/newsfirstlive-kannada/media/post_attachments/wp-content/uploads/2024/04/KKR.jpg)
ಕೋಲ್ಕತ್ತಾ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಇವತ್ತಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹೀನಾಯವಾಗಿ ಸೋತಿದೆ. ಸುಲಭ ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ 26 ಎಸೆತ ಬಾಕಿ ಇರುವಾಗಲೇ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.
ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿದ್ದು, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ಗಳಿಸಲಷ್ಟೇ ಶಕ್ತವಾಯಿತು. ನಾಯಕ ಕೆೆ.ಎಲ್ ರಾಹುಲ್ ಸೇರಿ ಯಾರೊಬ್ಬರು ಅರ್ಧ ಶತಕದ ಕಾಣಿಕೆ ನೀಡಲು ವಿಫಲರಾದರು.
162 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸುಲಭವಾಗಿ ದಕ್ಕಿದೆ. ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಅವರು ಮನಬಂದಂತೆ ಬೌಂಡರಿ ಬಾರಿಸಿದರು. 14 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದ ಫಿಲ್ ಸಾಲ್ಟ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀರೋ ಆದರು. 89 ರನ್‌ಗಳಿಸಿ ನಾಟೌಟ್ ಆದ ಫಿಲಿಪ್ ಸಾಲ್ಟ್ ಕೆಕೆಆರ್ ಗೆಲುವಿಗೆ ಕಾರಣಕರ್ತರಾದರು.
/newsfirstlive-kannada/media/post_attachments/wp-content/uploads/2024/04/KKR-LSG.jpg)
ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಫಿಲಿಪ್ ಸಾಲ್ಟ್ ಅವರು 2024ರ ಐಪಿಎಲ್ ಆ್ಯಕ್ಷನ್‌ನಲ್ಲಿ ಅನ್‌ಸೋಲ್ಡ್ ಆಗಿದ್ದರು. ರಾಯ್ಸ್ ಅವರಿಗೆ ಬದಲಿ ಆಟಗಾರರಾಗಿ ಎಂಟ್ರಿ ಕೊಟ್ಟಿರುವ ಫಿಲಿಪ್ ಸಾಲ್ಟ್ ಇದೀಗ ಕೆಕೆಆರ್ ಪರ ಅದ್ಭುತ ಆಟ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಫಿಲಿಪ್ ಸಾಲ್ಟ್ ಅವರ ಅಮೋಘ ಬ್ಯಾಟಿಂಗ್‌ನಿಂದ ಕೋಲ್ಕತ್ತಾ ನೈಟ್ ರೈಟರ್ಸ್ ಇಂದಿನ ಪಂದ್ಯವನ್ನು 8 ವಿಕೆಟ್‌ಗಳ ಅಂತರದಲ್ಲಿ ಗೆದ್ದು ಬೀಗಿದೆ.
/newsfirstlive-kannada/media/post_attachments/wp-content/uploads/2024/04/SRK.jpg)
ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಟರ್ಸ್ ಗೆಲ್ಲುತ್ತಿದ್ದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಖತ್ ಸೆಲಬ್ರೇಷನ್ ಮಾಡಿದ್ದಾರೆ. ಲಕ್ನೋ ವಿರುದ್ಧ ಕೋಲ್ಕತ್ತಾ ಭರ್ಜರಿ ಗೆಲುವು ಸಾಧಿಸೋ ಮೂಲಕ 2024ರ ಐಪಿಎಲ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ. ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್ ಆಡಿರೋ 5 ಪಂದ್ಯದಲ್ಲಿ 4ರಲ್ಲಿ ಗೆಲುವು ಸಾಧಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us