ಶ್ರೀಲಂಕಾ ಪ್ರವಾಸ.. ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ವಿರಾಟ್​ ಕೊಹ್ಲಿ!

author-image
Ganesh Nachikethu
Updated On
ಶ್ರೀಲಂಕಾ ಪ್ರವಾಸ.. ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ವಿರಾಟ್​ ಕೊಹ್ಲಿ!
Advertisment
  • ಸದ್ಯದಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಮ್​ ಇಂಡಿಯಾ
  • ಶ್ರೀಲಂಕಾ ಸರಣಿಗಾಗಿ ಇಂದೇ ಟೀಮ್​ ಇಂಡಿಯಾ ಪ್ರಕಟ ಸಾಧ್ಯತೆ
  • ಈ ಮುನ್ನವೇ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ಕೊಹ್ಲಿ!

ಟಿ20 ವಿಶ್ವಕಪ್ ಬಳಿಕ ನಡೆದ ಜಿಂಬಾಬ್ವೆ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಬೆನ್ನಲ್ಲೇ ಜೂನ್​​ 27ನೇ ತಾರೀಕಿನಿಂದ ಶ್ರೀಲಂಕಾ ವಿರುದ್ಧ 3 ಟಿ20 ತ್ತು 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಇದಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಆಯ್ಕೆ ಮಾಡಬೇಕಿದ್ದು, ಮುಖ್ಯ ಕೋಚ್​​ ಗೌತಮ್​ ಗಂಭೀರ್​​​ ಅದಕ್ಕಾಗಿ ಬಹಳ ಸರ್ಕಸ್​ ನಡೆಯುತ್ತಿದ್ದಾರೆ. ಈ ಮಧ್ಯೆ ಟೀಮ್​ ಇಂಡಿಯಾಗೆ ಕೊಹ್ಲಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

publive-image

ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಅಷ್ಟೇ ಅಲ್ಲದೇ ಶ್ರೀಲಂಕಾ ಪ್ರವಾಸದಿಂದ ರೆಸ್ಟ್​ ಕೂಡ ಕೇಳಿದ್ದರು. ಬಿಸಿಸಿಐ ಕೊಹ್ಲಿ, ರೋಹಿತ್​​ ಮತ್ತು ಬುಮ್ರಾಗೆ ರೆಸ್ಟ್​ ನೀಡಿತ್ತು. ಗಂಭೀರ್​ ಕೋಚ್​ ಆದ ಬಳಿಕ ಇದು ಮೊದಲ ಸರಣಿ ಆಗಿದ್ದು, ಮೂವರು ಸ್ಟಾರ್​ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಸೀರೀಸ್​ ಆಡಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ವಿರಾಟ್​ ಕೊಹ್ಲಿ ರಿಯಾಕ್ಟ್​ ಮಾಡಿದ್ದಾರೆ.

ಇನ್ನು, ಶ್ರೀಲಂಕಾ ವಿರುದ್ಧ ನಡೆಯಲಿರೋ ಏಕದಿನ ಸರಣಿಗೆ ಲಭ್ಯರಾಗೋದಾಗಿ ಹೇಳಿದ್ದಾರೆ. ಹಾಗಾಗಿ ರೋಹಿತ್​​, ಬುಮ್ರಾ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ರೂ, ಕೊಹ್ಲಿ ಮಾತ್ರ ಏಕದಿನ ಸರಣಿ ಆಡಲಿದ್ದಾರೆ ಎಂಬ ವರದಿಯಾಗಿದೆ.

ಇದನ್ನೂ ಓದಿ: T20 ಆಯ್ತು.. ಈಗ ಮತ್ತೊಂದು ಫಾರ್ಮೆಟ್​ಗೂ ಗುಡ್ ಬೈ ಹೇಳ್ತಾರಾ! ಕೊಹ್ಲಿಯ ಈ ನಿರ್ಧಾರಾ ನಿಜನಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment