newsfirstkannada.com

ಐದು ವರ್ಷ ಸಿದ್ದರಾಮಯ್ಯರೇ CM ಆಗಿರಬೇಕು- ಬೂದಿ ಮುಚ್ಚಿದ್ದ ಕೆಂಡ ಮತ್ತೆ ಕೆದಕಿದ ಸಚಿವ ಕೆ.ಎನ್.ರಾಜಣ್ಣ

Share :

16-09-2023

    ಡಿ.ಕೆ.ಶಿವಕುಮಾರ್ ಬೆಂಬಲಿಗರ ಕಣ್ಣು ಕೆಂಪಾಗಿಸಿದ ರಾಜಣ್ಣ

    ಅನ್ನಭಾಗ್ಯ ಯೋಜನೆಯನ್ನ ಯಾರೂ ಮಾಡಲಿಲ್ಲ- K.N.ರಾಜಣ್ಣ

    ನ್ಯೂಸ್​ಫಸ್ಟ್​ಗೆ ರಾಜಣ್ಣ ನೀಡಿದ ಸ್ಫೋಟಕ ಹೇಳಿಕೆ ಏನು..?

ಬೆಂಗಳೂರು: ಸಿದ್ದರಾಮಯ್ಯ ಅವರೇ ಐದೂ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಬೇಕು ಅಂತ ಹೇಳೋ ಮೂಲಕ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಬೂದಿ ಮುಚ್ಚಿದ ಕೆಂಡದಂತಿದ್ದ ವಿಚಾರವನ್ನು ಮತ್ತೆ ಕೆದಕಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಸಿಎಂ ಅವಕಾಶ ಸಿಗುತ್ತೋ ಇಲ್ಲವೋ ಎಂಬ ಚರ್ಚೆ ಕಾವೇರಿರುವ ಹೊತ್ತಲ್ಲೇ ನ್ಯೂಸ್​ಫಸ್ಟ್​ಗೆ ಕೆ.ಎನ್​.ರಾಜಣ್ಣ, Exclusive ಆಗಿ ಮಾತನಾಡಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಿದ್ದರಾಮಯ್ಯ ಸಿಎಂ ಆಗಿರಬೇಕು. ಅವರು ಬಡವರ ಪರವಾದ ಗಟ್ಟಿ ನಿರ್ಧಾರಗಳು ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಅನ್ನಭಾಗ್ಯ ಯೋಜನೆಯನ್ನ ಯಾವೊಬ್ಬ ನಾಯಕರೂ ಮಾಡಲಿಲ್ಲ. ಬೇರೆ ಮುಖಂಡರಲ್ಲಿ ಕಾಣದ ದೂರದೃಷ್ಟಿ ಸಿದ್ದರಾಮಯ್ಯ ಅವರಲ್ಲಿದೆ. ಇದೇ ಕಾರಣಕ್ಕೆ ಅವರನ್ನ ನಾನು ಮೆಚ್ಚುತ್ತೇನೆ. ಅವರೇ 5 ವರ್ಷಗಳ ಕಾಲ ಸಿಎಂ ಆಗಿರಬೇಕು ಎಂದು ಪ್ರತಿಪಾದಿಸಿದ್ದಾರೆ.

ರಾಜಣ್ಣ ಹೇಳಿದ್ದೇನು..?

ಸಿದ್ದರಾಮಯ್ಯ ಮುಂದಿನ ಐದು ವರ್ಷಗಳವರೆಗೆ ಮುಖ್ಯಮಂತ್ರಿಯಾಗಿ ಇರಬೇಕು. ಅವರು ಮುಖ್ಯಮಂತ್ರಿಯಾದ್ರೆ ಕರ್ನಾಟಕ ರಾಜ್ಯ ಸರ್ವತೋಮುಖ ಅಭಿವೃದ್ಧಿ ಕಾಣ್ತದೆ. ಅವರು ಮುಖ್ಯಮಂತ್ರಿಯಾಗಿಯೇ ಇರುತ್ತಾರೆ ಅನ್ನೋ ವಿಶ್ವಾಸ ನನಗೆ ಇದೆ. ಅವರಿಗೆ ಪೂರಕವಾಗಿ ಕಾಂಗ್ರೆಸ್​ ಪಕ್ಷದ ಹೈಕಮಾಂಡ್ ಕೂಡ ಇದೆ ಎಂಬ ಭರವಸೆ ಇದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐದು ವರ್ಷ ಸಿದ್ದರಾಮಯ್ಯರೇ CM ಆಗಿರಬೇಕು- ಬೂದಿ ಮುಚ್ಚಿದ್ದ ಕೆಂಡ ಮತ್ತೆ ಕೆದಕಿದ ಸಚಿವ ಕೆ.ಎನ್.ರಾಜಣ್ಣ

https://newsfirstlive.com/wp-content/uploads/2023/09/SIDDU-4-1.jpg

Load More