ನಿವೃತ್ತಿ ಕುರಿತು ಕಿಂಗ್ ಕೊಹ್ಲಿ ಸ್ಪಷ್ಟನೆ.. ರಿಟೈರ್​ಮೆಂಟ್ ಕೇಳುವವರಿಗೆ ಏನಂದ್ರು ವಿರಾಟ್?

author-image
Bheemappa
Updated On
ನಿವೃತ್ತಿಗೂ ವಿರಾಟ್ ಪಕ್ಕಾ ಪ್ಲಾನ್; ಎರಡು ಬಿಗ್ ಟಾರ್ಗೆಟ್ ಫಿಕ್ಸ್ ಮಾಡಿದ ಕೊಹ್ಲಿ..!
Advertisment
  • ಆರ್​ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮಾತನಾಡಿದ್ದು ಎಲ್ಲಿ?
  • ನಿವೃತ್ತಿ ಕೇಳುವವರಿಗೆ ಮಾತಿನಲ್ಲಿ ಸಿಕ್ಸರ್ ಸಿಡಿಸಿದ ವಿರಾಟ್ ಕೊಹ್ಲಿ
  • ಎಷ್ಟು ಬೇಕು ಅಷ್ಟೇ ಹಣ ಸಂಪಾದನೆ ಮಾಡೋದು, ಹೆಚ್ಚಿಗೆ ಬೇಕಿಲ್ಲ

ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ನಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಪಡೆಯಿತು. ಇದರ ಬೆನ್ನಲ್ಲೇ ಹಿರಿಯ ಆಟಗಾರರು ನಿವೃತ್ತಿ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು. ಇದರಲ್ಲಿ ವಿರಾಟ್​ ಕೊಹ್ಲಿ ಹೆಸರು ಕೂಡ ಕೇಳಿ ಬಂದಿತ್ತು. ಸದ್ಯ ಈ ಬಗ್ಗೆ ಸ್ಟಾರ್ ಕ್ರಿಕೆಟರ್​ ವಿರಾಟ್​ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

ನಗರದ ರಾಹುಲ್​ ದ್ರಾವಿಡ್- ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ಇನೋವೆಟಿವ್ ಲ್ಯಾಬ್ ಆಯೋಜಿಸಿದ್ದ ಇಂಡಿಯನ್ಸ್​ ಸ್ಪೋರ್ಟ್ಸ್​ ಸಮಿಟ್​ನಲ್ಲಿ ವಿರಾಟ್​ ಕೊಹ್ಲಿ ಮಾತನಾಡಿದರು. ಆ್ಯಂಕರ್ ಇಸಾ ಗುಹಾ ಅವರು ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಏನ್ ಹೇಳಿದ್ದಾರೆ ಎನ್ನುವುದು ಇಲ್ಲಿದೆ.

ನಾನು ಕ್ರಿಕೆಟ್​ ಅನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಅದನ್ನು ಆಡುವುದರ ಜೊತೆಗೆ ಆನಂದಿಸುತ್ತಿದ್ದೇನೆ. ಕ್ರಿಕೆಟ್​ನಿಂದ ನಿವೃತ್ತಿ ಎನ್ನುವುದು ಸದ್ಯಕ್ಕಂತೂ ಇಲ್ಲವೇ ಇಲ್ಲ. ರಿಟೈರ್​ಮೆಂಟ್ ಅನೌನ್ಸ್ ಮಾಡಲು ಈ ಸಲ ಟ್ರೋಫಿ ಆಡುತ್ತಿಲ್ಲ. ಇನ್ನು ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡುತ್ತ ಆನಂದಿಸುತ್ತೇನೆ ಎಂದು ರಿಟೈರ್​ಮೆಂಟ್ ಬಗ್ಗೆ ವಿರಾಟ್ ಕೊಹ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ನಾಳೆ RCB ಅನ್​ಬಾಕ್ಸ್​ ಇವೆಂಟ್​; ಕಾರ್ಯಕ್ರಮದಲ್ಲಿ ಏನೆಲ್ಲಾ ಇರಲಿವೆ.. ಕಿಂಗ್ ಕೊಹ್ಲಿ ಬೆಂಗಳೂರಿಗೆ ಬಂದ್ರಾ?

publive-image

ಕ್ರಿಕೆಟ್​ನಿಂದ ನಿವೃತ್ತಿ ಆದ ಮೇಲೆ ಏನು ಮಾಡಬೇಕು ಎಂದು ಯಾವುದೇ ಯೋಜನೆ ರೆಡಿ ಮಾಡಿಕೊಂಡಿಲ್ಲ. ಆ ಸಮಯದಲ್ಲೇ ಅದನ್ನು ನಿರ್ಧಾರ ಮಾಡಲಾಗುತ್ತದೆ. ನಿವೃತ್ತಿ ನಂತರ ಏನು ಮಾಡಬೇಕು ಅಂತನೂ ನನಗೆ ಗೊತ್ತಿಲ್ಲ. ನನಗೆ ಎಷ್ಟು ಬೇಕು ಅಷ್ಟೇ ಹಣ ಸಂಪಾದನೆ ಮಾಡೋದು. ಹೆಚ್ಚಿಗೆ ಬೇಕಿಲ್ಲ, ಆಸೆನೂ ಇಲ್ಲ. ಹಣಕ್ಕಾಗಿ ನನ್ನಲ್ಲಿನ ಮೌಲ್ಯ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ.

ಕ್ರಿಕೆಟ್ ಆಡುವಾಗ ಶಕ್ತಿ ಮೀರಿ ಪರ್ಫಾಮೆನ್ಸ್ ನೀಡಲು ಇಷ್ಟ ಪಡುತ್ತೇನೆ. 19, 20 ವಯಸ್ಸಿನಲ್ಲಿ ಮಾಡಿರೋದು 30 ವಯಸ್ಸಿನಲ್ಲಿ ಮಾಡುವುದು ಕೊಂಚ ಕಷ್ಟವಾಗಬಹುದು. ಆದರೆ ತಡವಾಗುತ್ತದೆ. ವೃತ್ತಿ ಜೀವನದ ವಿಭಿನ್ನ ಹಂತದಲ್ಲಿದ್ದೇನೆ. ಐಸಿಸಿ ಟ್ರೋಫಿ ಗೆಲ್ಲುವುದು ಒಂದೇ ಅಲ್ಲ, ಕ್ರಿಕೆಟ್​ನಿಂದ ದೂರ ಆದಾಗ ಭಾರತೀಯ ಕ್ರಿಕೆಟ್ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎನ್ನುವುದು ನನ್ನಾಸೆ ಆಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment