Advertisment

ಕೊಡಗು: ಅಪ್ರಾಪ್ತೆಯ ರುಂಡ ಪತ್ತೆ.. ಕೊಲೆಗಾರ ತಲೆ ಬರುಡೆಯನ್ನು ಎಲ್ಲಿ ಎಸೆದಿದ್ದ ಗೊತ್ತಾ?

author-image
AS Harshith
Updated On
ಕೊಡಗು: ಅಪ್ರಾಪ್ತೆಯ ರುಂಡ ಪತ್ತೆ.. ಕೊಲೆಗಾರ ತಲೆ ಬರುಡೆಯನ್ನು ಎಲ್ಲಿ ಎಸೆದಿದ್ದ ಗೊತ್ತಾ?
Advertisment
  • 16 ವರ್ಷದ ಅಪ್ರಾಪ್ತೆಯನ್ನು ಕೊಂದ 34 ವರ್ಷದ ಕೊಲೆಗಾರ ಅರೆಸ್ಟ್​
  • ನಿಶ್ಚಿತಾರ್ಥ ಮಾಡಿಕೊಂಡ ದಿನವೇ ಆಕೆಯನ್ನು ಕೊಂದು ಬಿಟ್ಟ
  • ಕತ್ತಿಯಿಂದ ಮೀನಾಳ ರುಂಡ ಬೇರ್ಪಡಿಸಿ ಎಸ್ಕೇಪ್​ ಆಗಿದ್ದ

ಕೊಡಗು: ನಿಶ್ಚಿತಾರ್ಥ ಮಾಡಿಕೊಂಡು, ವರನ ಕೈಯಾರೆ ಸಾವನ್ನಪ್ಪಿದ ಅಪ್ರಾಪ್ತೆ ರುಂಡ ಕೊನೆಗೂ ಸಿಕ್ಕಿದೆ. ಆರೋಪಿ ಪ್ರಕಾಶನನ್ನು  ಸ್ಥಳ ಮಹಜರು ಮಾಡಿದಾಗ ಬಾಲಕಿ ಮೀನಾಳ ತಲೆ ಎಸೆದ ಜಾಗವನ್ನು ತೋರಿಸಿದ್ದಾನೆ.

Advertisment

ಘಟನಾ ಸ್ಥಳದಿಂದ 50ಮೀ. ದೂರದಲ್ಲಿ ಅಪ್ರಾಪ್ತೆ ಮೀನಾಳ ರುಂಡ ಪತ್ತೆಯಾಗಿದೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ತನಿಖೆ ಮುಂದುವರೆದಿದೆ.

publive-image

ಏನಿದು ಘಟನೆ?

ಗುರುವಾರ ಸಂಜೆ ಸೋಮವಾರಪೇಟೆ ತಾ. ಕುಂಬಾರಗಡಿಗೆ ಗ್ರಾಮ 10ನೇ ತರಗತಿ ಪಾಸ್​ ಆಗಿದ್ದ ಬಾಲಕಿ ಮೀನಾಳನ್ನು ಪ್ರಕಾಶ ಹತ್ಯೆ ಮಾಡಿದ್ದನು. ಕತ್ತಿಯಿಂದ ಆಕೆಯ ರುಂಡವನ್ನು ಬೇರ್ಪಡಿಸಿದ್ದನು. ಬಳಿಕ ಆಕೆಯ ತಲೆಯನ್ನು ಕಾಡು ದಾರಿಯಲ್ಲಿ ಎಸೆದು ತನ್ನ ಮನೆ ಸೇರಿದ್ದನು. ಮನೆಗೆ ಹೋಗಿ ಅಲ್ಲಿದ್ದ ಕೋವಿ ಹಿಡಿದುಕೊಂಡು ಕಾಡಿನತ್ತ ಎಸ್ಕೇಪ್​ ಆಗಿದ್ದನು. ಆದರೆ ಒಂದು ದಿನ ಬಳಿಕ ಆರೋಪಿ ಪ್ರಕಾಶ ಪೊಲೀಸರಿಗೆ ಸಿಕ್ಕಿದ್ದಾನೆ.

publive-image

ಇಂದು ಬೆಳಗ್ಗೆ ಕೊಲೆಗಾರ ಪ್ರಕಾಶ ಪೊಲೀಸರ ಕೈಗೆ ಸಿಕ್ಕಿದ್ದು, ಆತನನ್ನು ವಿಚಾರಿಸಿ, ಕೊಲೆ ನಡೆದ ಜಾಗಕ್ಕೆ ಕರೆದುಕೊಂಡು ಬಂದಾಗ ಮೀನಾಳ ತಲೆ ಬುರೆಡೆ ಎಸೆದ ಜಾಗವನ್ನು ತೋರಿಸಿದ್ದಾನೆ.

Advertisment

ನಿಶ್ಚಿತಾರ್ಥ ಮಾಡಿಕೊಂಡ ಅಪ್ರಾಪ್ತೆಯ ಹತ್ಯೆ

ಮೀನಾಗೆ 16, ಆತನಿಗೆ 34. ಇಬ್ಬರು ಕಳೆದ 4 ತಿಂಗಳಿನಿಂದ ಪ್ರೀತಿಗೆ ಬಿದ್ದಿದ್ದರು. ಮನೆಯವರ ಒಪ್ಪಿಗೆ ಮೇರೆಗೆ ಎಸ್​ಎಸ್​ಎಲ್​ಸಿ ಫಲಿತಾಂಶದ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದೇ ದಿನ ಸಂಜೆ ಪ್ರಕಾಶನು ನೇರವಾಗಿ ಮೀನಾಳ ಮನೆಗೆ ಬಂದು ಆಕೆಯ ತಂದೆ-ತಾಯಿ ಮೇಲೆ ಅಹಲ್ಲೆ ಮಾಡಿ, ಆಕೆಯನ್ನು ಎಳೆದೊಯ್ದು ರುಂಡವನ್ನು ಕತ್ತರಿಸಿದ್ದಾನೆ. ನಂತರ ಎಲೆಮರೆಸಿಕೊಂಡಿದ್ದನು. ಕೊನೆಗೂ ಆರೋಪಿ ಈಗ ಪೊಲೀಸರಿಗೆ ಸಿಕ್ಕಿದ್ದು, ಆತನ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ತಾಯಿಗೆ ಗುಂಡಿಟ್ಟ.. ಹೆಂಡತಿಗೆ ಸುತ್ತಿಗೆಯಿಂದ ಹೊಡೆದ ಕೊಂದ.. ಮೂವರು ಮಕ್ಕಳ ಟೆರಸ್​ನಿಂದ ಎಸೆದು ಸಾಯಿಸಿದ..!

publive-image

ಸ್ಥಳ ಮಹಜರು ವೇಳೆ ವಿಚಿತ್ರ ಘಟನೆ

ಅಪ್ರಾಪ್ತ ಬಾಲಕಿ ಹತ್ಯೆಯ ಸ್ಥಳ ಮಹಜರು ವೇಳೆ ವಿಚಿತ್ರ ಘಟನೆ ನಡೆದಿದೆ. ರುಂಡ ಪತ್ತೆ ಸ್ಥಳದಲ್ಲಿ ಮೀನಾಳ ಸಹೋದರನ ಮೈಮೇಲೆ ಶಕ್ತಿ ಅವಾಹನೆಯಾಗಿದೆ. ರುಂಡ ಪತ್ತೆ ಸ್ಥಳಕ್ಕೆ ಆರೋಪಿ & ಬಾಲಕಿ ಸಹೋದರ ಹೋದಾಗ ಘಟನೆ ಸಂಭವಿಸಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment