/newsfirstlive-kannada/media/post_attachments/wp-content/uploads/2024/08/KL-Rahul_Shubman-Gill.jpg)
ಇದೇ ತಿಂಗಳು ಸೆಪ್ಟೆಂಬರ್ 19ನೇ ತಾರೀಕಿನಿಂದ ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದೆ. ಈ ಸರಣಿಗಾಗಿ ಬಿಸಿಸಿಐ ಸೆಲೆಕ್ಷನ್ ಕಮಿಟಿ ಸದ್ಯದಲ್ಲೇ ಬಲಿಷ್ಠ ಟೀಮ್ ಇಂಡಿಯಾ ಪ್ರಕಟಿಸಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾದ ಕೆಲವು ಆಟಗಾರರು ದುಲೀಪ್ ಟ್ರೋಫಿಯ ಭಾಗವಾಗಿದ್ದಾರೆ.
ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಎಲ್ಲ ಆಟಗಾರರಿಗೂ ಈ ಟೂರ್ನಿ ಅತ್ಯಂತ ಮಹತ್ವದ್ದಾಗಿದೆ. ಆದರೆ, ಭಾರತ ತಂಡದ ಉಪನಾಯಕ ಶುಭ್ಮನ್ ಗಿಲ್ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಯುವ ಸ್ಟಾರ್ ಆಟಗಾರರು ಮೊದಲ ದಿನವೇ ಪ್ಲಾಪ್ ಆಗಿದ್ದಾರೆ.
ಶುಭ್ಮನ್ ಗಿಲ್ ಕಳಪೆ ಆಟ
ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಬಿ ನಡುವೆ ದುಲೀಪ್ ಟ್ರೋಫಿಯ ಮೊದಲ ಪಂದ್ಯ ನಡೆಯುತ್ತಿದೆ. ಇಂಡಿಯಾ ಬಿ ಇಂಡಿಯಾ ಎ ತಂಡಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ 322 ರನ್ಗಳ ಟಾರ್ಗೆಟ್ ಕೊಟ್ಟಿದೆ. 322 ರನ್ಗಳ ಗುರಿ ಬೆನ್ನತ್ತಿದ ಇಂಡಿಯಾ ಎ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಕ್ಯಾಪ್ಟನ್ ಶುಭ್ಮನ್ ಕೇವಲ 25 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ತಾನು ಆಡಿದ 43 ಬಾಲ್ನಲ್ಲಿ 3 ಫೋರ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 58.14 ಇತ್ತು.
ಗಿಲ್ ವಿರುದ್ಧ ಫ್ಯಾನ್ಸ್ ಆಕ್ರೋಶ
ಟೀಮ್ ಇಂಡಿಯಾದ ಉಪನಾಯಕ ಶುಭ್ಮನ್ ಗಿಲ್. ಇವರು ಭಾರತ ಕ್ರಿಕೆಟ್ ತಂಡದ ಮುಂದಿನ ಕ್ಯಾಪ್ಟನ್. ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒಬ್ಬ ಕ್ಯಾಪ್ಟನ್ ಆದವನು ಕ್ರೀಸ್ನಲ್ಲೇ ನಿಂತು ಮ್ಯಾಚ್ ಗೆಲ್ಲಿಸಬೇಕು. ಅದು ಬೇಜವಾಬ್ದಾರಿಯಿಂದ ಬಾಲ್ ಬಿಟ್ಟು ವಿಕೆಟ್ ಒಪ್ಪಿಸುವುದು ಎಷ್ಟು ಸರಿ? ಶೇಮ್ ಆನ್ ಯೂ ಗಿಲ್ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೆ.ಎಲ್ ರಾಹುಲ್ಗೆ ಕ್ಯಾಪ್ಟನ್ಸಿ ನೀಡಬೇಕು ಎಂದು ಡಿಮ್ಯಾಂಡ್
ಗಿಲ್ ತಂಡದ ನಾಯಕರಾಗಿ ಕೇವಲ 25 ರನ್ಗೆ ಔಟ್ ಆಗಿದ್ದು, ಕನ್ನಡಿಗ ಕೆ.ಎಲ್ ರಾಹುಲ್ 80ಕ್ಕೂ ಹೆಚ್ಚು ಬಾಲ್ ಬ್ಯಾಟ್ ಬೀಸಿ ತಾಳ್ಮೆಯಿಂದಲೇ ಆಟ ಆಡುತ್ತಿದ್ದಾರೆ. ಇನ್ನೂ ಕ್ರೀಸ್ನಲ್ಲೇ ಇದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ. ಕೆ.ಎಲ್ ರಾಹುಲ್ 3 ಫೋರ್ ಸಮೇತ 20 ರನ್ ಚಚ್ಚಿ ನಾಳೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಹಾಗಾಗಿ ಗಿಲ್ ಬದಲಿಗೆ ಕೆ.ಎಲ್ ರಾಹುಲ್ ಕ್ಯಾಪ್ಟನ್ಸಿ ನೀಡಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ. ಒಂದು ವೇಳೆ ದುಲೀಪ್ ಟ್ರೋಫಿಯಲ್ಲಿ ಕೆ.ಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ರೆ, ಇವರಿಗೆ ಏಕದಿನ ಮತ್ತು ಟೆಸ್ಟ್ ಕ್ಯಾಪ್ಟನ್ ಆಗೋ ಅವಕಾಶಗಳು ಇವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:‘ನಾಚಿಕೆ ಆಗಬೇಕು ನಿನಗೆ’- ಶುಭ್ಮನ್ ಗಿಲ್ ವಿರುದ್ಧ ಬಹಿರಂಗ ಆಕ್ರೋಶ; ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್