ಕೈಕೊಟ್ಟ ಜೈಸ್ವಾಲ್, ಸಾಯಿ.. ಟೀಂ ಇಂಡಿಯಾಗೆ ಕನ್ನಡಿಗ KL ರಾಹುಲ್ ಆಸರೆ, ಭರವಸೆ..!

author-image
Ganesh
Updated On
ಕೈಕೊಟ್ಟ ಜೈಸ್ವಾಲ್, ಸಾಯಿ.. ಟೀಂ ಇಂಡಿಯಾಗೆ ಕನ್ನಡಿಗ KL ರಾಹುಲ್ ಆಸರೆ, ಭರವಸೆ..!
Advertisment
  • ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್​ ಪಂದ್ಯ
  • 3ನೇ ದಿನದಾಟದಲ್ಲಿ ಸಮಬಲದ ಹೋರಾಟ
  • ಫಸ್ಟ್​ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ 465ಕ್ಕೆ ಆಲೌಟ್​

ಇಂಡೋ-ಇಂಗ್ಲೆಂಡ್​​ ನಡುವಿನ ಮೊದಲ ಟೆಸ್ಟ್​ ಪಂದ್ಯ ಕುತೂಹಲದ ಘಟ್ಟ ತಲುಪಿದೆ. 3ನೇ ದಿನದಾಟದಲ್ಲಿ ಉಭಯ ತಂಡಗಳೂ ಜಿದ್ದಾಜಿದ್ದಿನ ಹೋರಾಟ ನಡೆಸಿದ್ವು. ಅಸಲಿಗೆ ಟೀಮ್​ ಇಂಡಿಯಾಗೆ ಟೆಸ್ಟ್​ ಮೇಲೆ ಸಂಪೂರ್ಣ ಹಿಡಿತ ಸಾಧಿಸೋ ಅವಕಾಶವಿತ್ತು.

ಸೆಷನ್​ - 1: ಇಂಡೋ-ಇಂಗ್ಲೆಂಡ್​ ಸಮಬಲದ ಹೋರಾಟ

3 ವಿಕೆಟ್​ ನಷ್ಟಕ್ಕೆ 209 ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಎದುರಿಸಿತು. ಸೆಂಚುರಿ ಸಿಡಿಸಿ ಸೆಟಲ್​ ಆಗಿದ್ದ ಒಲಿ ಪೋಪ್​ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಬಲೆಗೆ ಬಿದ್ರು. 106 ರನ್​ಗಳಗೆ ಪೋಪ್​ ಆಟ ಅಂತ್ಯವಾಯ್ತು. ಬೆನ್​ ಸ್ಟೋಕ್ಸ್​ ಆಟವೂ ಹೆಚ್ಚು ಹೊತ್ತು ನಡೀಲಿಲ್ಲ. ಬಿಗ್​ ಇನ್ನಿಂಗ್ಸ್​ ಕಟ್ಟೋ ಲೆಕ್ಕಾಚಾರದಲ್ಲಿದ್ದ ಸ್ಟೋಕ್ಸ್​​ ಆಟಕ್ಕೆ ಸಿರಾಜ್​ ಅಂತ್ಯ ಹಾಡಿದ್ರು.

ಇದನ್ನೂ ಓದಿ: ಕನ್ನಡಿಗ ಕೃಷ್ಣ, ಬೂಮ್ರಾ ಬೌಲಿಂಗ್ ಪರಾಕ್ರಮ.. ಟೀಮ್ ಇಂಡಿಯಾಕ್ಕೆ ಕೇವಲ ಆರೇ 6 ರನ್​ಗಳ ಮುನ್ನಡೆ!

publive-image

ಆ ಬಳಿಕ ಜೊತೆಯಾದ ಹ್ಯಾರಿ ಬ್ರೂಕ್- ಜೇಮಿ ಸ್ಮಿತ್​​ ಬಿರುಸಿನಿಂದ ರನ್​ ಕಲೆ ಹಾಕಿದ್ರು. ಟೀಮ್​ ಇಂಡಿಯಾದ ಕಳಪೆ ಫೀಲ್ಡಿಂಗ್​ನ ಲಾಭ ಪಡೆದ ಹ್ಯಾರಿ ಬ್ರೂಕ್​ ಹಾಫ್​ ಸೆಂಚುರಿ ಸಿಡಿಸಿದ್ರು. ಜೇಮಿ ಸ್ಮಿತ್​ ಕೂಡ ಸಲೀಸಾಗಿ ರನ್​ಗಳಿಸಿದ್ರು. ಮೊದಲ ಸೆಷನ್​ ಅಂತ್ಯದ ವೇಳೆಗೆ 5 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್​ 327 ರನ್​ಗಳಿಸಿತು.

ಸೆಷನ್​-2: ಟೀಮ್​ ಇಂಡಿಯಾ ಬೌಲರ್​ಗಳ ದರ್ಬಾರ್​

2ನೇ ಸೆಷನ್​ನ ಆರಂಭದಲ್ಲೇ ಟೀಮ್​ ಇಂಡಿಯಾಗೆ ಬ್ರೇಕ್​ ಥ್ರೂ ಸಿಗ್ತು. ಪ್ರಸಿದ್ಧ್​ ಕೃಷ್ಣ, ಜೇಮಿ ಸ್ಮಿತ್​​ ವಿಕೆಟ್​ ಉರುಳಿಸಿದ್ರು. ಎರಡೆರೆಡು ಜೀವದಾನ ಪಡೆದು ಶತಕ ಕಡೆಗೆ ಮುನ್ನುಗ್ಗುತ್ತಿದ್ದ ಹ್ಯಾರಿ ಬ್ರೂಕ್​​​​, 99 ರನ್​ಗಳಿಸಿದ್ದಾಗ ಎಡವಿದ್ರು. ಬೌಂಡರಿ ಲೈನ್​ನಲ್ಲಿ ಜಡೇಜಾ, ಸಾಯಿ ಸುದರ್ಶನ್ ಇಬ್ಬರೂ ಸೇರಿ ಮಾಡಿದ ಮ್ಯಾಜಿಕ್​ಗೆ ಬಲಿಯಾದ್ರು. ಕ್ರಿಸ್​ ವೋಕ್ಸ್​​​, ಬ್ರೆಂಡನ್​ ಕರ್ಸ್​ ಕೆಲ ಕಾಲ ಕಾಡಿದ್ರು. 8ನೇ ವಿಕೆಟ್​​ಗೆ 55 ರನ್​ಗಳ ಜೊತೆಯಾಟವಾಡಿದ್ರು. ಅಂತಿಮವಾಗಿ ಮೊಹಮ್ಮದ್​ ಸಿರಾಜ್​ ಜೊತೆಯಾಟವನ್ನ ಬ್ರೇಕ್​ ಮಾಡಿದ್ರು. 22 ರನ್​ಗಳಿಸಿ ಕರ್ಸ್​ ಸಿರಾಜ್​ಗೆ ಶರಣಾದ್ರು. ಕ್ರಿಸ್​ ವೋಕ್ಸ್​, ಜೋಷ್​ ಟಂಗ್​ನ ವಿಕೆಟ್​ನ ಬೂಮ್ರಾ ಎಗರಿಸಿದ್ರು. ಇದ್ರೊಂದಿಗೆ 465 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​ ಆಯ್ತು. ಜಸ್​​​ಪ್ರಿತ್​ ಬೂಮ್ರಾ 5 ವಿಕೆಟ್​ ಕಬಳಿಸಿ ಮಿಂಚಿದ್ರು.

ಸೆಷನ್​-3: ಟೀಮ್​ ಇಂಡಿಯಾಗೆ ಕನ್ನಡಿಗನೇ ಭರವಸೆ

6 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾಗೆ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ಯಶಸ್ವಿ ಜೈಸ್ವಾಲ್​ ಜಸ್ಟ್​ 4 ರನ್​ಗಳಿಸಿ ನಿರ್ಗಮಿಸಿದ್ರು. ಆರಂಭಿಕ ಆಘಾತ ಕಂಡ ತಂಡಕ್ಕೆ ಕೆ.ಎಲ್​ ರಾಹುಲ್​, ಸಾಯಿ ಸುದರ್ಶನ್​ ಚೇತರಿಕೆ ನೀಡಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ಡಕೌಟ್​ ಆಗಿದ್ದ ಸಾಯಿ ಸುದರ್ಶನ್​, 2ನೇ ಇನ್ನಿಂಗ್ಸ್​ನಲ್ಲಿ ​ಭರವಸೆಯ ಆಟವಾಡಿದ್ರು. ರಾಹುಲ್​- ಸುದರ್ಶನ್​ 2ನೇ ವಿಕೆಟ್​ಗೆ 66 ರನ್​ಗಳ ಜೊತೆಯಾಟವಾಡಿದ್ರು. 4 ಬೌಂಡರಿ ಬಾರಿಸಿದ ಸುದರ್ಶನ್​ 30 ರನ್​ಗಳಿಸಿ ಔಟಾದ್ರು.

ಇದನ್ನೂ ಓದಿ: ಕಾವ್ಯಾ ಮಾರನ್​, ಸನ್‌ರೈಸರ್ಸ್ ಹೈದರಾಬಾದ್​ ತಂಡಕ್ಕೆ ಸಂಕಷ್ಟ ಎದುರಾಗುತ್ತಾ.. ಕಾರಣವೇನು?

publive-image

ಕ್ಲಾಸಿಕ್​ ಶಾಟ್​​ಗಳನ್ನ ಬಾರಿಸಿ ಕೆ.ಎಲ್​ ರಾಹುಲ್​ ಮಿಂಚಿದ್ರು. 7 ಆಕರ್ಷಕ ಬೌಂಡರಿ ಬಾರಿಸಿ ಆಂಗ್ಲರಿಗೆ ಸಖತ್​ ಕಾಟ ಕೊಟ್ಟ, ಕನ್ನಡಿಗ ರಾಹುಲ್​ 75 ಎಸೆತಗಳನ್ನ ಎದುರಿಸಿ​ 47 ರನ್​ಗಳಿಸಿ ಭರವಸೆ ಮೂಡಿಸಿದ್ದಾರೆ.

ರಾಹುಲ್​ಗೆ ನಾಯಕ ಶುಭ್​ಮನ್​ ಗಿಲ್​ ಉತ್ತಮ ಸಾಥ್​​ ನೀಡ್ತಿದ್ದಾರೆ. ದಿನದ ಅಂತ್ಯಕ್ಕೆ 2 ವಿಕೆಟ್​ ನಷ್ಟಕ್ಕೆ ಟೀಮ್​ ಇಂಡಿಯಾ 90 ರನ್​ಗಳಿಸಿದ್ದು, ಒಟ್ಟಾರೆ 96 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇಂದಿನ ದಿನದಾಟ ಗೇಮ್​ ಡಿಸೈಡ್​ ಮಾಡಲಿದ್ದು, ಬಿಗ್​ ಸ್ಕೋರ್​​ ಕಲೆ ಹಾಕೋ ಸವಾಲು ಭಾರತೀಯ ಬ್ಯಾಟರ್​ಗಳ ಮುಂದಿದೆ.

ಇದನ್ನೂ ಓದಿ: SENA ದೇಶಗಳ ವಿರುದ್ಧ ಬೂಮ್ರಾ ವಿಶೇಷ ದಾಖಲೆ.. ರೆಕಾರ್ಡ್​ ಬ್ರೇಕ್​ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment