ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ.. KRS​ ಡ್ಯಾಂನ ಒಳಹರಿವಿನಲ್ಲಿ ದಿಢೀರ್ ಏರಿಕೆ!

author-image
AS Harshith
Updated On
ಮಳೆ ಬಂತು ಬಂತು.. KRS ಡ್ಯಾಂನ ನೀರಿನ ಮಟ್ಟ 95 ಅಡಿಗೆ ಏರಿಕೆ! ಇಂದು ಒಳಹರಿವಿನ ಪ್ರಮಾಣ ಎಷ್ಟಿದೆ?
Advertisment
  • ಮಳೆಯಿಂದಾಗಿ KRS ಡ್ಯಾಂಗೆ ಹರಿದು ಬರುತ್ತಿದೆ ನೀರು
  • ಸದ್ಯ ಕೆಆರ್​ಎಸ್​ ಡ್ಯಾಂನಲ್ಲಿ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
  • ನಾಲೆ ಹಾಗೂ ಕುಡಿಯುವ ನೀರಿಗಾಗಿ ಎಷ್ಟು ಕ್ಯೂಸೆಕ್​ ಹೊರ ಬಿಡಲಾಗುತ್ತಿದೆ?

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂನ ಒಳಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ.

ನಿನ್ನೆಯಿಂದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಮಳೆಯ ಹಿನ್ನೆಲೆ ಕೆಆರ್‌ಎಸ್ ಡ್ಯಾಂಗೆ ನೀರು ಹರಿದು ಬರುತ್ತಿದೆ. 10,121 ಕ್ಯೂಸೆಕ್‌ಗೆ ಒಳಹರಿವು ಏರಿಕೆ ಕಂಡಿದೆ.

ಇದನ್ನೂ ಓದಿ: 60ಕ್ಕೂ ಹೆಚ್ಚು ನಾಯಿಗಳ ರೇಪ್​ ಆ್ಯಂಡ್​​ ಮರ್ಡರ್​.. ಪ್ರಸಿದ್ಧ ಪ್ರಾಣಿಶಾಸ್ತ್ರಜ್ಞನಿಗೆ 249 ವರ್ಷಗಳ ಕಾಲ ಜೈಲು ಶಿಕ್ಷೆ 

ನಿನ್ನೆ 2898 ಕ್ಯೂಸೆಕ್ ಒಳಹರಿವಿತ್ತು. ಆದರಿಂದು 10,121 ಕ್ಯೂಸೆಕ್‌ಗೆ ಏರಿಕೆ ಕಂಡಿದೆ. ಹೀಗಾಗಿ ಕೆಆರ್‌ಎಸ್ ನೀರಿನ ಮಟ್ಟ 105.40 ಅಡಿಗೆ ತಲುಪಿದೆ. ಡ್ಯಾಂ 124.80 ಅಡಿ ಗರಿಷ್ಠ ಮಟ್ಟ ಹೊಂದಿದೆ.

ಇದನ್ನೂ ಓದಿ: ಶಾಲಾ-ಕಾಲೇಜುಗಳಿಗೆ ರಜೆ.. ಧಾರಾಕಾರ ಮಳೆ, ಜಲಾಶಯಗಳಿಗೆ ಜೀವ ಕಳೆ, ಇನ್ನೂ 4 ದಿನ ವರುಣಾರ್ಭಟ..!

49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 27.347 ಟಿಎಂಸಿ ನೀರು ಸಂಗ್ರಹವಾಗಿದೆ. ನಾಲೆ ಹಾಗೂ ಕುಡಿಯುವ ನೀರಿಗಾಗಿ 2260 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 105.40 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ - 27.347 ಟಿಎಂಸಿ
ಒಳ ಹರಿವು - 10,121 ಕ್ಯೂಸೆಕ್
ಹೊರ ಹರಿವು - 2,260 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment