newsfirstkannada.com

ರೈಲಿನಲ್ಲಿ ಬುದ್ಧಿ ಹೇಳಿದ್ದೇ ತಪ್ಪಾಯ್ತು.. ಪೊಲೀಸ್ ಅಧಿಕಾರಿಗೆ ಚಾಕು ಇರಿದು ಕಿಡಿಗೇಡಿಗಳು ಪರಾರಿ

Share :

Published February 28, 2024 at 2:40pm

  ಗೋಲ್ ಗುಂಬಜ್ ಎಕ್ಸ್‌ಪ್ರೆಸ್​ ರೈಲಿನಲ್ಲಿ ಘಟನೆ

  ಸತೀಶ್ ಚಂದ್ರ ಚಾಕು ಇರಿತಕ್ಕೆ ಒಳಗಾದ ರೈಲ್ವೆ ಪೇದೆ

  ಅಧಿಕಾರಿಗೆ ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಂಡ್ಯ: ಮದ್ದೂರು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಪೇದೆಗೆ ಚಾಕು ಇರಿಯಲಾಗಿದ್ದು, ಗಂಭೀರಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗೋಲ್ ಗುಂಬಜ್ ಎಕ್ಸ್‌ಪ್ರೆಸ್​ ರೈಲಿನಲ್ಲಿ ಘಟನೆ ನಡೆದಿದೆ.

ಸತೀಶ್ ಚಂದ್ರ ಚಾಕು ಇರಿತಕ್ಕೆ ಒಳಗಾದ ರೈಲ್ವೆ ಪೊಲೀಸ್ ಪೇದೆ. ಗಾಂಜಾ ಮತ್ತಿನಲ್ಲಿ ದುಷ್ಕರ್ಮಿಗಳಿಂದ ದುಷ್ಕೃತ್ಯ ನಡೆದಿದೆ. ಮಂಡ್ಯ ರೈಲ್ವೇ ಔಟ್ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್ ಚಂದ್ರ, ಕರ್ತವ್ಯಕ್ಕಾಗಿ ಮದ್ದೂರು ಕಡೆಗೆ ಪ್ರಯಾಣ ಮಾಡ್ತಿದ್ದರು. ರೈಲಿನಲ್ಲಿ ಗಾಂಜಾ ಮಿಶ್ರಿತ ಸಿಗರೇಟ್ ಸೇವನೆ ಮಾಡುತ್ತಿದ್ದ ಯುವಕರಿಗೆ ಆಕ್ಷೇಪಣೆ ಮಾಡಿದ್ದರು.

ಈ ವೇಳೆ 6 ಯುವಕರ ಗುಂಪು ಹಾಗೂ ಪೇದೆ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಮದ್ದೂರು ರೈಲ್ವೆ ನಿಲ್ದಾಣ ಬರುತ್ತಿದ್ದಂತೆ ಮತ್ತಷ್ಟು ಕಿರಿಕ್ ತೆಗೆದು, ಚಾಕು ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡ ರೈಲ್ವೆ ಪೊಲೀಸ್ ಪೇದೆಯನ್ನ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಇಬ್ಬರು ಯುವಕರನ್ನ ವಶಕ್ಕೆ ಪಡೆದಿದ್ದು, ಉಳಿದ ನಾಲ್ವರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈಲಿನಲ್ಲಿ ಬುದ್ಧಿ ಹೇಳಿದ್ದೇ ತಪ್ಪಾಯ್ತು.. ಪೊಲೀಸ್ ಅಧಿಕಾರಿಗೆ ಚಾಕು ಇರಿದು ಕಿಡಿಗೇಡಿಗಳು ಪರಾರಿ

https://newsfirstlive.com/wp-content/uploads/2024/02/MND-TRAIN.jpg

Load More