Advertisment

KL Rahul vs LSG; ಸಂಜೀವ್ ಗೋಯೆಂಕಗೆ ಬ್ಯಾಟ್​ನಿಂದಲೇ ಕೌಂಟರ್​ ಕೊಡ್ತಾರಾ ಕನ್ನಡಿಗ?

author-image
Bheemappa
Updated On
KL Rahul vs LSG; ಸಂಜೀವ್ ಗೋಯೆಂಕಗೆ ಬ್ಯಾಟ್​ನಿಂದಲೇ ಕೌಂಟರ್​ ಕೊಡ್ತಾರಾ ಕನ್ನಡಿಗ?
Advertisment
  • ಲಕ್ನೋ ವಿರುದ್ಧ ಕೆ.ಎಲ್ ರಾಹುಲ್​ ಅವರ ಪ್ರತಿಷ್ಠೆಯ ಸಮರ.!
  • ಬ್ಯಾಟ್​ನಿಂದ ಲಕ್ನೋ ಓನರ್​ಗೆ ಉತ್ತರ ಕೊಡ್ತಾರಾ ರಾಹುಲ್?
  • ಲಕ್ನೋ ತಂಡದ ಮಾಜಿ ಕ್ಯಾಪ್ಟನ್​ ರಾಹುಲ್​ಗೆ ಅಂದು ಏನಾಗಿತ್ತು?

ಈ ಬಾರಿ ಕೆ.ಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರ ಬಂದು ಡೆಲ್ಲಿ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಈ ಹಿಂದೆ ಲಕ್ನೋ ತಂಡದಲ್ಲಿರುವಾಗ ಮಾಲೀಕರಿಂದ ಮೈದಾನದಲ್ಲೇ ಅವಮಾನಕ್ಕೆ ಒಳಗಾಗಿದ್ದರು. ಕನ್ನಡಿಗನ ಕೋಪ ಈಗ ಬ್ಯಾಟ್​ನಿಂದ ಸ್ಫೋಟಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

Advertisment

ಆಂಧ್ರದ ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ಸಂಜೆ ಲಕ್ನೋ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಅಖಾಡಕ್ಕೆ ಇಳಿಯುತ್ತಿದೆ. ಡೆಲ್ಲಿ ಟೀಮ್​ನಲ್ಲಿರುವ ಕೆ.ಎಲ್ ರಾಹುಲ್​ ಎಂದಿನಂತೆ ಬ್ಯಾಟಿಂಗ್​ನಲ್ಲಿ ಅಬ್ಬರಿಸಹುದು. ಏಕೆಂದರೆ ಚಾಂಪಿಯನ್​ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕನ್ನಡಿಗ ಈಗ ಐಪಿಎಲ್​ನಲ್ಲಿಯೂ ಅದನ್ನೇ ಮುಂದುವರೆಸುವ ಸಾಧ್ಯತೆ ಇದೆ.

publive-image

ಇಂದಿನ ಪಂದ್ಯ 2 ಎರಡು ಟೀಮ್​ಗಳ ನಡುವಿನ ಬ್ಯಾಟಲ್ ಮಾತ್ರವಾಗಿಲ್ಲ. ಲಕ್ನೋ ವಿರುದ್ಧ ಕೆ.ಎಲ್ ರಾಹುಲ್​ ಅವರ ಪ್ರತಿಷ್ಠೆಯ ಸಮರವಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕು ಎಂದ್ರೆ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ರಾಹುಲ್ ಎಂದೇ ಹೇಳಬಹುದು​​​​​​​​​​. ಲಕ್ನೋ ತಂಡದ ಮಾಜಿ ಕ್ಯಾಪ್ಟನ್​ ಕೆ.ಎಲ್.ರಾಹುಲ್. ತಾನೇ ಕಟ್ಟಿದ್ದ ತಂಡದಿಂದ ತಾನೇ ಹೊರ ಬಂದು ಡೆಲ್ಲಿಯಿಂದ ಕಣಕ್ಕೆ ಇಳಿಯುತ್ತಿದ್ದಾರೆ.

ಕಳೆದ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್​​ ಎದುರಿನ ಸೋಲಿನ ಬಳಿಕ ಲಕ್ನೋ ಕ್ಯಾಪ್ಟನ್​​ ರಾಹುಲ್​ಗೆ ಅವಮಾನ ಎದುರಾಯಿತು. ನಾಯಕನ ಬೆನ್ನಿಗೆ ನಿಲ್ಲಬೇಕಿದ್ದ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲೇ ರಾಹುಲ್​ಗೆ ಅಪಮಾನ ಮಾಡಿದ್ದರು. ಅಂದು ಎಲ್ಲರ ಮಧ್ಯೆ ಸಂಜೀವ್ ಗೋಯೆಂಕಾ ನಿಂದಿಸಿದ್ದರು. ಬಳಿಕ ಕೆ.ಎಲ್.ರಾಹುಲ್​ ಬ್ಯಾಟಿಂಗ್ ಬಗ್ಗೆ ಹಲವು ಬಾರಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟು ಕನ್ನಡಿಗನ ಆಟದ ಬಗ್ಗೆ ಮಾತನಾಡಿ ಸೆಲ್ಫೀಶ್ ಪ್ಲೇಯರ್ ಎಂದು ಪರೋಕ್ಷವಾಗಿ ನಿಂದಿಸಿದ್ದರು.

Advertisment

ಇದನ್ನೂ ಓದಿ: ಹೊಸ ಜೆರ್ಸಿಯಲ್ಲಿ RCB ಪ್ಲೇಯರ್ಸ್ ಮಿಂಚಿಂಗ್​.. ಗ್ರೀನ್ ಜೆರ್ಸಿ ಧರಿಸಿ ಅಖಾಡಕ್ಕೆ ಇಳಿಯೋದು ಯಾವಾಗ?

publive-image

ಇಷ್ಟೆಲ್ಲಾ ಅಪಮಾನ ಎದುರಿಸಿದ್ದ ರಾಹುಲ್​ ಈಗ ಡೆಲ್ಲಿ ಟೀಮ್​ನಲ್ಲಿದ್ದಾರೆ. ಡೆಲ್ಲಿ ಮೊದಲ ಪಂದ್ಯವೇ ಲಕ್ನೋ ಎದುರು ತೊಡೆ ತಟ್ಟಲು ಸಜ್ಜಾಗಿದೆ. ಅಂದಾದ ಅಪಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕೆ.ಎಲ್ ರಾಹುಲ್ ಉತ್ಸುಕರಾಗಿದ್ದಾರೆ. ಈ ಎಲ್ಲ ಕಾರಣದಿಂದ ಕೆ.ಎಲ್.ರಾಹುಲ್​, ಇಂದಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್​​​​​​​​​​ ಆಗಿದ್ದಾರೆ ಎನ್ನಬಹುದು.

ತಮ್ಮ ಆಟವನ್ನ ಟೀಕಿಸಿ, ನಿಂದಿಸಿದ್ದ ಸಂಜೀವ್ ಗೋಯೆಂಕಾ ಮಾಲೀಕತ್ವದ ಲಕ್ನೋ ಎದುರೇ ರಾಹುಲ್ ಕಣಕ್ಕಿಳಿಯುತ್ತಿದ್ದಾರೆ. ಈ ಪಂದ್ಯದೊಂದಿಗೆ ಹೊಸ ಆಧ್ಯಾಯ ಆರಂಭಿಸುತ್ತಿರುವ ಕೆ.ಎಲ್.ರಾಹುಲ್, ಅಂದಿನ ಟೀಕೆ, ನಿಂದನೆಗೆ ಸಿಕ್ಸರ್​, ಬೌಂಡರಿಗಳ ವಿಶ್ವರೂಪ ತೋರಿಸಲು ಸಜ್ಜಾಗಿದ್ದಾರೆ. ಅಂದು ತಮ್ಮ ವಿರುದ್ಧ ಕೇಳಿ ಬಂದಿದ್ದ ಎಲ್ಲಾ ಮಾತುಗಳಿಗೆ ಬ್ಯಾಟ್​ನಿಂದ ಉತ್ತರಿಸುವ ಲೆಕ್ಕಾಚಾರದಲ್ಲಿದ್ದಾರೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment