ಡಿಮ್ಯಾಂಡ್ ಕಳೆದುಕೊಂಡ ಗೋವಾ.. ಟಾಟಾ ಬೈಬೈ ಅಂತಿದ್ದಾರೆ ವಿದೇಶಿಗರು.. ಕಾರಣ ಏನು?

author-image
Gopal Kulkarni
Updated On
ಡಿಮ್ಯಾಂಡ್ ಕಳೆದುಕೊಂಡ ಗೋವಾ.. ಟಾಟಾ ಬೈಬೈ ಅಂತಿದ್ದಾರೆ ವಿದೇಶಿಗರು.. ಕಾರಣ ಏನು?
Advertisment
  • 8 ಕೋಟಿಯಿಂದ ಲಕ್ಷಕ್ಕೆ ತಲುಪಿದ ಗೋವಾದ ವಿದೇಶಿ ಪ್ರವಾಸಿಗರ ಸಂಖ್ಯೆ
  • ಬೀಚ್​ಗಳ ಸ್ವರ್ಗ ಗೋವಾದಿಂದ ವಿಮುಖರಾಗಿದ್ದು ಏಕೆ ವಿದೇಶಿ ಪ್ರವಾಸಿಗರು?
  • ರಷ್ಯಾ-ಉಕ್ರೇನ್ ಯುದ್ಧವೊಂದೇ ಕಾರಣವಾ? ಬೇರೆ ಕಾರಣಗಳು ಇವೆಯಾ?

ಗೋವಾವನ್ನು ಬೀಚ್​​ಗಳ ಸ್ವರ್ಗ ಎಂದೇ ಕರೆಯಲಾಗುತ್ತದೆ. ಗೆಳೆಯರು ಬಳಗ ಎಲ್ಲಾದರೂ ಟೂರ್ ಪ್ಲಾನ್ ಮಾಡಬೇಕು ಅಂದ್ರೆ ಅವರ ಲಿಸ್ಟ್​ನಲ್ಲಿ ಮೊದಲು ಗೋವಾನೇ ಇರುತ್ತೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಭಾರತೀಯ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು ವರ್ಷಕ್ಕೆ ಲಕ್ಷಾಂತರ ಜನರು ಗೋವಾ ಕಡೆಗೆ ತಮ್ಮ ಕಾರ್​ನ್ನು ತಿರುಗಿಸುತ್ತಾರೆ. ಅದರಲ್ಲೂ ರಷ್ಯಾ ಹಾಗೂ ಉಳಿದ ವಿದೇಶಿ ಪ್ರವಾಸಿಗರು ಕೂಡ ಹೆಚ್ಚು ಆಕರ್ಷಿತರಾಗುವುದು ಗೋವಾ ಕಡೆಗೆ.  ಅಕ್ಟೋಬರ್​ನಿಂದ ಡಿಸೆಂಬರ್​ವರೆಗಂತೂ ಗೋವಾ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತದೆ. ಅದರಲ್ಲೂ ವಿದೇಶಿ ಪ್ರವಾಸಿಗರನ್ನು ನಾವು ಹೆಚ್ಚು ಕಾಣುವುದೇ ಗೋವಾದಲ್ಲಿ. ಆದ್ರೆ ವಿಪರ್ಯಾಸ ಅಂದ್ರೆ ದಿನೇ ದಿನೇ ಗೋವಾ ತನ್ನ ಸೆಳೆತನ್ನು ಕಳೆದುಕೊಳ್ಳುತ್ತಿದೆ. ವಿದೇಶಿ ಪ್ರವಾಸಿಗರ ಸಂಖ್ಯೆ ಏಕಾಏಕಿ ಕುಸಿದಿದೆ.

publive-image

ಇದನ್ನೂ ಓದಿ:ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ಹಠಾತ್ ನಿಧನ; ಹಲವು ಅನುಮಾನ

ದಕ್ಷಿಣ ಏಷಿಯಾದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಗೋವಾ. ಈಗ ದಿನೇ ದಿನೇ ತನ್ನತ್ತ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಉದ್ಯಮಿ ರಾಮಾನುಜ ಮುಖರ್ಜಿ ಎಂಬುವವರು ಆತಂಕದ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗೋವಾ ಎದುರಿಸುತ್ತಿರುವ ತುಂಬಾ ಗಂಭೀರವಾದ ಸಮಸ್ಯೆಯೊಂದನ್ನು ಹಂಚಿಕೊಂಡಿದ್ದಾರೆ. 2019 ರಿಂದ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಪ್ರಮುಖವಾಗಿ ಅತಿಹೆಚ್ಚು ರಷಿಯನ್ ಹಾಗೂ ಬ್ರಿಟನ್ ಪ್ರವಾಸಿಗರು ಗೋವಾಗೆ ಭೇಟಿ ನೀಡುತ್ತಿದ್ದರು.

publive-image

ಆದ್ರೆ ಈಗ ಅವರೆಲ್ಲಾ ಈಗ ಶ್ರೀಲಂಕಾದತ್ತ ಮುಖ ಮಾಡುತ್ತಿದ್ದಾರೆ ಎಂದು ಅಂಕಿ ಅಂಶಗಳ ಸಮೇತ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಭಾರತೀಯ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣದಲ್ಲಿ ಇಂದಿಗೂ ಕೂಡ ಗೋವಾ ಮುಂಚೂಣಿಯಲ್ಲಿದೆ ಆದ್ರೆ ವಿದೇಶಿ ಪ್ರವಾಸಿಗರ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ವಿಪರೀತವಾಗಿ ಇಳಿಕೆ ಕಂಡಿದೆ ಎಂದು ರಾಮಾನುಜ ಮುಖರ್ಜಿ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ

2019ರಲ್ಲಿ ಗೋವಾಗಿ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ ಒಟ್ಟು 8.5 ಕೋಟಿಯಷ್ಟಿತ್ತು. ಅದರ ಹಿಂದಿನ ವರ್ಷಗಳಲ್ಲಿಯೂ ಕೂಡ 6 ರಿಂದ 7.5 ಕೋಟಿ ವಿದೇಶಿ ಪ್ರವಾಸಿಗರು ಗೋವಾಗೆ ಭೇಟಿ ನೀಡಿದ್ದರು. ಆದ್ರೆ 2020 ರಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. 2020ರಲ್ಲಿ ಗೋವಾಗೆ ಭೇಟಿ ನೀಡಿದ ವಿದೇಶಿಗರ ಸಂಖ್ಯೆ ಕೇವಲ ಅಂದ್ರೆ ಕೇವಲ 2 ಲಕ್ಷ. ಇದು ನಿಜಕ್ಕೂ ಆತಂಕ ಸೃಷ್ಟಿಸುವ ಬೆಳವಣಿಗೆ. 8.5 ಕೋಟಿಯಿಂದ ಏಕಾಏಕಿ 2 ಲಕ್ಷಕ್ಕೆ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. 2021ರಲ್ಲಿ 5 ಲಕ್ಷ, 2022ರಲ್ಲಿ 10.2 ಲಕ್ಷ 2023ರಲ್ಲಿ 10.5 ಲಕ್ಷ ವಿದೇಶಿ ಪ್ರವಾಸಿಗರು ಗೋವಾಗೆ ಭೇಟಿ ನೀಡಿದ್ದಾರೆ. ಅಂದ್ರೆ ಕೋಟಿಯಿಂದ ಲಕ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಇದಕ್ಕೆ ಕಾರಣವೇನು ಎಂದು ನೋಡಿದರೆ ಮಧ್ಯಪ್ರಾಚ್ಯ ಹಾಗೂ ಯುರೋಪ್​ನಲ್ಲಿ ಸೃಷ್ಟಿಯಾಗಿರುವ ಸಂಘರ್ಷಗಳು.

ಇದನ್ನೂ ಓದಿ:ಅಂಬಾನಿ, ಅದಾನಿ ಅಲ್ಲವೇ ಅಲ್ಲ.. ಭಾರತದ ನಂ.1 ಕೊಡುಗೈ ದಾನಿ ಯಾರು ಗೊತ್ತಾ? ಎಷ್ಟು ಸಾವಿರ ಕೋಟಿ?

ಓ ಹೆರಾಲ್ಡೊ ಅವರು ಹೇಳುವ ಪ್ರಕಾರ ರಷಿಯಾ ಹಾಗೂ ಉಕ್ರೇನ್​ ನಡುವಿನ ಯುದ್ಧ ಮತ್ತು ಇಸ್ರೇಲ್ ಹಾಗೂ ಪ್ಯಾಲಿಸ್ತೀನ್ ನಡುವಿನ ಯುದ್ಧವೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ರಷ್ಯಾ ಪ್ರವಾಸಿಗರು ಈಗ ಭಾರತ ಪ್ರವಾಸ ಕೈಗೊಳ್ಳಬೇಕಾದಲ್ಲಿ ಫ್ಲೈಟ್ ಟಿಕೆಟ್​ ರೇಟ್​ನಲ್ಲಿ ತುಂಬಾ ಏರಿಕೆಯಾಗಿದೆ. ಹೀಗಾಗಿ ಅವರು ಶ್ರೀಲಂಕಾ, ಥೈಲ್ಯಾಂಡ್, ವಿಯೆಟ್ನಾಂ ಹಾಗೂ ಬಾಲಿಯಂತಹ ಸಮುದ್ರ ತೀರವನ್ನು ಅರಸಿಕೊಂಡು ಹೋಗತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದು ಮಾತ್ರವಲ್ಲ ಅಲ್ಲಿಗೆ ಪ್ರಯಾಣ ಬೆಳೆಸುವುದು ಗೋವಾಗೆ ಪ್ರಯಾಣ ಬೆಳೆಸಿದಷ್ಟು ದುಬಾರಿ ಆಗುವುದಿಲ್ಲ. ಗೋವಾಗಿಂತ ಹೆಚ್ಚು ಮೂಲಭೂತ ಸೌಕರ್ಯಗಳು ಅಲ್ಲಿ ನಮಗೆ ಕಾಣಸಿಗುತ್ತವೆ. ಸೌಲಭ್ಯಗಳ ವಿಚಾರದಲ್ಲಿ ಅವು ಗೋವಾಗಿಂತ ಹೆಚ್ಚು ಮುಂದುವರಿದಿವೆ ಹೀಗಾಗಿ ಗೋವಾಗೆ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.


">December 19, 2023

ಗೋವಾದಲ್ಲಿ ವಿಪರೀತ ಎನಿಸುವಷ್ಟು ದುಬಾರಿ ವಸತಿ, ಊಟ ಹಾಗೂ ಸಾರಿಗೆ ವಿಚಾರದಲ್ಲಿಯೂ ಕೂಡ ಇದು ದುಬಾರಿಯಾದ ಕಾರಣ ವಿದೇಶಿ ಪ್ರವಾಸಿಗರು ಗೋವಾದಿಂದ ವಿಮುಖರಾಗಲು ಮೊದಲ ಕಾರಣ ಎಂದೇ ಹೇಳಲಾಗುತ್ತಿದೆ. ಯಾವುದೇ ಪ್ರವಾಸಿಗರು ಆಗಲಿ ಬಜೆಟ್ ಫ್ರೆಂಡ್ಲಿ ಪ್ರವಾಸಿ ತಾಣಗಳನ್ನೇ ಮೊದಲು ಆಯ್ಕೆ ಮಾಡುವುದು. ಆ ವಿಚಾರದಲ್ಲಿ ವಿಯೆಟ್ನಾಂ ಸದ್ಯ ವಿದೇಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ನೂತನ ಥೈಲ್ಯಾಂಡ್ ಎಂದೇ ಅದು ಗುರುತಿಸಿಕೊಂಡಿದೆ. ಕಡಿಮೆ ದರದಲ್ಲಿ ವಿಮಾನದ ಟಿಕೆಟ್​ಗಳು ಸಿಗುತ್ತಿವೆ. ಕಡಿಮೆ ದರದಲ್ಲಿ ಹೋಟೆಲ್ ವಸತಿಗಳು ಕೂಡ ಕೈಗೆಟುಕುವು ದರದಲ್ಲಿ ಸಿಗುತ್ತವೆ. ಹೀಗಾಗಿಯೇ ವಿದೇಶಿ ಪ್ರವಾಸಿಗರು ಈಗ ವಿಯೆಟ್ನಾಂ ಹಾಗೂ ಶ್ರೀಲಂಕಾದತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ ಎಂದೇ ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment