newsfirstkannada.com

IPL ಫೈನಲ್​​ಗೆ ಮುನ್ನವೇ ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​​.. ಲಕ್ನೋ ತಂಡದಿಂದ ಕನ್ನಡಿಗ ಔಟ್​​!

Share :

Published May 9, 2024 at 7:49pm

    ಹೈದರಾಬಾದ್​ ವಿರುದ್ಧ ಲಕ್ನೋ ತಂಡಕ್ಕೆ ಹೀನಾಯ ಸೋಲು

    ಕ್ಯಾಪ್ಟನ್​​ ರಾಹುಲ್​​ ಮೇಲೆ ಲಕ್ನೋ ಟೀಮ್​ ಮಾಲೀಕ ಕೂಗಾಟ

    ಐಪಿಎಲ್​​ ಫೈನಲ್​ಗೆ ಮುನ್ನವೇ ಕ್ಯಾಪ್ಟನ್​ ರಾಹುಲ್​ಗೆ ಬಿಗ್​ ಶಾಕ್​​​

2024ರ ಇಂಡಿಯನ್​​ ಪ್ರೀಮಿಯರ್​​ ಫೈನಲ್​ಗೆ ಮುನ್ನವೇ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕ್ಯಾಪ್ಟನ್​ ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​ ಕಾದಿದೆ. ಮುಂದಿನ ವರ್ಷ ನಡೆಯಲಿರೋ ಐಪಿಎಲ್​​ಗೆ ಕ್ಯಾಪ್ಟನ್​ ಕೆ.ಎಲ್​ ರಾಹುಲ್​​​ ಅವರನ್ನು ಲಕ್ನೋ ಸೂಪರ್​ ಜೈಂಟ್ಸ್​​ ರೀಟೈನ್​ ಮಾಡಿಕೊಳ್ಳೋದು ಡೌಟ್​ ಎನ್ನಲಾಗುತ್ತಿದೆ.

ಇತ್ತೀಚೆಗೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​​​ ಹೀನಾಯವಾಗಿ ಸೋಲನ್ನಪ್ಪಿತ್ತು.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಲಕ್ನೋ ಸೂಪರ್​ ಜೈಂಟ್ಸ್​​ ನಿಗದಿತ 20 ಓವರ್​​ನಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಸನ್​ರೈಸರ್ಸ್​​ ಹೈದರಾಬಾದ್​ ತಂಡ ಅದ್ಭುತ ಪ್ರದರ್ಶನ ತೋರಿ ಕೇವಲ 9.4 ಓವರ್​​ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಜಯಭೇರಿ ಬಾರಿಸಿತ್ತು.

ಹೈದರಾಬಾದ್​​ ಪರ ಅಗ್ರೆಸ್ಸಿವ್​ ಬ್ಯಾಟಿಂಗ್​ ಮಾಡಿದ ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 8 ಸಿಕ್ಸರ್​​, 8 ಫೋರ್​ ಸಮೇತ 89 ರನ್​ ಸಿಡಿಸಿದ್ರು. ಇನ್ನೊಂದೆಡೆ ಇವರಿಗೆ ಸಾಥ್​ ನೀಡಿದ ಅಭಿಷೇಕ್ ಶರ್ಮಾ ಕೇವಲ 28 ಬಾಲ್​ನಲ್ಲಿ 8 ಬೌಂಡರಿ, 6 ಸಿಕ್ಸರ್ ಸಮೇತ 75 ರನ್ ಚಚ್ಚಿದ್ರು.

ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್​ ರೂಮ್​ ಬಳಿ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್​​ ಕೆ.ಎಲ್​​ ರಾಹುಲ್​ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ‌ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್​​ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಲಕ್ನೋ ಟೀಮ್​​​ ಜತೆ ಜಗಳ; ಮತ್ತೆ ಆರ್​​ಸಿಬಿ ತಂಡಕ್ಕೆ ಕನ್ನಡಿಗ KL​ ರಾಹುಲ್​​..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPL ಫೈನಲ್​​ಗೆ ಮುನ್ನವೇ ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​​.. ಲಕ್ನೋ ತಂಡದಿಂದ ಕನ್ನಡಿಗ ಔಟ್​​!

https://newsfirstlive.com/wp-content/uploads/2024/04/KL-Rahul_RCB.jpg

Load More