ಮನಸ್ತಾಪಕ್ಕೆ ಬ್ರೇಕ್​​ ಹಾಕಿದ ಕೊಹ್ಲಿ-ಗಂಭೀರ್​.. ಮೊದಲ ಭೇಟಿಯಲ್ಲಿ ಏನು ಮಾಡಿದ್ರು ಗೊತ್ತಾ?

author-image
AS Harshith
Updated On
ಮನಸ್ತಾಪಕ್ಕೆ ಬ್ರೇಕ್​​ ಹಾಕಿದ ಕೊಹ್ಲಿ-ಗಂಭೀರ್​.. ಮೊದಲ ಭೇಟಿಯಲ್ಲಿ ಏನು ಮಾಡಿದ್ರು ಗೊತ್ತಾ?
Advertisment
  • ಕೊಲಂಬೋದಲ್ಲಿ ಗಂಭೀರ್​ - ಕೊಹ್ಲಿ ಮುಖಾಮುಖಿ
  • ಕೊಹ್ಲಿ ಅಭ್ಯಾಸದ ಮೇಲೆ ಗಂಭೀರ್​ ಹದ್ದಿನ ಕಣ್ಣು.!
  • ಬಿಸಿಸಿಐ ಬಿಗ್​ಬಾಸ್​ಗಳ ಆತಂಕ ದೂರ.. ದೂರ..!

ಕಿರಿಕ್​ ಜೋಡಿ ಎಂದೇ ಹೆಸರು ಪಡೆದಿದ್ದ ವಿರಾಟ್​ ಕೊಹ್ಲಿ - ಗೌತಮ್​ ಗಂಭೀರ್ ಕೊಲಂಬೋದಲ್ಲಿ​ ಮುಖಾಮುಖಿಯಾಗಿದ್ದಾರೆ. ಗೌತಮ್​ ಗಂಭೀರ್​ ಕೋಚ್​ ಗಾದಿಗೇರಿದ ಬಳಿಕ ಇಡೀ ಕ್ರಿಕೆಟ್​ ಲೋಕವೇ ಇಬ್ಬರ ಭೇಟಿಯನ್ನ ಎದುರು ನೋಡ್ತಿತ್ತು. ಈ ಹಿಂದೆ ಇಬ್ಬರ ನಡುವೆ ನಡೆದ ಘಟನೆಗಳು ಆತಂಕವನ್ನೂ ಸೃಷ್ಟಿಸಿದ್ವು. ಕೊನೆಗೂ ಆ ಆತಂಕಕ್ಕೆಲ್ಲಾ ಬ್ರೇಕ್​ ಬಿದ್ದಿದೆ.

ಇಂಡೋ -ಲಂಕಾ ಏಕದಿನ ಫೈಟ್​ಗೆ ವೇದಿಕೆ ಸಜ್ಜಾಗಿದೆ. ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದೆ. ಕೋಚ್​ ಆಗಿ ಮೊದಲ ಟಾಸ್ಕ್​ ಟಿ20 ಸರಣಿಯಲ್ಲಿ ಕ್ಲೀನ್​ಸ್ವೀಪ್​ ಸಾಧನೆ ಮಾಡಿದ ಗೌತಮ್​ ಗಂಭೀರ್​, ಮತ್ತೊಂದು ದಿಗ್ವಿಜಯದ ನಿರೀಕ್ಷೆಯಲ್ಲಿ ಏಕದಿನ ತಂಡವನ್ನ ಕೂಡಿಕೊಂಡಿದ್ದಾರೆ. ಒಂದು ತಿಂಗಳ ಅಂತರದ ಬಳಿಕ ಫೀಲ್ಡಿಗಿಳಿದಿರೋ ಕಿಂಗ್​ ಕೊಹ್ಲಿ ಕೂಡ ತಂಡ ಸೇರಿಕೊಂಡಿದ್ದು, ಅಭ್ಯಾಸದ ಅಖಾಡದಲ್ಲಿ ಡೆಲ್ಲಿ ಬಾಯ್ಸ್​ ಮುಖಾಮುಖಿಯಾಗಿದ್ದಾರೆ.

publive-image

ಮೊದಲ ಭೇಟಿಯಲ್ಲೇ ಸಾಮರಸ್ಯದ ಸಂದೇಶ.!

ಟೀಮ್​ ಇಂಡಿಯಾ ಹೆಡ್​ ಕೋಚ್​ ಆಗಿ ಗಂಭೀರ್​​ ಆಯ್ಕೆಗೂ ಮುನ್ನವೇ ಬಿಸಿಸಿಐ ಹಾಗೂ ಫ್ಯಾನ್ಸ್​ ವಲಯದಲ್ಲಿ ತೀವ್ರ ಆತಂಕ ಕಾಡಿತ್ತು. ಗೌತಮ್​​ ಗಂಭೀರ್​ -ವಿರಾಟ್​​ ಕೊಹ್ಲಿ ನಡುವೆ ಇದ್ದ ವೈಮನಸ್ಸು ತಂಡವನ್ನೇ ಇಬ್ಭಾಗ ಮಾಡೋ ಆತಂಕವನ್ನ ಸೃಷ್ಟಿಸಿತ್ತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 3 ಬಾರಿ ಐಪಿಎಲ್​ ವೇಳೆ ಇಬ್ಬರೂ ಆನ್​ಫೀಲ್ಡ್​ನಲ್ಲೇ ಕಿತ್ತಾಡಿಕೊಂಡಿದ್ರು. ಇಬ್ಬರ ನಡುವಿನ ಜಗಳ ಹೊಡೆದಾಡೋ ಮಟ್ಟಕ್ಕೆ ತಾರಕಕ್ಕೇರಿದ್ದೂ ಇದೇ. ಇಬ್ಬರೂ ಹಾವು-ಮುಂಗುಸಿ ತರ ಕಿತ್ತಾಡಿದ್ರು. ಆ ಘಟನೆಗಳ ಬಳಿಕ ಇಬ್ಬರ ಸಂಬಂಧ ಹಳಸಿತ್ತು.

ಇದನ್ನೂ ಓದಿ: ಭೂಕುಸಿತದಲ್ಲಿ ತಂದೆ-ತಾಯಿ ಸಾವು.. ಕಷ್ಟಪಟ್ಟು ಓದಿಸಿ ವಿದೇಶಕ್ಕೆ ಕಳುಹಿಸಿರುವ ಮಗಳ ನೋವು ಯಾರತ್ರ ಹೇಳೋದು?

ಈ ಹಿಂದೆ ನಡೆದಿದ್ದ ಕಿತ್ತಾಟಗಳ ಕಾರಣದಿಂದಲೇ ಗೌತಮ್​​ ಗಂಭೀರ್​ನ ಕೋಚ್​ ಆಗಿ ನೇಮಿಸೋ ಮುಂಚೆ ಬಿಸಿಸಿಐ ವಲಯದಲ್ಲಿ ಆತಂಕ ಕಾಡಿತ್ತು. ಫ್ಯಾನ್ಸ್​ ಮುಂದೆಯೂ ಕೂಡ ಇದೇ ಪ್ರಶ್ನೆಯಿತ್ತು. ಅದ್ರ ನಡುವೆಯೂ ಗಂಭೀರ್​ಗೆ ಕೋಚ್​ ಪಟ್ಟಕಟ್ಟಿದ್ದಾಯ್ತು. ಟಿ20 ಸರಣಿಯನ್ನ ಕ್ಲೀನ್​ ಸ್ವೀಪ್​ ಮಾಡಿದ್ದಾಯ್ತು. ಇದೀಗ, ಬಿಸಿಸಿಐ ಬಿಗ್​ಬಾಸ್​ಗಳು, ಅಭಿಮಾನಿಗಳಲ್ಲಿದ್ದ ಆತಂಕವೂ ದೂರವಾಗಿದೆ. ಕೊಲಂಬೋದಲ್ಲಿ ಕ್ರಿಕೆಟ್​ ಲೋಕ ಕುತೂಹಲದಿಂದ ಕಾಯ್ತಿದ್ದ ಗಂಭೀರ್​ - ಕೊಹ್ಲಿ ಸಮಾಗಮವಾಗಿದೆ.

publive-image

ಇದನ್ನೂ ಓದಿ: ಸಾವಿನಲ್ಲಿ ಒಂದಾದ ಅಣ್ಣ, ತಂಗಿ.. ರೈಲಿಗೆ ತಲೆ ಕೊಟ್ಟು ದುರಂತ ಅಂತ್ಯ; ಕಾರಣವೇನು?

ಜಿದ್ದು ಮರೆತು ಮಾತುಕತೆ ನಡೆಸಿದ ಡೆಲ್ಲಿ ಬಾಯ್ಸ್​.!

ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಕಿಂಗ್​ ಕೊಹ್ಲಿ, ಕೋಚ್​ ಗೌತಮ್​ ಗಂಭೀರ್​ ಮುಖಾಮುಖಿಯಾಗಿದೆ. ಮೊದಲ ಭೇಟಿಯಲ್ಲೇ ಹಳೆ ಜಿದ್ದಿಗೆ ಬ್ರೇಕ್​ ಹಾಕಿ ಸಾಮರಸ್ಯದ ಸಂದೇಶ ಸಾರಿದ್ದಾರೆ. ಇನ್​ಫ್ಯಾಕ್ಟ್​! ಸದಾ ಗಂಭೀರವಾಗೇ ಕಾಣಿಸಿಕೊಳ್ಳೋ ಗಂಭೀರ್, ಕೊಹ್ಲಿ ಜೊತೆಗಿನ​ ಚರ್ಚೆ ವೇಳೆ ಫುಲ್​ ನಗುವಿನ ಹೊನಲು ಹರಿಸಿದ್ದಾರೆ. ಗಂಭೀರ್​​ ನಗ್ತಾ ಇರೋ ಫೋಟೋಗಳಂತೂ ಇಂಟರ್​ನೆಟ್​​ನಲ್ಲಿ ಸಖತ್​ ಸೌಂಡ್​ ಮಾಡ್ತಿವೆ.

ಅಭ್ಯಾಸದ ಬಳಿಕ ಸುದೀರ್ಘ ಕಾಲ ಚರ್ಚೆ.!

ಒಂದು ತಿಂಗಳ ಅಂತರದ ಬಳಿಕ ಫೀಲ್ಡಿಗಿಳಿದಿರೋ ವಿರಾಟ್​ ಕೊಹ್ಲಿ ನೆಟ್ಸ್​ನಲ್ಲಿ ಗಂಟೆಗೂ ಹೆಚ್ಚು ಕಾಲ ನಡೆಸಿದ್ದಾರೆ. ಕೊಹ್ಲಿ ಅಭ್ಯಾಸವನ್ನ ಗಂಭೀರ್​​ ಹೆಚ್ಚು ಹೊತ್ತು ಗಮನಿಸಿದ್ದಾರೆ. ಥ್ರೋ ಡೌನ್​ ಎಸೆತಗಳು, ಪೇಸರ್ಸ್​ ಹಾಗೂ ಸ್ಪಿನ್ನರ್​ಗಳನ್ನ ನೆಟ್ಸ್​ನಲ್ಲಿ ಕೊಹ್ಲಿ ಎದುರಿಸಿದ್ರು. ಆ ಬಳಿಕ ಕೋಚ್​ ಗಂಭೀರ್​ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

publive-image

ಇದನ್ನೂ ಓದಿ: ಪಡ್ಡೆ ಹುಡುಗರೇ ಹುಷಾರ್.. ಜಸ್ಟ್‌ ಕೈ ಹಿಡಿದು ‘I LOVE YOU’ ಅಂದಿದ್ದಕ್ಕೆ ಜೈಲು ಶಿಕ್ಷೆ; ಎಷ್ಟು ವರ್ಷ?

ಕೋಚ್​ ಆದ ಬಳಿಕ ಮೊದಲ ಸುದ್ದಿಗೋಷ್ಟಿಯಲ್ಲೇ ಗಂಭೀರ್​​, ಕೊಹ್ಲಿ ಜೊತೆಗಿನ ತಮ್ಮ ಭಾಂದವ್ಯದ ಬಗ್ಗೆ ಮಾತನಾಡಿದ್ರು. ಕೋಚ್​ ಆಗೋಕು ಮುನ್ನ ಹಾಗೂ ಆದ ಬಳಿಕ ಕೊಹ್ಲಿಗೆ ಮೆಸೇಜ್​ ಮಾಡಿದ್ದೆ. ನಮ್ಮಿಬ್ಬರ ಬಾಂಧವ್ಯ ಉತ್ತಮವಾಗಿದೆ ಎಂದಿದ್ರು. ತಂಡದ ಗೆಲುವಿಗಾಗಿ ಒಟ್ಟಾಗಿ ಶ್ರಮಿಸ್ತೀವಿ ಎಂದಿದ್ರು. ಮೊದಲ ಭೇಟಿಯಲ್ಲೇ ಆ ಮಾತನ್ನ ಗಂಭೀರ್​ ಹಾಗೂ ಕೊಹ್ಲಿ ನಿಜವಾಗಿಸಿದ್ದಾರೆ. ತಂಡದ ಒಳತಿಗಾಗಿ ತಮ್ಮ ನಡುವಿನ ವೈಮನಸ್ಸು ತೊಡೆದು ಹಾಕಿರೋ ಡೆಲ್ಲಿ ಬಾಯ್ಸ್​ ನಡುವಿನ ಭಾಂದವ್ಯ ಮುಂದೆಯೂ ಹೀಗೆ ಇರಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment