newsfirstkannada.com

ಅರೇ.. ಇದೇನಿದು ಮ್ಯಾಜಿಕ್.. ವಿಲ್​ ಬ್ಯಾಟಿಂಗ್​ ಮೋಡಿಗೆ ನಿಬ್ಬೆರಗಾದ ವಿರಾಟ್​ ಕೊಹ್ಲಿ!

Share :

Published April 29, 2024 at 12:08pm

    ಕೊಹ್ಲಿ ಕಣ್ಣೆದುರೇ ಮ್ಯಾಜಿಕ್​​ ಮಾಡಿದ ವಿಲ್​ ಜಾಕ್ಸ್​

    10 ಸಿಕ್ಸ್​, 5 ಫೋರ್​.. 41 ಎಸತಕ್ಕೆ 100 ರನ್ ಬಾರಿಸಿದ ಜಾಕ್ಸ್​

    ವಿಲ್​ ಜಾಕ್ಸ್​​ ಅಬ್ಬರದ ಆಟ ನೋಡಿ ಕೊಹ್ಲಿ ರಿಯಾಕ್ಷನ್​ ಹೇಗಿತ್ತು ನೋಡಿದ್ರಾ?

ವಿಲ್​ ಜಾಕ್ಸ್​. ನಿನ್ನೆಯ ಪಂದ್ಯದಲ್ಲಿ ಅಕ್ಷರಶಃ ಬೆರಗು ಮೂಡಿಸಿದ ಆಟಗಾರ. ಅದರಲ್ಲಿ ಕಿಂಗ್​ ಕೊಹ್ಲಿಯ ಎದುರೇ ಅಬ್ಬರಿಸಿದ ಆರ್​ಸಿಬಿ ಪ್ಲೇಯರ್​. ಈತನ ಆಟಕ್ಕೆ ಪೆವಿಲಿಯನ್​ನಲ್ಲಿ ಕುಳಿತವರು ಬಿಡಿ ಕಣ್ಣೆದುರೇ ಚಮಕ್​ ಕೊಡುತ್ತಿರುವ ಆಟಗಾರನನ್ನು ಕಂಡು ಕೊಹ್ಲಿಯೇ ಶಾಕ್​ ಆಗಿದ್ದಾರೆ.

ಹೌದು. ಆರ್​ಸಿಬಿ ಅಭಿಮಾನಿಗಳಿಗೆ ನಿನ್ನೆ ನಡೆದಿರೋದು ಪಂದ್ಯವೇ? ಅಥವಾ ಕನಸೇ? ಅಂತ ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಲ್​ ಜಾಕ್ಸ್​ ಮಾಡಿದ ಮೋಡಿ ಮರೆಯಲು ಸಾಧ್ಯವಾಗುತ್ತಿಲ್ಲ. ಆರ್​ಸಿಬಿ ನಾಯಕ ಫಾಪ್​ ಡು ಪ್ಲೇಸಿಸ್​ ವಿಕೆಟ್​ ಒಪ್ಪಿಸಿದ ಬಳಿಕ ಕೊಹ್ಲಿಗೆ ಬಲ ಭೀಮನಂತೆ ಬೆಂಬಲ ನೀಡಲು ಬಂದ ಜಾಕ್​ ಕೊನೆಯ ಘಳಿಗೆಯಲ್ಲಿ ಮಾಡಿದ್ದು ಮಾತ್ರ ಮ್ಯಾಜಿಕ್​.

ವಿಲ್​ ಜಾಕ್ಸ್​​ ಬರೀ 41 ಎಸೆತಕ್ಕೆ 10 ಸಿಕ್ಸ್​, 5 ಫೋರ್​ ಸೇರಿ 100 ರನ್ ಬಾರಿಸಿದ್ದಾರೆ. ಇದನ್ನು ಕಂಡು ಕೊಹ್ಲಿಯೇ ಬೆರಗಾಗಿದ್ದಾರೆ. ಇಂಥಾ ಆಟವನ್ನು ನಾನು ಕಂಡಿಲ್ಲ ಎಂಬಂತೆ ಕೊಹ್ಲಿ ಮುಖದ ಮೇಲೆ ಕೈ ಇಟ್ಟಿದ್ದಾರೆ. ಸದ್ಯ ಜಾಕ್​ ಆಟವನ್ನು ಕಂಡ ಕೊಹ್ಲಿಯ ರಿಯಾಕ್ಷನ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಮೊದಲ 15 ಬಾಲ್​ನಲ್ಲಿ ನರ್ವಸ್ ಆಗಿಬಿಟ್ಟಿದ್ದೆ -ಸ್ಫೋಟಕ ಶತಕದ ಹಿಂದೆ ಕೊಹ್ಲಿ ಮ್ಯಾಜಿಕ್ ತಿಳಿಸಿದ ಜಾಕ್ಸ್​..!

ಇನ್ನು ಈ ಸೀಸನ್​ನಲ್ಲಿ ಅತಿ ಕಡಿಮೆ ಎಸೆತದಲ್ಲಿ ಹೆಚ್ಚು ರನ್​ ಬಾರಿಸಿದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ 10 ಸಿಕ್ಸ್​ ಬಾರಿಸುವ ಮೂಲಕ ಮೊದಲಿಗರಾಗಿದ್ದಾರೆ. ವಿಲ್​ ಜಾಕ್ಸ್​ ಆರ್​ಸಿಬಿ ತಂಡದ ಮುತ್ತು ಎಂಬುದು ಅಭಿಮಾನಿಗಳಿಗೆ ಸಂತಸ. ಹೀಗಾಗಿ ಈ ಬಾರಿ ನೆಚ್ಚಿನ ತಂಡ ಆರ್​ಸಿಬಿ ಪ್ಲೇ ಆಪ್​ಗೆ ಕಾಲಿಡುತ್ತೆ ಎಂಬುದು ಅಭಿಮಾನಿಗಳ ನಿರೀಕ್ಷೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರೇ.. ಇದೇನಿದು ಮ್ಯಾಜಿಕ್.. ವಿಲ್​ ಬ್ಯಾಟಿಂಗ್​ ಮೋಡಿಗೆ ನಿಬ್ಬೆರಗಾದ ವಿರಾಟ್​ ಕೊಹ್ಲಿ!

https://newsfirstlive.com/wp-content/uploads/2024/04/kohli-Reacation-will-Jacks-1.jpg

Load More