Advertisment

SSLC ಪಾಸ್​ ಆದ ವಿದ್ಯಾರ್ಥಿನಿಯ ತಲೆ ಕಡಿದ ದುಷ್ಕರ್ಮಿ.. ಕೊಲೆಗಾರ ಬೇರೆ ಯಾರೂ ಅಲ್ಲ.. ಈತನೇ

author-image
AS Harshith
Updated On
BREAKING: ಕೊಡಗು ಅಪ್ರಾಪ್ತ ಬಾಲಕಿ ರುಂಡ ಕತ್ತರಿಸಿದ ಕೊಲೆಗಾರನ ಶವ ಪತ್ತೆ
Advertisment
  • ಪಾಸ್​ ಆದ ಖುಷಿಯಲ್ಲಿದ್ದ ಬಾಲಕಿಯ ರುಂಡ ಕಡಿದ ದುಷ್ಕರ್ಮಿ
  • ಅಮ್ಮಾ ನಾನು ಪಾಸ್​ ಆದೆ ಎಂದವಳು ಸಂಜೆ ಹೆಣವಾಗಿ ಪತ್ತೆ
  • ಆಕೆಗೂ ಆತನನಿಗೂ ಸಂಬಂಧವೇನು? ಕೊಲೆ ಮಾಡಲು ಕಾರಣ?

ನಿನ್ನೆ ಎಸ್​ಎಸ್ಎಲ್​ಸಿ ಫಲಿತಾಂಶ ಹೊರ ಬಿದ್ದಿದೆ. ಮಧ್ಯಾಹ್ನದ ವೇಳಗೆ ಅಮ್ಮಾ ನಾನು 10ನೇ ತರಗತಿ ಪಾಸ್ ಆದೆ ಅಂತ ಮನೆಗೆ ಬಂದು ಪೋಷಕರ ಬಳಿ ಹೇಳಿಕೊಂಡಿದ್ದ ಬಾಲಕಿ ಸಂಜೆ ಹೊತ್ತಿಗೆ ಕೊಲೆಯಾಗಿದ್ದಾಳೆ. ರುಂಡ ಒಂದು ಕಡೆ. ಮುಂಡ ಒಂದು ಕಡೆ. ಬಿಸಾಡಿ ಹೋಗಿದ್ದ ದುಷ್ಕರ್ಮಿ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂಥಹ ಭೀಕರ ಘಟನೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ಕೊಲೆಗೆ ಕಾರಣವೇನು ಗೊತ್ತಾ?.

Advertisment

ಅಸಲಿಗೆ ನಡೆದಿದ್ದೇನು?

ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮೀನಾಗೆ ವಿವಾಹ ಮಾಡುವುದಕ್ಕೆ ಪೋಷಕರು ಮುಂದಾಗಿದ್ದು, ನಿನ್ನೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದರು. ಅಪ್ರಾಪ್ತ ಬಾಲಕಿಯನ್ನ ವಿವಾಹ ಮಾಡುವ ಬಗ್ಗೆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆ 34 ವರ್ಷದ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತನೊಂದಿಗೆ ಎಂಗೇಜ್ಮೆಂಟ್ ಮಾಡುವ ವೇಳೆ ಸೋಮವಾರಪೇಟೆ ಪೊಲೀಸರು ತಡೆಯೊಡ್ಡಿ ಕ್ಯಾನ್ಸಲ್​ ಮಾಡಿಸಿದ್ದರು.

publive-image

ಕೊಲೆಗಾರ ಯಾರು?

ಬಾಲ್ಯವಿವಾಹ ಅಪರಾಧ ಈ ಹಿನ್ನೆಲೆ ಬಾಲಕಿ ವಯಸ್ಕಳಾಗುವವರೆಗೆ ಮದುವೆ ಮಾಡುವಂತಿಲ್ಲ, ವೇಟ್ ಮಾಡಿ ಎಂದು ನಿಶ್ಚಿತಾರ್ಥ ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಿ ಸಂಜೆ ವೇಳೆಗೆ ಬಂದ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಮೊಣ್ಣಂಡ ಪ್ರಕಾಶ್ ಬಾಲಕಿ ಮನೆಯವರ ಜೊತೆ ಜಗಳ ಮಾಡಿದ್ದಾನೆ. ಬಳಿಕ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ನಂತರ ಬರ್ಬರವಾಗಿ ತಲೆ ಕಡಿದಿದ್ದಾನೆ. ಮೀನಾಳ ತಲೆ ಕತ್ತರಿಸಿ ದೇಹವನ್ನ ಬೇರೆ ಕಡೆ ಬಿಸಾಡಿ ಹೋಗಿದ್ದಾನೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸೋಮವಾರಪೇಟೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಗುಡುಗು, ಸಿಡಿಲು, ಗಾಳಿ ಜೊತೆ ತಂಪನೆರೆದ ವರುಣ.. ಆದ್ರೆ ಎಲ್ಲೆಲ್ಲಿ ಏನೇನು ಅವಾಂತರವಾಗಿದೆ?

Advertisment

ಒಟ್ಟಾರೆ, ಸೂರ್ಲಬ್ಬಿ ಶಾಲೆಯಲ್ಲಿ ಕಲಿಯುತ್ತಿದ್ದಳು ಏಕೈಕ ವಿದ್ಯಾರ್ಥಿನಿ ಎಸ್​ಎಸ್​ಎಲ್​ಸಿಯಲ್ಲಿ ಪಾಸ್​ ಆಗಿದ್ದಾಳೆ ಎಂಬ ಖುಷಿ ಮಾಸೋ ಮುನ್ನವೇ ವಿದ್ಯಾರ್ಥಿನಿ ಮೀನಾ ನೆತ್ತರಕೋಡಿ ಹರಿದಿದೆ. ಈ ಭೀಕರ ಘಟನೆ ಕೊಡಗಿನ ಜನರನ್ನ ಬೆಚ್ಚಿ ಬೀಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment