newsfirstkannada.com

360 ಕುಟುಂಬ, 3 ಸಾವಿರ ಆಟಗಾರರು.. ಗಿನ್ನಿಸ್ ದಾಖಲೆ ಬರೆದ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಹೇಗಿತ್ತು?

Share :

Published April 28, 2024 at 8:20pm

Update April 28, 2024 at 8:16pm

    ಆತಿಥ್ಯ ವಹಿಸಿದ್ದ ಕುಂಡ್ಯೋಳಂಡ ತಂಡಕ್ಕೆ ಗಿನ್ನಿಸ್​ ದಾಖಲೆ ಹಸ್ತಾಂತರಿಸಿದ ಸಮಿತಿ

    ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೌಟುಂಬಿಕ ಹಾಕಿ ಟೂರ್ನಿ

    3ನೇ ಬಾರಿಯೂ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಚೇಂದಂಡ ತಂಡ

ಕೊಡಗು: ಸಾಕಷ್ಟು ಜನರು ಗಿನ್ನಿಸ್ ದಾಖಲೆ ಮಾಡಬೇಕೆಂದು ಹೊಸ, ಹೊಸ ಪ್ರಯತ್ನಕ್ಕೆ ಮುಂದಾಗುತ್ತಾರೆ. ಗಿನ್ನಿಸ್ ದಾಖಲೆಯ ಪಟ್ಟಿಯಲ್ಲಿ ನಮ್ಮ ಹೆಸರು ಬರಬೇಕು ಎಂಬ ಮಹದಾಸೆಯನ್ನು ಇಟ್ಟಿಕೊಂಡಿರುತ್ತಾರೆ. ಹಾಗಾಗಿ ವಿಶ್ವ ದಾಖಲೆ ಮಾಡಲು ಎಂತಹ ಸಾಹಸವನ್ನು ಬೇಕಾದರೂ ಮಾಡಲು ಮುಂದಾಗುತ್ತಾರೆ. ಇದೀಗ 360 ಕುಟುಂಬಗಳು, 3 ಸಾವಿರಕ್ಕೂ ಅಧಿಕ ಹಾಕಿ ಆಟಗಾರರು ಕೊಡಗಿನ ಕುಂಡ್ಯೋಳಂಡ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಗಿನ್ನಿಸ್ ದಾಖಲೆ ಮಾಡಿದೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

ಹೌದು, ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ‘ಕೌಟುಂಬಿಕ ಹಾಕಿ ಟೂರ್ನಿ’ ನಡೆದಿದೆ. ಇಂದು ನಡೆದ ರೋಚಕ ಫೈನಲ್ ಪಂದ್ಯದ ಬಳಿಕ ಕೊಡವ ಕೌಟುಂಬಿಕ ಹಾಕಿ ಉತ್ಸವ ದಾಖಲೆ ನಿರ್ಮಿಸಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಮಿತಿ ಸದಸ್ಯ ಸ್ವಪ್ನಿಲ್ ಎಂಬುವವರು ಹಾಕಿ ಆತಿಥ್ಯ ವಹಿಸಿದ್ದ ಕುಂಡ್ಯೋಳಂಡ ತಂಡಕ್ಕೆ ಗಿನ್ನಿಸ್​ ದಾಖಲೆ ಹಸ್ತಾಂತರ ಮಾಡಿದ್ದಾರೆ. ನೆಲ್ಲಮಕ್ಕಡ ವಿರುದ್ಧ ಚೇಂದಂಡ ತಂಡ ಗೆಲವು ಸಾಧಿಸಿದೆ. 3ನೇ ಬಾರಿಯೂ ಕೂಡ ಚೇಂದಂಡ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.

ಇನ್ನು, ಬಿರು ಬಿಸಿಲನ್ನು ಲೆಕ್ಕಿಸದೇ ಕುಂಡ್ಯೋಳಂಡ ಹಾಕಿ ಉತ್ಸವ ಫೈನಲ್ಸ್ ನೋಡಲು ಸಹಸ್ರಾರು ಜನರು ಆಗಮಿಸಿದ್ದರು. 30 ದಿನಗಳು ಯಶಸ್ವಿಯಾಗಿ ನಡೆದ ಕುಂಡ್ಯೋಳಂಡ ಹಾಕಿ ಉತ್ಸವ ಇಂದು ತೆರೆ ಕಂಡಿದೆ. 360 ಕುಟುಂಬಗಳು, 3 ಸಾವಿರಕ್ಕೂ ಅಧಿಕ ಹಾಕಿ ಆಟಗಾರರು ಪಾಲ್ಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

360 ಕುಟುಂಬ, 3 ಸಾವಿರ ಆಟಗಾರರು.. ಗಿನ್ನಿಸ್ ದಾಖಲೆ ಬರೆದ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಹೇಗಿತ್ತು?

https://newsfirstlive.com/wp-content/uploads/2024/04/kodagu.jpg

Load More