/newsfirstlive-kannada/media/post_attachments/wp-content/uploads/2023/09/KL_RAHUL_ROHIT.jpg)
ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ನಂತರ ರೆಡ್ ಬಾಲ್ ಕ್ರಿಕೆಟ್ ಕ್ಯಾಪ್ಟನ್ಸಿಗೆ ರೋಹಿತ್ ಶರ್ಮಾ ವಿದಾಯ ಹೇಳುವ ಸಾಧ್ಯತೆ ಇದೆ. ಹೀಗಾಗಿ ರೋಹಿತ್ ನಂತರ ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವ ಯಾರಿಗೆ ನೀಡಬೇಕು ಅನ್ನುವುದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ರೋಹಿತ್ ಜಾಗಕ್ಕೆ ಯಾರು ಬರಬಹುದು? ಅನ್ನೋ ಕುತೂಹಲ ಎದ್ದಿದೆ. ಟೆಸ್ಟ್ ನಾಯಕತ್ವಕ್ಕೆ ಕೆ.ಎಲ್ ರಾಹುಲ್, ರಿಷಭ್ ಪಂತ್ ಹೆಸರು ಕೇಳಿ ಬಂದಿದೆ.
ಇದೇ ತಿಂಗಳು 19ನೇ ತಾರೀಕಿನಿಂದ ನಡೆಯಲಿರೋ ಬಾಂಗ್ಲಾ ವಿರುದ್ಧ ಸೀರೀಸ್ಗೆ ಟೀಮ್ ಇಂಡಿಯಾ ಉಪನಾಯಕ ಯಾರು ಎಂದು ಅನೌನ್ಸ್ ಮಾಡಿಲ್ಲ. ಶುಭ್ಮನ್ ಗಿಲ್ ಅವರನ್ನು ಈಗಾಗಲೇ ಸೀಮಿತ ಓವರ್ಗಳ ಎರಡೂ ಆವೃತ್ತಿಗಳಿಗೆ ಉಪನಾಯಕ ಎಂದು ಘೋಷಿಸಲಾಗಿದೆ. ಆದರೆ ಸದ್ಯದ ಸ್ಥಿತಿ ಮತ್ತು ಭವಿಷ್ಯದ ದೃಷ್ಟಿಯಿಂದ ಕೆ.ಎಲ್ ರಾಹುಲ್ ಅವರನ್ನೇ ಟೆಸ್ಟ್ ಕ್ಯಾಪ್ಟನ್ ಮಾಡುವ ನಿರ್ಧಾರ ಬಿಸಿಸಿಐ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಕೆ.ಎಲ್ ರಾಹುಲ್ ಟೆಸ್ಟ್ ಕ್ಯಾಪ್ಟನ್ಸಿಗೆ ಉತ್ತಮ ಆಯ್ಕೆ.
ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ನಾಯಕತ್ವ ವಹಿಸಿರುವ ಅನುಭವ ಕನ್ನಡಿಗನಿಗಿದೆ. ಈಗಾಗಲೇ ಕೆ.ಎಲ್ ರಾಹುಲ್ ನಾಯಕತ್ವದ ಗುಣಗಳನ್ನು ಖುದ್ದು ರೋಹಿತ್ ಶರ್ಮಾ ಅವರೇ ಶ್ಲಾಘಿಸಿದ್ದಾರೆ. ಹಾಗಾಗಿ ರೋಹಿತ್ ಕ್ಯಾಪ್ಟನ್ ಆದಲ್ಲಿ ಕೊಹ್ಲಿ ಮತ್ತು ರೋಹಿತ್ ಮಾರ್ಗದರ್ಶನವಂತೂ ಇದ್ದೇ ಇರುತ್ತದೆ.
ಯಾರು ಕೆ.ಎಲ್ ರಾಹುಲ್?
ಕೆ.ಎಲ್ ರಾಹುಲ್ ಆಕ್ರಮಣಕಾರಿ ಮನೋಭಾವ ಹುಡುಗ ಆದ್ರೂ ತಾಳ್ಮೆ ಹೆಚ್ಚು. ಟೆಸ್ಟ್ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿರೋ ಕೆ.ಎಲ್ ರಾಹುಲ್ ಕ್ಲಾಸ್ ಮತ್ತು ತಾಳ್ಮೆಯಾಟಕ್ಕೆ ಸಾಕ್ಷಿ. ಈ ಹುಡುಗನಲ್ಲಿ ಕೊಹ್ಲಿಯಂತೆ ಛಲವಿದೆ, ಟೀಮಿನ ಶ್ರೇಯಸ್ಸಿಗಾಗಿ ಶ್ರಮಿಸುವ ಬದ್ಧತೆಯಿದೆ. ಐಪಿಎಲ್ನಲ್ಲಿ ಪಂಜಾಬ್, ಲಕ್ನೋ ತಂಡವನ್ನು ಮುನ್ನಡೆಸಿದ ಅನುಭವ ಇದೆ.
ಇದನ್ನೂ ಓದಿ: IPL 2025: ಆರ್ಸಿಬಿ ತಂಡದಿಂದ ಮಹತ್ವದ ನಿರ್ಧಾರ; ಬೆಂಗಳೂರು ತಂಡದ ಕ್ಯಾಪ್ಟನ್ ಇವರೇ!
ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ