ಜಿಲ್ಲೆಯ ಗ್ರಾಮ ಪಂಚಾಯತಿ ಗ್ರಂಥಾಲಯ ಹುದ್ದೆಗಳ ನೇಮಕಾತಿ.. 40 ವರ್ಷದ ಒಳಗಿನವರಿಗೆ ಅವಕಾಶ

author-image
Bheemappa
Updated On
ಈ ಜಿಲ್ಲೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಎಷ್ಟು ಉದ್ಯೋಗಗಳು ಖಾಲಿ ಇವೆ?
Advertisment
  • ಅರ್ಜಿ ಸಲ್ಲಿಕೆ ಮಾಡಲು ಬೇಕಾದಂತ ಲಿಂಕ್ ಇಲ್ಲಿ ನೀಡಲಾಗಿದೆ
  • ಜಿಲ್ಲೆಯ ಪಂಚಾಯತಿಗಳಲ್ಲಿ ಉದ್ಯೋಗ ಭರ್ತಿ ಮಾಡಲಾಗುತ್ತೆ
  • ಪ್ರಕಟಣೆ ಹೊರಡಿಸಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ ಮಾಡುವ ಬಗ್ಗೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ಈ ಉದ್ಯೋಗಗಳು ಇದ್ದು ಸದ್ಯ ಇವನ್ನು ಭರ್ತಿ ಮಾಡುವ ಕುರಿತು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ.

ವಿರಾಜಪೇಟೆ- ಚೆಂಬೆಬೆಳ್ಳೂರು, ಚೆನ್ನಯ್ಯನ ಕೋಟೆ, ಆರ್ಜಿ, ಪೊನ್ನಂಪೇಟೆ- ಬಾಳೆಲೆ, ಕುಟ್ಟ, ಗೋಣಿಕೊಪ್ಪ, ಕೆ.ಬಾಡಗ, ಸೋಮವಾರಪೇಟೆ- ಶನಿವಾರ ಸಂತೆ, ನಿಡ್ತ, ಕುಶಾಲನಗರ- ಶಿರಂಗಾಲ, ಇಲ್ಲಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳನ್ನು ನೇಮಕಾತಿ ಸಂಬಂಧ ಆನ್​​ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ.

ಹುದ್ದೆ ಹೆಸರು- ಗ್ರಾ.ಪಂ. ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕ

ಒಟ್ಟು ಉದ್ಯೋಗಗಳು- 10 ಇವೆ

ಇದನ್ನೂ ಓದಿ:KPSC ಇಂದ ಕೃಷಿ ಇಲಾಖೆಯ 273 ಉದ್ಯೋಗಗಳಿಗೆ ಮತ್ತೆ ಅರ್ಜಿ ಆಹ್ವಾನ

publive-image

ಮಾಸಿಕ ವೇತನ- 18,606 ರೂಪಾಯಿಗಳು

ವಿದ್ಯಾರ್ಹತೆ

  • ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರಬೇಕು. ಇದರ ಜೊತೆಗೆ ಸರ್ಟಿಫಿಕೇಶನ್‌ ಕೋರ್ಸ್‌ ಇನ್ ಲೈಬ್ರರಿ ಸೈನ್ಸ್​ನಲ್ಲಿ ಪ್ರಮಾಣ ಪತ್ರ ಪಡೆದಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಲ್ಲಿ 3 ತಿಂಗಳ ಕಂಪ್ಯೂಟರ್ ಕೋರ್ಸ್​​ನಲ್ಲಿ ಪಾಸ್ ಆಗಿರಬೇಕು.
  • ಒಂದು ವೇಳೆ ಇಬ್ಬರು ಸಮನವಾದ ಅಂಕ ಹೊಂದಿದ್ದರೇ ವಯಸ್ಸಿನಲ್ಲಿ ಹಿರಿಯರನ್ನು ಪರಿಗಣಿಸಲಾಗುತ್ತದೆ
  • ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡುವವರು ಸಂಬಂಧ ಪಟ್ಟ ಗ್ರಾ.ಪಂ ವ್ಯಾಪ್ತಿಯ ನಿವಾಸಿ ಆಗಿರಬೇಕು.

ವಯಸ್ಸಿನ ಮಿತಿ
18 ರಿಂದ 40 ವರ್ಷಗಳು

ಅರ್ಜಿ ಸಲ್ಲಿಕೆಗೆ ಲಿಂಕ್​ಗೆ-https://www.kodagu.nic.in

ಅರ್ಜಿ ಶುಲ್ಕ ಎಷ್ಟು ಇದೆ?

  • ಸಾಮಾನ್ಯ ಅಭ್ಯರ್ಥಿಗಳು- 500 ರೂಪಾಯಿಗಳು
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು- 300 ರೂಪಾಯಿ
  • ಎಸ್​​ಸಿ, ಎಸ್​ಟಿ, ಮಾಜಿ ಸೈನಿಕ, ಪ್ರವರ್ಗ-1 ಅಭ್ಯರ್ಥಿಗಳು- 200 ರೂಪಾಯಿ
  • ವಿಶೇಷ ಚೇತನ ಅಭ್ಯರ್ಥಿಗಳು- 100 ರೂಪಾಯಿ

ಅರ್ಜಿಗೆ ಕೊನೆ ದಿನಾಂಕ- 13 ಫೆಬ್ರುವರಿ 2025

ಮಾಹಿತಿಗಾಗಿ- https://cdn.s3waas.gov.in/s3c8ed21db4f678f3b13b9d5ee16489088/uploads/2025/01/2025012948.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment