ಚಾಂಪಿಯನ್ಸ್ ಟ್ರೋಫಿ: ಕೆ.ಎಲ್​ ರಾಹುಲ್​ಗೆ ಟೀಮ್​ ಇಂಡಿಯಾದಲ್ಲಿ ವಿಶೇಷ ಜವಾಬ್ದಾರಿ

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿಯಲ್ಲಿ KL ರಾಹುಲ್​​​​ಗೆ ಜಾಗವೇ ಇಲ್ಲ.. ಯಾಕೆಂದರೆ..
Advertisment
  • ಬಹುನಿರೀಕ್ಷಿತ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ
  • ಚಾಂಪಿಯನ್ಸ್ ಟ್ರೋಫಿಗೆ ಕೆಲವೇ ಗಂಟೆಗಳು ಬಾಕಿ..!
  • ಟ್ರೋಫಿ ಗೆಲ್ಲಲೇಬೇಕು ಎಂದು ಭಾರತ ಮಾಸ್ಟರ್​ ಪ್ಲ್ಯಾನ್

ಬಹುನಿರೀಕ್ಷಿತ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಹೇಗಾದ್ರೂ ಮಾಡಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಮಾಸ್ಟರ್​ ಪ್ಲ್ಯಾನ್​ ಮಾಡಿಕೊಂಡಿದೆ.

ಇದೇ ತಿಂಗಳು ಫೆಬ್ರವರಿ 20ನೇ ತಾರೀಕಿನಂದು ಟೀಮ್​ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​ ಕೆ.ಎಲ್​ ರಾಹುಲ್​​ ರೋಲ್​​​ ಬಗ್ಗೆ ಬಿಗ್​ ಅಪ್ಡೇಟ್​​ ಒಂದು ಬಿದ್ದಿದೆ.

ಕೆ.ಎಲ್​ ರಾಹುಲ್​ ಹೊಸ ಜವಾಬ್ದಾರಿ

ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ಆಟಗಾರರು ಪ್ರಾಕ್ಟೀಸ್​ ನಡೆಸಿದರು. ಈ ವೇಳೆ ಯಾವ ಆಟಗಾರನಿಗೆ ಯಾವ ಜವಾಬ್ದಾರಿ ಅನ್ನೋದರ ಬಗ್ಗೆ ತಿಳಿದು ಬಂದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಫಿನಿಷರ್ ಪಾತ್ರ ನಿಭಾಯಿಸಲಿದ್ದಾರೆ.

ಭಾರತ ತಂಡಕ್ಕೆ ಹೊಸ ಫಿನಿಶರ್​​

ಭಾರತ ಕ್ರಿಕೆಟ್​ ತಂಡದ ಕೆಎಲ್ ರಾಹುಲ್ ಒಂದು ಕಾಲದಲ್ಲಿ ಅಗ್ರೆಸ್ಸಿವ್​ ಬ್ಯಾಟಿಂಗ್​ಗೆ ಹೆಸರುವಾಸಿ ಆದವರು. ಇವರು ಈಗ ಅಧಿಕೃತವಾಗಿ ಫಿನಿಶರ್ ಪಾತ್ರ ಪ್ಲೇ ಮಾಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ರಾಹುಲ್​​ 29 ಎಸೆತಗಳಲ್ಲಿ 40 ರನ್ ಗಳಿಸಿದ್ರು. ನೆಟ್​ನಲ್ಲೂ ಎಲ್ಲಾ ಬಾಲ್​​ ಸಿಕ್ಸರ್​ ಬಾರಿಸಲು ಎದುರು ನೋಡುತ್ತಿದ್ದರು. ಐದು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿರೋ ಇವರು ಫಿನಿಶರ್​ ರೋಲ್​ ಪ್ಲೇ ಮಾಡಲಿದ್ದಾರೆ.

ಟೀಮ್​ ಇಂಡಿಯಾ ಹೀಗಿದೆ!

ರೋಹಿತ್ ಶರ್ಮಾ (ಕ್ಯಾಪ್ಟನ್​), ಶುಭ್ಮನ್​ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್​ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ.

ಇದನ್ನೂ ಓದಿ: ಟೀಂ ಇಂಡಿಯಾದ ನಿರೀಕ್ಷೆಯ ಭಾರ ಈ ಆಟಗಾರನ ಮೇಲೆ.. ಬಿಗ್ ಪ್ಲೇಯರ್, ಬಿಗ್ ಡ್ರೀಮ್​​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment