/newsfirstlive-kannada/media/post_attachments/wp-content/uploads/2024/12/KMF-NANDINI-DOSE-HITTU.jpg)
ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗಲು ಕ್ಷಣಗಣನೆ ಆರಂಭ ಅಗಿದೆ. ಪ್ರೋಟಿನ್​ಯುಕ್ತ ದೋಸೆ ಹಿಟ್ಟು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ಇದೇ ವಿಚಾರವಾಗಿ ಮಾಹಿತಿ ನೀಡಲು ಇಂದು ಮಧ್ಯಾಹ್ನ 12 ಗಂಟೆಗೆ ಕೆಎಂಎಫ್​ನಲ್ಲಿ ಪ್ರೆಸ್​ಮೀಟ್ ನಡೆಯಲಿದೆ
ನಿನ್ನೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಬಿಡುಗಡೆ ಮಾಡಲಾಗಿದೆ. ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟಿನಲ್ಲಿ ಪ್ರೋಟಿನ್ ಅಂಶವಿದೆ ಎಂದು ತಿಳಿಸಲಾಗಿದ್ದು. ಇನ್ನೇನು ಕೆಲವೇ ದಿನಗಳಲ್ಲಿ ಜನರಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
ಇನ್ನು ನಂದಿನಿ ದೋಸೆಹಿಟ್ಟು ಹಾಗೂ ಇಡ್ಲಿಹಿಟ್ಟಿನ ಬೆಲೆಯೂ ಕೂಡ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿಯೇ ಇವೆ. 450 ಗ್ರಾಂ ಹಿಟ್ಟಿನ ಬೆಲೆ 40 ರೂಪಾಯಿ ಇದ್ದು. 900 ಗ್ರಾಂ ಹಿಟ್ಟಿನ ಬೆಲೆ 80 ರೂಪಾಯಿಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕೆಎಂಎಪ್ ಹೇಳಿದೆ
ಇದೇ ಸಂಬಂಧವಾಗಿ ಇಂದು ಮಹತ್ವದ ಸುದ್ದಿಗೋಷ್ಠಿಯನ್ನು ಕೆಎಂಎಫ್ ಕರೆದಿದ್ದು. ಇನ್ನುಳಿದ ಮಾಹಿತಿಗಳನ್ನು ಕೆಎಂಎಫ್​ ನೀಡಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us