ಟೀಮ್​ ಇಂಡಿಯಾದಿಂದ ಸಿರಾಜ್​ಗೆ ಕೊಕ್​​; ವಿರಾಟ್​ ಕೊಹ್ಲಿ ಆಪ್ತನಿಗೆ ಒಲಿದ ಅದೃಷ್ಟ

author-image
Ganesh Nachikethu
Updated On
ಮೊದಲ ಟೆಸ್ಟ್​ ಪಂದ್ಯದಿಂದ ಸ್ಟಾರ್​ ಆಟಗಾರರಿಗೆ ಕೊಕ್​​; ಟೀಮ್​ ಇಂಡಿಯಾದಲ್ಲಿ ಇವರಿಗೆ ಸ್ಥಾನ
Advertisment
  • ಟೀಮ್​​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್​
  • 4ನೇ ಟೆಸ್ಟ್​ಗೆ ಟೀಮ್​ ಇಂಡಿಯಾದಲ್ಲಿ ಭಾರೀ ಬದಲಾವಣೆ
  • ಟೀಮ್​ ಇಂಡಿಯಾದಲ್ಲಿ ಕೊಹ್ಲಿ ಆಪ್ತನಿಗೆ ಮಾತ್ರ ಅವಕಾಶ

ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​​​ ಮೊಹಮ್ಮದ್​ ಸಿರಾಜ್​​. ಕಳೆದ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಬೌಲ್ ಮಾಡಿರೋ ಇವರು ಈ ಬಾರಿ ಬೆಂಚ್ ಕಾಯಬಹುದು. ಇವರು ಉತ್ತಮ ಬೌಲರ್​ ಆಗಿದ್ರೂ ತಂಡಕ್ಕೆ ಬ್ಯಾಟ್​ನಿಂದ ಕಾಣಿಕೆ ನೀಡಬಲ್ಲ ಸಾಮರ್ಥ್ಯ ಕಡಿಮೆ. ಹಾಗಾಗಿ ಇಬ್ಬರು ಆಲ್​ರೌಂಡರ್​​ಗಳಿಗೆ ಅವಕಾಶ ನೀಡುವ ನಿರ್ಧಾರಕ್ಕೆ ಟೀಮ್​ ಇಂಡಿಯಾ ಬಂದಿದೆ.

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ಗೆ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಡಲಾಗುತ್ತಿದೆ. ಇವರ ಬದಲಿಗೆ ಆಕಾಶ್ ದೀಪ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇವರು ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಇವರ ಮೇಲೆ ಮ್ಯಾನೇಜ್ಮೆಂಟ್​​ ನಂಬಿಕೆ ಇಟ್ಟಿದೆ.

4ನೇ ಟೆಸ್ಟ್​ಗೆ ಮೇಜರ್​ ಸರ್ಜರಿ

ಟೀಮ್​​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಸರಣಿ ನಡೆಯುತ್ತಿದೆ. ಹೇಗಾದ್ರೂ ಮಾಡಿ 4ನೇ ಟೆಸ್ಟ್​ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಮುಂದಾಗಿದೆ. ಇದು ಬಾಕ್ಸಿಂಗ್‌ ಡೇ ಟೆಸ್ಟ್‌ ಆಗಿದ್ದು, ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. 3ನೇ ಟೆಸ್ಟ್​ ಡ್ರಾ ಆಗಿದ್ದು, ಎರಡು ತಂಡಗಳು ತಲಾ 1 ಪಂದ್ಯ ಗೆದ್ದು ಸಮಬಲ ಸಾಧಿಸಿವೆ. ಹೀಗಾಗಿ 4ನೇ ಟೆಸ್ಟ್​ ಪಂದ್ಯ ಗೆಲ್ಲೋದು ಅನಿವಾರ್ಯ ಆಗಿದ್ದು, ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ ಆಗಲಿದೆ.

ಮೆಲ್ಬರ್ನ್‌ನಲ್ಲಿ ನಡೆಯಲಿರೋ 4ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಲು ಪ್ಲಾನ್​ ಮಾಡಿಕೊಂಡಿದೆ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ ಆಗಲಿದೆ. ಅದರಲ್ಲೂ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​ ಗುರಿ.

ಇಬ್ಬರು ಸ್ಪಿನ್ನರ್ಸ್​ಗೆ ಅವಕಾಶ

ಟೀಂ ಇಂಡಿಯಾ ಕಳೆದ ಪ್ರವಾಸದಲ್ಲೂ ಈ ಸ್ಟೇಡಿಯಮ್​ನಲ್ಲಿ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದಿತ್ತು. ಈ ಬಾರಿ ಕೂಡ ಟೀಮ್​ ಇಂಡಿಯಾ ಅದೇ ಫಾರ್ಮುಲಾದ ಮೊರೆ ಹೋಗಿದೆ. ಹೀಗಾಗಿ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಸ್ಟಾರ್​ ಆಲ್​ರೌಂಡರ್​ ಆಗಿರೋ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಸಿರಾಜ್​​ಗೆ ಮಾಸ್ಟರ್​ ಸ್ಟ್ರೋಕ್​ ಕೊಟ್ಟ ಕ್ಯಾಪ್ಟನ್​ ರೋಹಿತ್​​; ಟೀಮ್​ ಇಂಡಿಯಾದಿಂದಲೇ ಔಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment