/newsfirstlive-kannada/media/post_attachments/wp-content/uploads/2025/02/KOHLI-AND-ROHIT-SHARMA.jpg)
ಕ್ರಿಕೆಟ್ ಎಂಬ ಜಂಟಲ್ಮನ್ ಗೇಮ್ನಲ್ಲಿ ವಯಸ್ಸಾದ್ರೆ ಕಥೆ ಮುಗೀತು ಅಂತಾ ಎಲ್ರೂ ಹೇಳ್ತಾರೆ. ಆದ್ರೆ, ಹಿಟ್ಮ್ಯಾನ್ ರೋಹಿತ್ ಶರ್ಮಾ ವಿಚಾರದಲ್ಲಿ ಈ ಮಾತು ಅಕ್ಷರಶಃ ಸುಳ್ಳಾಗಿದೆ. ವಯಸ್ಸಾದಂತೆ ಹಿಟ್ಮ್ಯಾನ್ ಆರ್ಭಟ ಜೋರಾಗ್ತಿದೆ. ಆದ್ರೆ, ಆರಂಭದಲ್ಲಿ ಅಬ್ಬರಿಸಿ ಬೊಬ್ಬಿರಿತಾ ಇದ್ದ ಕಿಂಗ್ ಕೊಹ್ಲಿ, ಈಗ ಫುಲ್ ಸೈಲೆಂಟ್ ಆಗಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಜೋಡೆತ್ತು. ಒಬ್ಬರು ವಿಶ್ವ ಕ್ರಿಕೆಟ್ನ ಹಿಟ್ಮ್ಯಾನ್. ಮತ್ತೊಬ್ಬರು ವಿಶ್ವ ಕ್ರಿಕೆಟ್ನ ಕಿಂಗ್. ಇವರಿಬ್ಬರ ಬ್ಯಾಟಿಂಗ್ ಶೈಲಿ, ವ್ಯಕ್ತಿತ್ವ ವಿಭಿನ್ನವಾಗಿದ್ದರೂ, ಅಂಗಳದಲ್ಲಿ ತಂಡದ ಗೆಲುವಿಗಾಗಿ ವೀರ ಸೈನಿಕರಂತೆ ಹೋರಾಡ್ತಾರೆ. ಜೊತೆಯಾಗಿ ಅದೆಷ್ಟೋ ಮ್ಯಾಚ್ಗಳನ್ನು ಗೆಲ್ಲಿಸಿದ್ದಾರೆ. ರನ್ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಒಡಿಐ ಕ್ರಿಕೆಟ್ನ ಲೆಜೆಂಡರಿ ಕ್ರಿಕೆಟರ್ಗಳಾಗಿ ಬೆಳದು ನಿಂತಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯದ್ದೀಗ ಕವಲುದಾರಿ..!
ರೋಹಿತ್, ವಿರಾಟ್ ಇವರಿಬ್ಬರು ಗೆಲುವಿಗಾಗಿ ಹೋರಾಡೋದೆ ಇವರಿಬ್ಬರ ಗುರಿ. ಟೀಮ್ ಇಂಡಿಯಾಗೆ ಕಾಲಿಟ್ಟ ದಿನದಿಂದ ಈವರೆಗೆ ಇದನ್ನೇ ಮಾಡಿದ್ದಾರೆ. ಆದ್ರೀಗ ಇವರ ಏಕದಿನ ಕ್ರಿಕೆಟ್ ಕರಿಯರ್, ನೀನೊಂದು ತೀರ, ನಾನೊಂದು ತೀರ ಎಂಬಂತಾಗಿದೆ. ಇಬ್ಬರೂ ಭಿನ್ನ ದಾರಿಯಲ್ಲಿ ಸಾಗ್ತಿದ್ದಾರೆ. 30ರ ಗಡಿ ದಾಟಿದ ಬಳಿಕ ಇಬ್ಬರ ಆಟ ಫುಲ್ ಚೇಂಜ್ ಆಗಿದ್ದಾರೆ. ವಯಸ್ಸಾದಂತೆ ಹಿಟ್ಮ್ಯಾನ್ ಮತ್ತಷ್ಟು ವೈಲೆಂಟ್ ಆಗ್ತಿದ್ರೆ, ಕಿಂಗ್ ಸೈಲೆಂಟ್ ಆಗ್ತಿದ್ದಾರೆ.
ರೋಹಿತ್ ಪಾಲಿಗೆ ವಯಸ್ಸು ಜಸ್ಟ್ ನಂಬರ್..!
ಕ್ರಿಕೆಟ್ ಎಂಬ ಜಂಟಲ್ಮನ್ ಗೇಮ್ನಲ್ಲಿ 35ರ ನಂತರ, ಏಕದಿನ ಕ್ರಿಕೆಟ್ ಆಡೋಕೆ ಅನ್ಫಿಟ್ ಅನ್ನೋ ಮಾತಿದೆ. ಆದ್ರೆ, 37ರ ರೋಹಿತ್ ಶರ್ಮಾಗೆ ವಯಸ್ಸು ಅನ್ನೋದು ಜಸ್ಟ್ ನಂಬರ್. 37ರ ವಯಸ್ಸಿನಲ್ಲೂ ಚಿರ ಯುವಕನಂತೆ ಹಿಟ್ಮ್ಯಾನ್ ಬ್ಯಾಟ್ ಬೀಸ್ತಿದ್ದಾರೆ. ಇದು ಇಂಗ್ಲೆಂಡ್ ಎದುರು ಸಿಡಿಗುಂಡಿನಂತೆ ರೋಹಿತ್, ಆರ್ಭಟಿಸಿದ ಶತಕ ನೋಡಿ ಹೇಳ್ತಿರುವ ಮಾತಲ್ಲ. 30ರ ಗಡಿ ದಾಟಿದ ನಂತರ ರೋಹಿತ್ ಬ್ಯಾಟಿಂಗ್ ಹೇಳ್ತಿರುವ ಕಥೆ. ಈ ಕಥೆ ನಿಮ್ಗೆ ಅರ್ಥವಾಗಬೇಕಾದ್ರೆ, ಮೊದಲು 30ರ ಒಳಗಿನ ರೋಹಿತ್ ಹಾಗೂ 30ರ ನಂತರದ ಬ್ಯಾಟಿಂಗ್ ಕಥೆ ಕೇಳಬೇಕು.
ಇದನ್ನೂ ಓದಿ:ಟೀಂ ಇಂಡಿಯಾಗೆ ದೊಡ್ಡ ಆಘಾತ; ಚಾಂಪಿಯನ್ಸ್ ಟ್ರೋಫಿಯಿಂದ ಬುಮ್ರಾ ಮಿಸ್..!
2007ರಿಂದ 2017ರ ತನಕ ಬರೋಬ್ಬರಿ 153 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ರೋಹಿತ್, 41.37ರ ಬ್ಯಾಟಿಂಗ್ ಆ್ಯವರೇಜ್ನಲ್ಲಿ 5131 ರನ್ ಗಳಿಸಿದ್ರು. ಈ ಪೈಕಿ 10 ಶತಕ, 29 ಅರ್ಧಶತಕ ದಾಖಲಿಸಿದ್ರು. 30 ವರ್ಷದ ಬಳಿಕ ಅಂದ್ರೆ, 2017ರ ಏಪ್ರಿಲ್ 30ರ ಬಳಿಕ ರೋಹಿತ್, 114 ಪಂದ್ಯಗಳನ್ನಾಡಿದ್ದಾರೆ. 59.15ರ ಬ್ಯಾಟಿಂಗ್ ಆ್ಯವರೇಜ್ನಲ್ಲಿ 5856 ರನ್ ಗಳಿಸಿದ್ದಾರೆ. ಈ ಪೈಕಿ 28 ಅರ್ಧಶತಕ, 22 ಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾರ ಈ ಬ್ಯಾಟಿಂಗ್ ಕಥೆ. ಹಿಟ್ಮ್ಯಾನ್ ಪಾಲಿಗೆ ಏಜ್ ಅನ್ನೋದು ಜಸ್ಟ್ ನಂಬರ್ ಅನ್ನೋದನ್ನ ಮಾತ್ರ ಹೇಳ್ತಿಲ್ಲ. ಟೀಮ್ ಇಂಡಿಯಾ ಗೆಲುವಿನಲ್ಲಿ ರೋಹಿತ್ ಪಾತ್ರದ ಬಗ್ಗೆಯೂ ಹೇಳ್ತಿದೆ.
ಕೊಹ್ಲಿಗೇ ಅಲ್ಲ.. ಕೊಹ್ಲಿ ಬ್ಯಾಟ್ಗೂ ಆಯ್ತಾ ವಯಸ್ಸು.?
37 ವರ್ಷದ ರೋಹಿತ್, ಅಬ್ಬರಿಸುತ್ತಿದ್ದರೆ. ಇತ್ತ ವಿರಾಟ್ ಮಾತ್ರ ಫುಲ್ ಸೈಲೆಂಟ್ ಆಗಿದ್ದಾರೆ. 30ರ ನಂತರದ ವಿರಾಟ್ ಬ್ಯಾಟಿಂಗ್ ಕಥೆ. ಕೊಹ್ಲಿಗೇ ಅಲ್ಲ. ಕೊಹ್ಲಿಯ ಬ್ಯಾಟ್ಗೂ ವಯಸ್ಸಾಗಿದೆ ಅನ್ನೋದನ್ನ ಹೇಳ್ತಿದೆ. 30 ವರ್ಷ ಗಡಿ ದಾಟಿದ ನಂತರ ಕೊಹ್ಲಿ ಆಟದಲ್ಲಿ ಖದರ್ ಮಾಯವಾಗಿದೆ.
2018 ನವೆಂಬರ್ 5ರ ಬಳಿಕ 80 ಪಂದ್ಯಗಳನ್ನಾಡಿರುವ ವಿರಾಟ್, 53.31ರ ಬ್ಯಾಟಿಂಗ್ ಅವರೇಜ್ನಲ್ಲಿ 3679 ರನ್ ಗಳಿಸಿದ್ದಾರೆ. 24 ಅರ್ಧಶತಕ, 12 ಶತಕ ದಾಖಲಿಸಿರುವ ಕೊಹ್ಲಿ, 95.36ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಆದ್ರೆ, 2018ರ ನವೆಂಬರ್ಗೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ 60ರ ಬ್ಯಾಟಿಂಗ್ ಅವರೇಜ್ನಲ್ಲಿ ಬ್ಯಾಟ್ ಬೀಸಿದ್ರು. ಆದ್ರೀಗ, ವಿರಾಟ್ ಕೊಹ್ಲಿ, ಬ್ಯಾಟಿಂಗ್ ಖದರ್ ಕುಸಿದಿದೆ. ಕೊಹ್ಲಿ ಬ್ಯಾಡ್ ಫಾರ್ಮ್ ಸುಳಿಗೆ ಸಿಲುಕಿ ಒದ್ದಾಡ್ತಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ; ಸ್ಟಾರ್ ಆಟಗಾರರೇ ಔಟ್
ಮಹತ್ವದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಟೀಮ್ ಇಂಡಿಯಾ ಮುಂದಿದೆ. ಇಂಗ್ಲೆಂಡ್ ಎದುರು ರೋಹಿತ್ ಶರ್ಮಾ ಘರ್ಜಿಸಿರೋದು ಫ್ಯಾನ್ಸ್ಗೆ ಖುಷಿ ತಂದಿದೆ. ಆದ್ರೆ, ವಿರಾಟ್ ಕೊಹ್ಲಿಯ ಬ್ಯಾಡ್ ಫಾರ್ಮ್ ಚಿಂತೆ ಹೆಚ್ಚಿಸಿದೆ. ಇಂದಿನ ಕೊನೆಯ ಏಕದಿನದಲ್ಲಿ ಕೊಹ್ಲಿ ಫಾರ್ಮ್ ಕಂಡು ಕೊಂಡು ಹಳೆ ಖದರ್ಗೆ ಮರಳಿದ್ರೆ, ಟೀಮ್ ಇಂಡಿಯಾ ಫ್ಯಾನ್ಸ್ಗೆ ಅದಕ್ಕಿಂದ ಗುಡ್ನ್ಯೂಸ್ ಮತ್ತೊಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ