newsfirstkannada.com

ಬಾಬ್ರಿ ಮಸೀದಿ ಬೀಳಿಸಿದ್ದಾಗ ಹೋಗಿದ್ದೆ, ಒಂದು ಟೆಂಟಲ್ಲಿ 2 ಗೊಂಬೆ ಇಟ್ಟು ಶ್ರೀರಾಮ ಅಂತೇಳಿದ್ರು; ಕೆ.ಎನ್​ ರಾಜಣ್ಣ

Share :

Published January 16, 2024 at 7:33pm

Update January 17, 2024 at 12:05pm

    ಬಿಜೆಪಿ ಶ್ರೀರಾಮನೋ, ಮೋದಿ ಶ್ರೀರಾಮನೋ ನೋಡೋಣ

    ಅಂದು ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು

    ಅಚ್ಚರಿಯ ಹೇಳಿಕೆ ನೀಡಿದ ಸಹಕಾರ ಸಚಿವ ಕೆ.ಎನ್​ ರಾಜಣ್ಣ

ತುಮಕೂರು: ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಒಂದು ಟೆಂಟಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಅಂತಾ ಹೇಳ್ತಿದ್ರು ಎಂದು ಸಹಕಾರ ಸಚಿವ ಕೆ.ಎನ್​ ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆ.ಎನ್​ ರಾಜಣ್ಣ ಮಾತನಾಡಿದ್ದು, ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರೆ ಅಲ್ಲಿ. ಇನ್ನೊಂದು ಐದಾರು ತಿಂಗಳು ಕಳೀಲಿ ಏನೇನ್ ಬರ್ತಾವೆ, ಏನೇನು ಅಂತೇಳಿ. ಯಾವತ್ತೂ ಕೂಡ ಶ್ರೀರಾಮ ಎಲ್ಲಾ ಜನರನ್ನ ಆಶೀರ್ವದಿಸುವ ದೇವರು. ಅದಕ್ಕೋಸ್ಕರ ರಾಮರಾಜ್ಯದ ಕಲ್ಪನೆ ಬಂದಿದ್ದು. ಈಗ ಅದು ಬಿಜೆಪಿ ಶ್ರೀರಾಮನೋ, ಮೋದಿ ಶ್ರೀರಾಮನೋ ನೋಡೋಣ ಅದು ಏನಾಗುತ್ತೆ ಅಂತ. ನಮ್ಮೂರಲ್ಲಿ ನೂರಾರು ವರ್ಷ ಇತಿಹಾಸ ಇರುವಂತಹ, ಪಾವಿತ್ರ್ಯವಾಗಿರುವ ಶ್ರೀರಾಮನ ದೇವಸ್ಥಾನಗಳಿವೆ. ಈಗ ಅದನ್ನ ಬಿಟ್ಟು ಇವರು ಚುನಾವಣೆಗೋಸ್ಕರ ದೇವಸ್ಥಾನಗಳನ್ನ ಕಟ್ಟಿ ಜನರಿಗೆ ಮೋಸ ಮಾಡೋ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ನಾವು ನಮ್ಮೂರಿನ ದೇವಸ್ಥಾನಕ್ಕೆ ಹೋದ್ರೆ ಅಲ್ಲೊಂಥರಾ ವೈಬ್ರೇಶನ್ ಇರುತ್ತೆ, ಭಕ್ತಿ ತುಂಬಿ ಬರುತ್ತೆ. ಆದರೆ ಅಲ್ಲಿ ಅವತ್ತು ನನಗೇನು ಅನಿಸಲೇ ಇಲ್ಲಾ. ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು. ಇವತ್ತು ಅಲ್ಲಿ ಏನ್ ಮಾಡವ್ರೆ ಗೊತ್ತಿಲ್ಲಾ, ಮುಂದೆ ಅಲ್ಲಿಗೆ ಹೋದಾಗ ನೋಡೋಣ. ಜನರ ಭಾವನೆಗಳನ್ನ, ಅವರು ಕೇಳ್ತಾರೆ ಅಂತಾ ಕೆಟ್ಟ ದಾರಿಗೆ ತೆಗೆದುಕೊಂಡು ಹೋಗ್ಬಾರ್ದು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಬ್ರಿ ಮಸೀದಿ ಬೀಳಿಸಿದ್ದಾಗ ಹೋಗಿದ್ದೆ, ಒಂದು ಟೆಂಟಲ್ಲಿ 2 ಗೊಂಬೆ ಇಟ್ಟು ಶ್ರೀರಾಮ ಅಂತೇಳಿದ್ರು; ಕೆ.ಎನ್​ ರಾಜಣ್ಣ

https://newsfirstlive.com/wp-content/uploads/2024/01/K-N-rajanna.jpg

Load More