/newsfirstlive-kannada/media/post_attachments/wp-content/uploads/2024/01/Hardik_Rohit_Kohli-2.jpg)
ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ. ಇವರು ಆರಂಭದಿಂದಲೂ ಟೀಮ್​ ಇಂಡಿಯಾ ನಾಯಕನ ರೇಸ್​ನಲ್ಲಿದ್ರು. ನಾಯಕನಾಗಿ ಕೆಲ ಸರಣಿಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಎಷ್ಟೋ ಪಂದ್ಯಗಳಲ್ಲಿ ಟೀಮ್​ ಇಂಡಿಯಾವನ್ನು ಲೀಡ್​ ಮಾಡಿ ಗೆಲ್ಲಿಸಿದ್ದಾರೆ. ಈಗ ಸೂರ್ಯಕುಮಾರ್​ ಬದಲಿಗೆ ಇವರನ್ನು ಕ್ಯಾಪ್ಟನ್​ ಮಾಡಲು ಬಿಸಿಸಿಐ ಮಾಸ್ಟರ್​​ ಪ್ಲ್ಯಾನ್​ ಮಾಡಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಕೊನೆಯ ಟಿ20 ಪಂದ್ಯ ಗೆದ್ದು ಟೀಮ್​ ಇಂಡಿಯಾ 4-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಇಂಗ್ಲೆಂಡ್ ತಂಡದ​​ ವಿರುದ್ಧ ಟಿ20 ಸರಣಿ ಗೆದ್ರೂ ಟೀಮ್​​ ಇಂಡಿಯಾಗೆ ಒಂದು ಆತಂಕ ಕಾಡುತ್ತಲೇ ಇದೆ.
ಈಗಾಗಲೇ ಟೀಮ್​ ಇಂಡಿಯಾ ಸರಣಿ ಗೆದ್ದಾಗಿದೆ. ಆದ್ರೂ, ತಂಡದಲ್ಲಿ ಟೆನ್ಶನ್​ ತಪ್ಪಿಲ್ಲ. ಆಟಗಾರರ ಕಳಪೆ ಪರ್ಫಾಮೆನ್ಸ್​​ ಟೀಮ್​ ಮ್ಯಾನೇಜ್​ಮೆಂಟ್​ ಟೆನ್ಶನ್​ ಹೆಚ್ಚಿಸಿದೆ. ಈ ಟಿ20 ಸರಣಿ ಹಲವು ಆಟಗಾರರ ಭವಿಷ್ಯವನ್ನು ಬಹಿರಂಗಗೊಳಿಸಿದೆ.
ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್​ ಟಿ20 ಕ್ರಿಕೆಟ್​ನ ಅಧಿಪತಿ ಅನ್ನಿಸಿಕೊಂಡಿದ್ದ ಆಟಗಾರ. ಆದ್ರೆ, ನಾಯಕನ ಪಟ್ಟಕ್ಕೇರಿದ ಬಳಿಕ ಸೂರ್ಯ ಶೈನ್​ ಆಗ್ತಿಲ್ಲ. ಆಫ್ರಿಕಾದಲ್ಲಿ ಫ್ಲಾಪ್​ ಆದ ಸೂರ್ಯ, ಇದೀಗ ಇಂಗ್ಲೆಂಡ್​ ಸರಣಿಯಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಕೇವಲ 6.50ರ ಹೀನಾಯ ಸರಾಸರಿಯಲ್ಲಿ ರನ್​ಗಳಿಸಿರೋ ಸೂರ್ಯನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ಇವರು ಹೀಗೆ ಮುಂದಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ರೆ ಸೂರ್ಯಕುಮಾರ್​ ಯಾದವ್​​​ ನಾಯಕತ್ವದಿಂದ ಕಣಕ್ಕಿಳಿಯೋ ಸಾಧ್ಯತೆ ಇದೆ.
ಹಾರ್ದಿಕ್​ ಪಾಂಡ್ಯಗೆ ಕ್ಯಾಪ್ಟನ್ಸಿ ಏಕೆ?
ಇನ್ನು, ಹಾರ್ದಿಕ್​ ಪಾಂಡ್ಯ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯಲ್ಲಿ ಆಲ್​ರೌಂಡರ್​ ಪರ್ಫಾಮೆನ್ಸ್​​ ನೀಡಿದ್ರು. ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲೂ ಅಪಾರವಾದ ಕೊಡುಗೆ ನೀಡಿದ ಇವರು ಒಬ್ಬ ಲೀಡರ್​ ಕೂಡ ಹೌದು. ಹಾಗಾಗಿ ಇವರಿಗೆ ನಾಯಕತ್ವ ಪಟ್ಟ ಕಟ್ಟಲು ಬಿಸಿಸಿಐ ಪ್ಲ್ಯಾನ್​ ಮಾಡಿಕೊಂಡಿದ್ದು, ಇದು ಸೂರ್ಯಕುಮಾರ್​​ ಯಾದವ್​ಗೆ ಬಿಗ್ ಶಾಕಿಂಗ್​ ನ್ಯೂಸ್ ಆಗಿದೆ. ಬಿಸಿಸಿಐ ಸೆಲೆಕ್ಷನ್​ ಕಮಿಟಿ ಒಲವು ಕೂಡ ಹಾರ್ದಿಕ್​ ಮೇಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us