KL ರಾಹುಲ್​​, ಹಾರ್ದಿಕ್​ ಪಾಂಡ್ಯಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ಆಫರ್​​​; ಇಬ್ಬರಲ್ಲಿ ಯಾರು ಬೆಸ್ಟ್​​?

author-image
Ganesh Nachikethu
Updated On
KL ರಾಹುಲ್​​, ಹಾರ್ದಿಕ್​ ಪಾಂಡ್ಯಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ಆಫರ್​​​; ಇಬ್ಬರಲ್ಲಿ ಯಾರು ಬೆಸ್ಟ್​​?
Advertisment
  • ಟೀಮ್​ ಇಂಡಿಯಾ ವಿಶ್ವದ ಅತ್ಯಂತ ಯಶಸ್ವಿ ತಂಡ
  • ರೋಹಿತ್ ಶರ್ಮಾ​ ನಂತರ ಮುಂದಿನ ಕ್ಯಾಪ್ಟನ್​ ಯಾರು?
  • ಕೆ.ಎಲ್​ ರಾಹುಲ್​​ ಮತ್ತು ಹಾರ್ದಿಕ್ ಇಬ್ಬರಲ್ಲಿ ಯಾರು ಬೆಸ್ಟ್​?​

ಟೀಮ್​ ಇಂಡಿಯಾ ವಿಶ್ವದ ಅತ್ಯಂತ ಯಶಸ್ವಿ ತಂಡ. ಈ ಯಶಸ್ಸಿನ ಹಿಂದಿನ ಪ್ರಮುಖ ಕಾರಣ ಸಮರ್ಥ ನಾಯಕತ್ವ. ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಕ್ಯಾಪ್ಟನ್​ ರೋಹಿತ್​ ಶರ್ಮಾ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈಗಾಗಲೇ ರೋಹಿತ್​ ಶರ್ಮಾ ಅವರಿಗೆ 37 ವರ್ಷ ಆಗಿದ್ದು, ಸದ್ಯದಲ್ಲೇ ನಿವೃತ್ತಿ ಆಗಬಹುದು. ಹಾಗಾಗಿ ಇವರ ನಂತರ ಭಾರತ ತಂಡವನ್ನು ಲೀಡ್​ ಮಾಡೋದು ಯಾರು ಅನ್ನೋದರ ಬಗ್ಗೆ ಚರ್ಚೆ ಶುರುವಾಗಿದೆ.

ಇನ್ನು, ಭಾರತ ಏಕದಿನ ತಂಡದ ಮುಂದಿನ ಕ್ಯಾಪ್ಟನ್​ ಯಾರು? ಅನ್ನೋ ಪ್ರಶ್ನೆಗೆ ಉತ್ತರ ಹೀಗಿದೆ. ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಮತ್ತು ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​ ಕೆ.ಎಲ್​​ ರಾಹುಲ್​​ ಹೆಸರು ಮುಂದಿನ ಕ್ಯಾಪ್ಟನ್ಸಿ ರೇಸ್​ನಲ್ಲಿ ಕೇಳಿ ಬಂದಿದೆ. ಇಬ್ಬರಲ್ಲಿ ಯಾರು ಕ್ಯಾಪ್ಟನ್​ ಆಗಲು ಹೆಚ್ಚು ಸೂಕ್ತ ಎಂದು ಆಟದ ಶೈಲಿ, ಲೀಡರ್ಶೀಪ್​ ಕ್ವಾಲಿಟೀಸ್​​​ ಮೇಲೆ ಬಿಸಿಸಿಐ ನಿರ್ಧಾರ ಮಾಡಲಿದೆ.

ಅನುಭವ ಮತ್ತು ಸ್ಥಿರತೆಗೆ ಮತ್ತೊಂದು ಹೆಸರು ಕೆ.ಎಲ್​ ರಾಹುಲ್​​

ಭಾರತ ತಂಡದ ಸ್ಟಾರ್​ ವಿಕೆಟ್​ ಕೀಪರ್​​ ಬ್ಯಾಟರ್​​ ಕೆ.ಎಲ್ ರಾಹುಲ್. ಇವರು ಎಲ್ಲಾ ಸ್ವರೂಪಗಳಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ವೈಸ್​ ಕ್ಯಾಪ್ಟನ್​ ಆಗಿದ್ದವರು. ಕೆ.ಎಲ್​ ರಾಹುಲ್​​​ 2022ರಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಬಾರಿ ಏಕದಿನ ನಾಯಕರಾಗಿ ಡೆಬ್ಯೂ ಮಾಡಿದ್ದರು. ಭಾರತ ತಂಡದ 26ನೇ ಏಕದಿನ ಕ್ಯಾಪ್ಟನ್​ ಆಗಿ ಡೆಬ್ಯೂ ಮಾಡಿದ್ದಾರೆ ಕೆ.ಎಲ್​ ರಾಹುಲ್​​.

ಇನ್ನು, ರಾಹುಲ್​​ ತಮ್ಮ ಬ್ಯಾಟಿಂಗ್ ಶೈಲಿ ಮತ್ತು ಸ್ಥಿರತಗೆ ಹೆಸರುವಾಸಿ. ಇವರು ಕೇವಲ ಆರಂಭಿಕ ಬ್ಯಾಟರ್​ ಆಗಿ ಅಲ್ಲ ಮಿಡಲ್​ ಆರ್ಡರ್​ ಬ್ಯಾಟರ್​ ಆಗಿ ಯಶಸ್ಸು ಕಂಡಿದ್ದಾರೆ. ವಿಕೆಟ್​ ಕೀಪಿಂಗ್​ನಲ್ಲೂ ಹೆಚ್ಚು ಹೆಸರು ಮಾಡಿದ್ದಾರೆ. ಹೀಗಾಗಿ ಇವರು ಭಾರತ ತಂಡದ ಏಕದಿನ ನಾಯಕತ್ವಕ್ಕೆ ಮೊದಲ ಆಯ್ಕೆ ಎನ್ನಬಹುದು.

ಅಗ್ರೆಸ್ಸಿವ್​ ಮತ್ತು ಸ್ಪಿರಿಟ್​​ಗೆ ಹೆಸರುವಾಸಿ ಹಾರ್ದಿಕ್​ ಪಾಂಡ್ಯ

ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಆಲ್​ರೌಂಡರ್​ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಇವರು ಕೇವಲ ಆಕ್ರಮಣಕಾರಿ ಬ್ಯಾಟಿಂಗ್​​ನಿಂದ ಮಾತ್ರವಲ್ಲ ಸಮತೋಲನ ವೇಗದ ಬೌಲಿಂಗ್​ನಿಂದಲೂ ತಂಡಕ್ಕೆ ನೆರವಾಗಬಲ್ಲರು. ಹಾರ್ದಿಕ್​​ ಉತ್ಸಾಹ ಮತ್ತು ಆತ್ಮವಿಶ್ವಾಸ ಯುವ ಆಟಗಾರರಿಗೆ ಪ್ರೇರಣೆ.

ಪಾಂಡ್ಯ ಐಪಿಎಲ್​ನಲ್ಲಿ ಗುಜರಾತ್​ ಟೈಟನ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಲೀಡ್​ ಮಾಡಿದ್ದಾರೆ. ಎರಡು ತಂಡಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇವರಿಗೆ ನಾಯಕತ್ವ ಗುಣಗಳಿವೆ. ಯಾವುದೇ ಒತ್ತಡದ ಸಂದರ್ಭದಲ್ಲೂ ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇದೆ. ಹೀಗಾಗಿ ತಂಡದ 2ನೇ ಆಯ್ಕೆ ಹಾರ್ದಿಕ್​ ಪಾಂಡ್ಯ.

ಇದನ್ನೂ ಓದಿ:ರೋಹಿತ್​ ನಂತರ ಕ್ಯಾಪ್ಟನ್​ ಯಾರು? KL ರಾಹುಲ್​ಗೆ ಇಬ್ಬರು ಆಟಗಾರರಿಂದ ಭಾರೀ ಪೈಪೋಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment