ಆರ್​ಸಿಬಿಯ ಕರ್ನಾಟಕದ ಅಭಿಮಾನಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ.. ಏನ್ ಗೊತ್ತಾ?

author-image
Bheemappa
Updated On
ಆರ್​ಸಿಬಿಯ ಕರ್ನಾಟಕದ ಅಭಿಮಾನಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ.. ಏನ್ ಗೊತ್ತಾ?
Advertisment
  • RCBಗೆ ನಂದಿನಿ ಬಲ, ಫ್ಯಾನ್ಸ್​ಗೆ ಮತ್ತೊಂದು ಎಮೋಷನಲ್ ಟಚ್
  • ಕೆಎಂಎಫ್​ ಅಧ್ಯಕ್ಷರು ಆರ್​ಸಿಬಿ ಜೊತೆ ಮಾತುಕತೆ ಮಾಡ್ತಾರಾ..?
  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ಗೆ ಪ್ರಾಯೋಜಕತ್ವ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗ್ರಾಹಕರನ್ನು ಹೆಚ್ಚ ಹೆಚ್ಚು ಸೆಳೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿಂದೆ ಟಿ20 ವರ್ಲ್ಡ್​​ಕಪನ್​ನಲ್ಲಿ ಎರಡು ವಿದೇಶಿ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು. ಈಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ಗೆ ಪ್ರಾಯೋಜಕತ್ವ (sponsorship) ನೀಡಲು ಮುಂದಾಗಿದೆ.

ಐಪಿಎಲ್​​ನಲ್ಲಿ ಎಲ್ಲ ಟೀಮ್​ಗಳ ಹೆಸರು ಒಂದು ಕಡೆಯಾದರೆ, ಆರ್​ಸಿಬಿಯ ಹೆಸರಿಗೆ ಇರುವ ಕ್ರೇಜ್ ಬೇರೆಯದ್ದೆ ಇದೆ. ವಿದೇಶದಲ್ಲೂ ಆರ್​ಸಿಬಿ ಅಭಿಮಾನಿಗಳು ಇರುವುದು ಸಾಮಾನ್ಯವಾಗಿದೆ. ಐಪಿಎಲ್​ ಬಂದರೆ ಆರ್​ಸಿಬಿಯ ಪ್ರತಿ ಸುದ್ದಿಯು ಕೂಡ ಅಭಿಮಾನಿಗಳಿಗೆ ಮುಖ್ಯವಾಗಿರುತ್ತದೆ. ಟೂರ್ನಿಯಲ್ಲಿ ಹವಾ ಕ್ರಿಯೇಟ್ ಮಾಡುವ ಆರ್​ಸಿಬಿಗೆ ಕೆಎಂಎಫ್ ಸಿಹಿ ಸುದ್ದಿ ನೀಡಿದೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್​​ರನ್ನ ಮೆಂಟಲಿಯಾಗಿ ಕೆಣಕುತ್ತಿರುವ ಆಸ್ಟ್ರೇಲಿಯನ್ನರು.. ಫೀಲ್ಡ್​ ಹೊರಗೂ ಮೈಂಡ್​ಗೇಮ್

publive-image

2025ರ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಸ್ಪಾನ್ಸರ್​ ಮಾಡಲು ಕೆಎಂಎಫ್​ ಚಿಂತನೆ ನಡೆಸಿದೆ. ತಮ್ಮ ಬಜೆಟ್​ ಅನುಗುಣವಾಗಿ ಆರ್​ಸಿಬಿ ಮ್ಯಾನೇಜ್​ಮೆಂಟ್​ ಜೊತೆ ಮಾತುಕತೆ ನಡೆಸಲು ಯೋಜಿಸಲಾಗಿದೆ. ಬಜೆಟ್​​ಗೆ ಒಪ್ಪಿದರೆ ಸ್ಪಾನ್ಸರ್ ಮಾಡುತ್ತೇವೆ ಎಂದು ಕೆಎಂಎಫ್​ ಅಧ್ಯಕ್ಷ ಭೀಮಾನಾಯ್ಕ್‌ ಅವರು ಹೇಳಿದ್ದಾರೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) 2024ರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್​ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಎರಡು ತಂಡದ ಆಟಗಾರರ ಜೆರ್ಸಿ ಮೇಲೆ ನಂದಿನಿ ಬ್ರ್ಯಾಂಡ್​ ಹೆಸರು ಕಾಣಿಸಿಕೊಂಡಿತ್ತು. ಇದರಂತೆ ಆರ್​ಸಿಬಿ ಹಾಗೂ ಕೆಎಂಎಫ್ ನಡುವಿನ ಮಾತುಕತೆ ಯಶಸ್ವಿಯಾದರೆ ಆರ್​ಸಿಬಿ ಜೆರ್ಸಿ ಮೇಲೆ ನಂದಿನ ಬ್ರ್ಯಾಂಡ್​ ರಾರಾಜಿಸಲಿದೆ.​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment