ಡೆಲ್ಲಿ ಇಂದ ಕನ್ನಡಿಗನಿಗೆ ಸ್ಪೆಷಲ್ ಟ್ರೀಟ್​.. KL ರಾಹುಲ್​ಗಾಗಿ ಟ್ರಕ್​ನಲ್ಲಿ ಬಂದ ನಂ- 1 ಸ್ಪೆಷಲ್​ ಜೆರ್ಸಿ

author-image
Bheemappa
Updated On
ಡೆಲ್ಲಿ ಇಂದ ಕನ್ನಡಿಗನಿಗೆ ಸ್ಪೆಷಲ್ ಟ್ರೀಟ್​.. KL ರಾಹುಲ್​ಗಾಗಿ ಟ್ರಕ್​ನಲ್ಲಿ ಬಂದ ನಂ- 1 ಸ್ಪೆಷಲ್​ ಜೆರ್ಸಿ
Advertisment
  • ಕನ್ನಡಿಗನಿಗೆ ವಿಶೇಷವಾದ ಮನವಿ ಮಾಡಿರುವ ಡೆಲ್ಲಿ ಅಭಿಮಾನಿಗಳು
  • ಎಸ್​​ಆರ್​ಹೆಚ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿರುವ ಕನ್ನಡಿಗ
  • KL ರಾಹುಲ್​ಗೆ ಟ್ರಕ್​ನಲ್ಲಿ ಬಂದ ಸ್ಪೆಷಲ್ ಜೆರ್ಸಿ ಹಾಗೂ ಒಂದು ಪತ್ರ

ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ಆರಂಭದ ಐಪಿಎಲ್​ ಪಂದ್ಯದಲ್ಲಿ ಲಕ್ನೋ ತಂಡದ ವಿರುದ್ಧ ಭರ್ಜರಿ ಗೆಲುವು ಪಡೆದಿದೆ. ಇದರ ಜೊತೆಗೆ ಕನ್ನಡಿಗ ಕೆ.ಎಲ್ ರಾಹುಲ್ ಅವರು ಅಪ್ಪ ಆಗಿದ್ದು ಡಬಲ್ ಖುಷಿಯಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲಿ ಕಾಣಿಸಿಕೊಳ್ಳದ ಕನ್ನಡಿಗ, 2ನೇ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್​ಗಾಗಿ ತಂಡದ ಜೆರ್ಸಿಯನ್ನು ವಿಶೇಷವಾಗಿ ಟ್ರಕ್​ನಲ್ಲಿ ತರಿಸಲಾಗಿದೆ.

ಕೆ.ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ದಂಪತಿ ಮೊದಲ ಮಗುವಿಗೆ ವೆಲ್​ಕಮ್ ಹೇಳಿದ್ದಾರೆ. ಹೀಗಾಗಿಯೇ ಕೆ.ಎಲ್ ರಾಹುಲ್ ಅವರು ಸ್ಪೆಷಲ್ ಪರ್ಮಿಷನ್ ತೆಗೆದುಕೊಂಡು ಮುಂಬೈಗೆ ತೆರಳಿದ್ದರು. ಇದರಿಂದ ಮೊದಲ ಪಂದ್ಯದಲ್ಲಿ ಮೈದಾನಕ್ಕೆ ಇಳಿದಿರಲಿಲ್ಲ. ಈಗ ಕನ್ನಡಿಗನ ನಿವಾಸಕ್ಕೆ ಮಹಾಲಕ್ಷ್ಮಿ ಬಂದಿದ್ದು ಕುಟುಂಬ ಫುಲ್ ಹ್ಯಾಪಿ ಆಗಿದೆ. ಇದರ ಬೆನ್ನಲ್ಲೇ ನಾಳೆ ವೈಜಾಗ್​ನಲ್ಲಿ ಹೈದ್ರಾಬಾದ್ ವಿರುದ್ಧ ನಡೆಯುವ ಅಖಾಡದಲ್ಲಿ ಕೆ.ಎಲ್​ ರಾಹುಲ್​ ಆಡುವುದು ಈಗಾಗಲೇ ಪಕ್ಕಾ ಆಗಿದೆ.

ಇದನ್ನೂ ಓದಿ:ರೋಹಿತ್ ಶರ್ಮಾಗೆ ಮೋಸ್ಟ್ ಕ್ರೂಶಿಯಲ್ ಮ್ಯಾಚ್.. ಹಿಟ್​​ಮ್ಯಾನ್​ ಟ್ರ್ಯಾಕ್​ಗೆ ಬರದಿದ್ರೆ ಬೆಂಚ್ ಫಿಕ್ಸ್!

publive-image

ಗುಡ್​ನ್ಯೂಸ್​ ಪಡೆದುಕೊಂಡು ಡೆಲ್ಲಿ ಕ್ಯಾಪಿಟಲ್ಸ್ ಪರ ನಾಳೆ ಮೈದಾನಕ್ಕೆ ಇಳಿಯುತ್ತಿರುವ ಕೆ.ಎಲ್​ ರಾಹುಲ್​ಗೆ ಟ್ರಕ್ ಮೂಲಕ ಡೆಲ್ಲಿ ತಂಡದ ಸ್ಪೆಷಲ್ ಜೆರ್ಸಿ ತರಿಸಲಾಗಿದೆ. ರೆಸ್ಟೋರೆಂಟ್​ಗೆ ಬಂದಿದ್ದ ಟ್ರಕ್​ ಒಳಗೆ ಏನಿದೆ ಎಂದು ರಾಹುಲ್ ನೋಡಿದ್ದಾರೆ. ಆಗ ನಂಬರ್- 1 ಇರುವ ಡೆಲ್ಲಿ ತಂಡದ ಜೆರ್ಸಿ ಇರುವುದು ಗೊತ್ತಾಗಿದೆ. ಅದರ ಮೇಲೆ ರಾಹುಲ್ ಎಂದು ಇಂಗ್ಲಿಷ್​ನಲ್ಲಿ ಇದೆ. ಜೆರ್ಸಿ ಜೊತೆಗೆ ಅಭಿಮಾನಿಗಳ ಒಂದು ಪತ್ರ ಕೂಡ ಇದ್ದು ಅದನ್ನು ಕೆ.ಎಲ್ ರಾಹುಲ್ ಓದಿದ್ದಾರೆ.

ಕೆ.ಎಲ್ ರಾಹುಲ್ ಓದಿದ ಪತ್ರದಲ್ಲಿ ಏನಿದೆ ಎಂದರೆ.. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಹುಲ್ ಅವರಿಗೆ ಸ್ವಾಗತ. ನಿಮ್ಮ ಕಾಮನೆಸ್, ಕ್ಲಾಸ್ ಪ್ರತಿ ಇನ್ನಿಂಗ್ಸ್​ನಲ್ಲಿ ನೋಡುತ್ತಿರುತ್ತೇವೆ. ನೀವು ಯಾವಾಗ ಕ್ರೀಸ್​ನಲ್ಲಿ ಬ್ಯಾಟ್​ ಹಿಡಿದು ನಿಲ್ಲುತ್ತಿರೋ ಅವಾಗ ಪಂದ್ಯ ಸೇಫ್​ ಹ್ಯಾಂಡ್ ಆಗಿರುತ್ತೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್​ಗೂ ಮ್ಯಾಚ್​ವಿನ್ನಿಂಗ್​ ಪರ್ಫಾಮೆನ್ಸ್ ನೀಡಿ ಎಂದು ಫ್ಯಾನ್ಸ್​ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment