/newsfirstlive-kannada/media/post_attachments/wp-content/uploads/2024/04/coconut_water_GIRL.jpg)
ತೆಂಗಿನ ನೀರನ್ನು ಸಾಮಾನ್ಯವಾಗಿ ಎಳೆನೀರು ಎಂದಲೂ ಕರೆಯುತ್ತೇವೆ. ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವಂತ ಅದ್ಭುತವಾದ ಅಮೃತ ಎಂದೇ ಹೇಳಬಹುದು. ಏಕೆಂದರೆ ಈಗಿನ ನೀರಿನ ಶುದ್ಧಿಕರಣ ಯಂತ್ರಗಳಿಗಿಂತ ಇದರಲ್ಲಿನ ನೀರು ಹೆಚ್ಚು ಸ್ವಚ್ಚತೆ ಜೊತೆಗೆ ಹಲವಾರು ಪೋಷಕಾಂಶಗಳನ್ನ ಹೊಂದಿರುತ್ತದೆ. ನಮ್ಮ ದೇಹವನ್ನು ಚೈತನ್ಯ ಭರಿತ ಹಾಗೂ ನೀರಿನ ಸಮತೋಲನ ಕಾಪಾಡಿ ದೇಹವನ್ನು ಆರಾಮದಾಯಕವಾಗಿ ಇರುವಂತೆ ಮಾಡುತ್ತದೆ. ಅಲ್ಲದೇ ದೇಹದೊಳಗಿನ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುವುದಷ್ಟೇ ಅಲ್ಲ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಎಳನೀರನ್ನು ಶೀಯಾಳ, ಬೊಂಡ ಎಂಬ ಹೆಸರಿನಿಂದಲೂ ಕರೆಯುವುದು ಉಂಟು. ಆರೋಗ್ಯಪಾಲನೆ ಮತ್ತು ಚೈತನ್ಯವೃದ್ಧಿಗೆ ನೈಸರ್ಗಿಕವಾಗಿ ದೊರೆಯುವ ಶಕ್ತಿವರ್ಧಕ ಪಾನೀಯ ಎಂದೇ ತೆಂಗಿನ ನೀರು ಖ್ಯಾತಿ ಪಡೆದಿದೆ. ಕೂಲ್​ ಡ್ರಿಂಕ್ಸ್​ ಅನ್ನು ಸ್ಟೈಲ್​ ಆಗಿ ಕುಡಿಯುವುದಕ್ಕಿಂತ ಒಂದು ಎಳೆನೀರು ಕುಡಿದರೆ ದೇಹಕ್ಕೆ ಎಷ್ಟೋ ಒಳ್ಳೆಯದು ಆಗುತ್ತದೆ. ನಮಗೆ ಎನರ್ಜಿ ಕೊಡುವ ಪಾನೀಯ ಎಂದರೆ ಶೀಯಾಳ ಆಗಿದೆ. ಆ ಬಗ್ಗೆ ತಿಳಿಯುವುದೇ ಇವತ್ತಿನ ಆರ್ಟಿಕಲ್ ಆಗಿದೆ.
/newsfirstlive-kannada/media/post_attachments/wp-content/uploads/2024/04/coconut_water_1.jpg)
ಹೈಡ್ರೇಟ್ ಮಾಡುತ್ತದೆ: ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವೇ ಎಳೆನೀರು. ದೇಹವನ್ನು ಹೈಡ್ರೀಕರಿಸುವುದರ ಜೊತೆಗೆ ಹೆಚ್ಚಿನ ಪೋಷಕಾಂಶಗಳನ್ನ ನೀಡುತ್ತದೆ. ಅತಿಯಾದ ತಾಪಮಾನದ ವೇಳೆ ಬರುವಂತ ಕಾಯಿಲೆಗಳಿಂದ ಇದು ನಮ್ಮನ್ನು ರಕ್ಷಣೆ ಮಾಡುತ್ತದೆ.
ಆರೋಗ್ಯಕರ ತ್ವಚೆ ಉತ್ತಮ: ತೆಂಗಿನ ನೀರಿನ ಹೈಡ್ರೇಟಿಂಗ್ ಗುಣಲಕ್ಷಣಗಳು ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದು ನಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದು ಅಲ್ಲದೇ ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.
ಆರೋಗ್ಯಕರ ರಕ್ತದೊತ್ತಡ: ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಅಂಶವು ಆರೋಗ್ಯಕರ ರಕ್ತದೊತ್ತಡದ ಮಟ್ಟಗಳಿಗೆ ಕಾರಣವಾಗುತ್ತದೆ. ಇದು ಹೃದಯರಕ್ತನಾಳದ ವ್ಯವಸ್ಥೆಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ: ಎಳೆನೀರು ದೇಹದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರ ಜೊತೆಗೆ ಮಲಬದ್ಧತೆಯನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ. ಈ ಬಗ್ಗೆ ಅಧ್ಯಯನಗಳು ಸ್ಪಷ್ಟಪಡಿಸುತ್ತಾವೆ.
ನೀರಿನ ಸಮತೋಲನ ಕಾಪಾಡುತ್ತೆ: ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂನಿಂದ ತುಂಬಿರುವ ತೆಂಗಿನ ನೀರು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡುತ್ತದೆ. ವ್ಯಾಯಾಮದ ನಂತರ ಎಳೆನೀರು ಕುಡಿಯುವುದರಿಂದ ಪುನರ್ಜಲೀಕರಣ (Rehydration) ಪಾನೀಯವಾಗಿದೆ.
ಇದನ್ನೂ ಓದಿ: ರಾಯಚೂರು ಹನುಮಾನ್ ದೇವಾಲಯಕ್ಕೆ ಭೇಟಿ ಕೊಟ್ಟ ಕಿಚ್ಚ ಸುದೀಪ್ ದಂಪತಿ; ಏನಿದರ ವಿಶೇಷ?
/newsfirstlive-kannada/media/post_attachments/wp-content/uploads/2024/04/coconut_water.jpg)
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಥವಾ ತಿಂಡಿಯ ಬಳಿಕ ಎಳೆನೀರು ಕುಡಿಯುವುದು ಉತ್ತಮ. ಆದರೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಾಯಾರಿಕೆ ಆಗುವುದರಿಂದ ಯಾವುದೇ ಸಮಯದಲ್ಲಾದರೂ ನಾವು ಎಳೆನೀರನ್ನು ಕುಡಿಯಬಹುದು. ಈ ನೀರಿನಲ್ಲಿರುವ ಜೀವಸತ್ವಗಳು, ಖನಿಜಗಳು ರಕ್ತ ಸಂಚಾರಕ್ಕೆ ನೇರವಾಗುತ್ತವೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್ ಕಡಿಮೆ ಮಾಡಿ ತೂಕ ಇಳಿಕೆಗೂ ಎಳೆನೀರು ಉಪಕಾರಿ ಎಂತಲೇ ಹೇಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us