/newsfirstlive-kannada/media/post_attachments/wp-content/uploads/2024/08/KL_RAHUL_NEW.jpg)
ಯಂಗ್​​​ಇಂಡಿಯಾ ಟಿ20 ಸರಣಿ ಕ್ಲೀನ್​ಸ್ವೀಪ್ ಸಾಧಿಸಿದ್ದಾಗಿದೆ. ಎರಡು ದಿನಗಳ ವಿಶ್ರಾಂತಿ ಬಳಿಕ ಇಂಡಿಯನ್ ಟೈಗರ್ಸ್ ಮತ್ತೊಂದು ಅಸೈನ್​ಮೆಂಟ್​​ ಸಜ್ಜಾಗಿದ್ದಾರೆ. ಇಂದಿನಿಂದ ಇಂಡೋ-ಲಂಕಾ ಒನ್​ಡೇ ಸರಣಿ ಆರಂಭಗೊಳ್ಳಲಿದ್ದು, ರೋಹಿತ್​​ ಶರ್ಮಾ ಪಡೆ ಶುಭಾರಂಭದ ನಿರೀಕ್ಷೆಯಲ್ಲಿದೆ. ಆದ್ರೆ, ಪ್ಲೇಯಿಂಗ್​​​- 11 ಆಯ್ಕೆಯೇ ದೊಡ್ಡ ಕಗ್ಗಂಟಾಗಿದೆ.
ಏಕದಿನ ಬ್ಯಾಟಲ್​​ಗೆ ರೋಹಿತ್ ಶರ್ಮಾ​​​​​​​ & ಗ್ಯಾಂಗ್​​ ರೆಡಿ..!
ಟಿ20 ಸರಣಿ ವೈಟ್​ವಾಶ್​ ಬಳಿಕ ಟೀಮ್ ಇಂಡಿಯಾ ಒನ್ಡೇ ಬ್ಯಾಟಲ್​ಗೆ ಸಜ್ಜಾಗಿದೆ. ಕೊಲಂಬೋದಲ್ಲಿ ಭಾರತ-ಲಂಕಾ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಟಿ20 ಸ್ಟ್ರೈಲ್​​ನಲ್ಲೆ ಲಂಕಾವನ್ನ ದಹನ ಮಾಡಲು ಮೆನ್​ ಇನ್ ಬ್ಲೂ ಪಡೆ ಸಜ್ಜಾಗಿದೆ. ಮೊದಲ ಟಾಸ್ಕ್​ನಲ್ಲಿ​​​​​​​ ಗೆದ್ದು ಬೀಗಿರುವ ಹೆಡ್​ಕೋಚ್​ ಗೌತಮ್ ಗಂಭೀರ್​​, ಕ್ಯಾಪ್ಟನ್​​​ ರೋಹಿತ್​ ಶರ್ಮಾ ಜೊತೆಗೂಡಿ ಗೆಲುವಿನ ಓಟವನ್ನ​​​ ಮುಂದುವರಿಸುವ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ: ವಯನಾಡು ದುರಂತ: ಜೀವ ಪಣಕ್ಕಿಟ್ಟು ಪ್ರಾಣ ಉಳಿಸಿದ ವೃದ್ಧ; ಹಸೂಗೂಸುಗಳಿಗೆ ಹಾಲುಣಿಸಿದ ತಾಯಿ!
/newsfirstlive-kannada/media/post_attachments/wp-content/uploads/2024/06/VIRAT_KOHLI-18-1.jpg)
ನಾವು ಇಲ್ಲಿ ಮೂರು ಪಂದ್ಯಗಳನ್ನ ಆಡುತ್ತೇವೆ. ಇಲ್ಲಿಂದ ಏನಾದ್ರು ತೆಗೆದುಕೊಂಡು ಹೋಗುವ ಗುರಿ ಇದೆ. ಅದಕ್ಕಾಗಿ ಏಕದಿನ ಕ್ರಿಕೆಟ್ನಲ್ಲಿ ಏನಾದ್ರು ಸಾಧನೆ ಮಾಡಬೇಕು ಎಂದು ಬಯಸುತ್ತೇವೆ.
ರೋಹಿತ್ ಶರ್ಮಾ, ಕ್ಯಾಪ್ಟನ್
ರಾಹುಲ್​​ VS ಪಂತ್​​​..ಯಾರಿಗೆ ವಿಕೆಟ್ ಕೀಪಿಂಗ್ ಹೊಣೆ..?
ಇಂದಿನ ಪಂದ್ಯಕ್ಕೂ ಮುನ್ನ ವಿಕೆಟ್ ಕೀಪರ್ ಆಯ್ಕೆನೇ ಟೀಮ್ ಮ್ಯಾನೇಜ್​ಮೆಂಟ್​ಗೆ ಟೆನ್ಷನ್ ತಂದೊಡ್ಡಿದೆ. ಒಂದು ಸ್ಥಾನಕ್ಕಾಗಿ ರಿಷಬ್​ ಪಂತ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮಧ್ಯೆ ಫೈಟ್ ಏರ್ಪಟ್ಟಿದೆ.
ರಿಷಬ್ ಪಂತ್ ಹಾಗೂ ಕೆಎಲ್ ರಾಹುಲ್ ಆಯ್ಕೆ ನಿಜಕ್ಕೂ ಕಷ್ಟದ ಕೆಲಸ. ಇಬ್ಬರೂ ಕ್ವಾಲಿಟಿ ಆಟಗಾರರು. ತಂಡದ ಆಯ್ಕೆ ಆಗಲಿ ಅಥವಾ ಆಟಗಾರರ ಆಯ್ಕೆ ಆಗಲಿ ಸುಲಭವಿಲ್ಲ. ಇಬ್ಬರು ಮ್ಯಾಚ್ ವಿನ್ನರ್ಸ್.
ರೋಹಿತ್ ಶರ್ಮಾ, ಕ್ಯಾಪ್ಟನ್
ಯಂಗ್​​ಗನ್​​​ ರಿಯಾನ್​ ಪರಾಗ್​ಗೆ ಡೆಬ್ಯು ಭಾಗ್ಯ ಸಿಗುತ್ತಾ..?
ಟಿ20 ಸರಣಿಯಲ್ಲಿ ಇಂಪ್ರೆಸ್​ ಮಾಡಿರುವ ರಿಯಾನ್​ ಪರಾಗ್​ ಏಕದಿನಕ್ಕೆ ಪದಾರ್ಪಣೆ ಮಾಡುವ ಕನಸು ಕಾಣ್ತಿದ್ದಾರೆ. 6ನೇ ಸ್ಲಾಟ್​ನಲ್ಲಿ ಪರಾಗ್ ಆಡಿಸಿದ್ರೆ ಬ್ಯಾಟಿಂಗ್​​​, ಜೊತೆ ಬೌಲಿಂಗ್ ಆಪ್ಷನ್​ ಕೂಡ ಸಿಗಲಿದೆ. ಆದ್ರೆ ಪರಾಗ್​​​ರನ್ನ ಹಿಂದಿಕ್ಕಿ ಸ್ಥಾನ ಆಕ್ರಮಿಸಲು ಶಿವಂ ದುಬೆ ಕೂಡ ಎದುರು ನೋಡ್ತಿದ್ದಾರೆ. ಕೊಲಂಬೋ ಸ್ಪಿನ್ ಫ್ರೆಂಡ್ಲಿ ಪಿಚ್​ ಆಗಿರೋದ್ರಿಂದ ಪರಾಗ್​​​ ಡೆಬ್ಯು ಮಾಡುವ ಸಾಧ್ಯತೆ ಹೆಚ್ಚಿದೆ.
ಸುಂದರ್​ VS ಕುಲ್​ದೀಪ್.. ಅಕ್ಷರ್​ ಜೊತೆಗಾರ ಯಾರು.?
ಕೊಲಂಬೋದಲ್ಲಿ ಸ್ಪಿನ್ ಆಲ್​ರೌಂಡರ್​ ಅಕ್ಷರ್ ಪಟೇಲ್ ಆಡುವುದು ಕನ್ಫರ್ಮ್​ ಆಗಿದೆ. ಆದ್ರೆ ಅವರಿಗೆ ಜೊತೆಯಾರ ಯಾರು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. 2ನೇ ಸ್ಪಿನ್ನರ್​​​​​​​​​​​​​ ಸ್ಥಾನಕ್ಕೆ ಕುಲ್ದೀಪ್​ ಯಾದವ್​ ಹಾಗೂ ವಾಷಿಂಗ್ಟನ್ ಸುಂದರ್ ನಡುವೆ ರೇಸ್ ಏರ್ಪಟ್ಟಿದೆ. ಕುಲ್​​ದೀಪ್​​​ ಸ್ಟ್ರಾಂಗ್​ ಕಂಟೆಂಡರ್​​ ಅನ್ನಿಸಿದ್ರೂ, ಸುಂದರ್​​​​​ ಆಲ್​ರೌಂಡರ್ ಆಟವನ್ನ ಕಡೆಗಣಿಸುವಂತಿಲ್ಲ.
ಕಿಂಗ್ ಕೊಹ್ಲಿ - ರೋಹಿತ್ ಶರ್ಮಾ ಕೇಂದ್ರಬಿಂದು..!
ಕಿಂಗ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಇಂದಿನ ಪಂದ್ಯದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಟಿ20 ಕ್ರಿಕೆಟ್​ಗೆ ಗುಡ್​​ಬೈ ಹೇಳಿದ ಬಳಿಕ ದಿಗ್ಗಜರು ಮೊದಲ ಒನ್ಡೇ ಸರಣಿ ಆಡುತ್ತಿದ್ದಾರೆ. ಮ್ಯಾಚ್ ವಿನ್ನರ್​ಗಳು ಹೇಗೆ ಘರ್ಜಿಸ್ತಾರೆ ಅನ್ನೋ ಕುತೂಹಲವಿದೆ. ಇಬ್ಬರು ಸಿಡಿದೆದ್ರೆ ಲಂಕಾ ಸಂಹಾರ ಆಗೋದು ಪಕ್ಕಾ.
ನಾವು ಹೊಸದನ್ನ ಮಾಡಲು ಯೋಚಿಸುತ್ತಿದ್ದೇವೆ. ಪ್ಲಾನ್ ಹೇಗೆ ವರ್ಕ್ ಆಗುತ್ತೆ ಅನ್ನೋದನ್ನ ನೋಡಬೇಕು.
ರೋಹಿತ್ ಶರ್ಮಾ, ಕ್ಯಾಪ್ಟನ್
/newsfirstlive-kannada/media/post_attachments/wp-content/uploads/2024/06/KULDEEP-YADAV-1.jpg)
ಕೊಲಂಬೋ ಕೊಹ್ಲಿ ಫೇವರಿಟ್ ಗ್ರೌಂಡ್​​.. ರನ್​​ ಪ್ರಹಾರ ಫಿಕ್ಸ್​​..!
ಹೇಳಿ ಕೇಳಿ ಕೊಲಂಬೋ ಮೈದಾನ ಕಿಂಗ್ ಕೊಹ್ಲಿಯ ಫೇವರಿಟ್​ ಗ್ರೌಂಡ್​​​. ಇಲ್ಲಿ ರನ್ ಹೊಳೆಯನ್ನೆ ಹರಿಸಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 3 ಶತಕ ಸಹಿತ ಬರೋಬ್ಬರಿ 522 ರನ್​ ಕೊಳ್ಳೆ ಹೊಡೆದಿದ್ದಾರೆ. ಜೊತೆಗೆ ಶ್ರೀಲಂಕಾ ವಿರುದ್ಧ ಏಕದಿನದಲ್ಲಿ 2,594 ರನ್ ಸಿಡಿಸಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್​ಗೆ ಏನಾಯಿತು..?
ಇಂಡೋ-ಲಂಕಾ ಮೊದಲ ಬ್ಯಾಟಲ್​ಗೆ ಮಳೆ ಆತಂಕವೂ ಇದೆ. ಕಳೆದೆರಡು ದಿನಗಳಿಂದ ಕೊಲಂಬೋದಲ್ಲಿ ಮಳೆ ಸುರಿದಿದೆ. ಆದ್ರೆ, ಪಂದ್ಯ ರದ್ದಾಗುವಷ್ಟು ಮಳೆ ಆಗಲ್ಲ ಎಂದು ವರದಿಯಾಗಿದೆ. ಹೀಗಾಗಿ ಫ್ಯಾನ್ಸ್​ ಪಂದ್ಯವನ್ನ ಕಣ್ತುಂಬಿಕೊಳ್ಳಬಹುದು. ಮೊದಲ ಒನ್ಡೆ ವಾರ್​​​ನಲ್ಲಿ ರೋಹಿತ್​​​ ಪಡೆ ಗೆದ್ದು ಶುಭಾರಂಭ ಮಾಡುತ್ತಾ? ಇಲ್ಲ ಆ ಕನಸಿಗೆ ಲಂಕಾ ಅಡ್ಡಗಾಲು ಹಾಕುತ್ತಾ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us