಿಕೆ ನೀಡಿದರು. ಅಷ್ಟೇ ಅಲ್ಲ, ಕಳೆದ 2023ರ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲೂ ಸೆಂಚೂರಿಯನ್​ನಲ್ಲಿ ಅಬ್ಬರಿಸಿದ್ದ ರಾಹುಲ್, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 101 ರನ್ ಸಿಡಿಸಿದರು.

ಸಚಿನ್, ರಹಾನೆ ದಾಖಲೆ ಬ್ರೇಕ್ ಮಾಡ್ತಾರಾ ಕನ್ನಡಿಗ..?

ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬ್ಯಾಟಿಂಗ್ ನಡೆಸ್ತಿರುವ ಕೆ.ಎಲ್.ರಾಹುಲ್, 2ನೇ ಅತ್ಯಧಿಕ ರನ್ ಸ್ಕೋರರ್ ಆಗಿದ್ದಾರೆ. ಡೆಬ್ಯು ಟೆಸ್ಟ್​ ಬಳಿಕ ಇದೇ ಮೊದಲ ಬಾರಿಗೆ ಮೆಲ್ಬರ್ನ್​ಗೆ ಕಾಲಿಟ್ಟಿರುವ ಕೆ.ಎಲ್.ರಾಹುಲ್, ಶತಕ ಸಿಡಿಸುವ ಹುಮ್ಮಸ್ಸಿನಲ್ಲಿದ್ದಾರೆ. ಸೆಂಚುರಿ ಸಿಡಿಸಿದ್ರೆ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ 3ನೇ ಶತಕ ದಾಖಲಿಸಿದ ಅಪರೂಪದ ಸಾಧನೆ ಮಾಡಲಿದ್ದಾರೆ. ಸಚಿನ್​​​​​​​, ರಹಾನೆ 2 ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಶತಕ ಸಿಡಿಸಿದ್ದು, ಆ ದಾಖಲೆ ಮೀರಲಿದ್ದಾರೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು‌ ಹೈವೇಯಲ್ಲಿ ಕಾರಿಗೆ ಮೊಟ್ಟೆ ಒಡೆದು, ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ

publive-image

ಆಸ್ಟ್ರೇಲಿಯಾ ಎದುರು ಅದ್ಭುತ ಟ್ರ್ಯಾಕ್ ರೆಕಾರ್ಡ್ಸ್​ ಹೊಂದಿರುವ ಕೆ.ಎಲ್,ರಾಹುಲ್, 1 ಶತಕ ಸಿಡಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಟೆಸ್ಟ್​ ಕರಿಯರ್​ನಲ್ಲಿ ಸಿಡಿಸಿದ 17 ಅರ್ಧಶತಕಗಳ ಪೈಕಿ 8 ಅರ್ಧಶತಕಗಳು ಆಸ್ಟ್ರೇಲಿಯಾ ವಿರುದ್ಧವೇ ಬಂದಿವೆ. ಸದ್ಯ ಅದ್ಭುತ ಲಯದಲ್ಲಿರುವ ರಾಹುಲ್, ಮೆಲ್ಬರ್ನ್​ ಟೆಸ್ಟ್​ನ ಸ್ಪೆಷಲ್ ಮಾಡಿಕೊಳ್ಳುವಲ್ಲಿ ಡೌಟೇ ಇಲ್ಲ.

ವೃತ್ತಿ ಜೀವನದ 10ನೇ ವರ್ಷಕ್ಕೆ ಕಾಲಿಡ್ತಿರುವ ಕೆ.ಎಲ್.ರಾಹುಲ್, ಈ ದಶಕದ ಆಟದಲ್ಲಿ ಸಾಕಷ್ಟು ಟೀಕೆ, ಟಿಪ್ಪಣಿ, ಅಪಮಾನ ಎಲ್ಲವನ್ನೂ ಕಂಡಿದ್ದಾರೆ. ಸದ್ಯ ಆಸಿಸ್​ ಪ್ರವಾಸಕ್ಕೂ ಮುನ್ನ ರಾಹುಲ್​ ಸ್ಥಾನವೇ ಅಭದ್ರವಾಗಿತ್ತು. ಆದ್ರೀಗ ಇವೆಲ್ಲವನ್ನು ಮೆಟ್ಟಿ ನಿಂತು ಯಶಸ್ಸಿನ ಹಾದಿಯಲ್ಲಿ ಸಾಗ್ತಿರುವ ಕನ್ನಡಿಗ ರಾಹುಲ್​ಗೆ​​​​​​​​​​​​​​​, ಮತ್ತಷ್ಟು ಯಶಸ್ಸು ಸಿಗಲಿ ಅನ್ನೋದೇ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment