newsfirstkannada.com

‘ಕೊಹ್ಲಿ, ರೋಹಿತ್​ ಕೂಡ ರಣಜಿ ಆಡಲಿ‘- ಅಯ್ಯರ್​​​, ಇಶಾನ್​ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ದಿಗ್ಗಜರ​ ಆಕ್ರೋಶ!

Share :

Published February 29, 2024 at 6:10pm

Update February 29, 2024 at 6:05pm

    ಇಶಾನ್​ ಕಿಶನ್​​, ಶ್ರೇಯಸ್​ ಅಯ್ಯರ್​​ ವಿರುದ್ಧ ಮಾತ್ರ ಕ್ರಮ ಯಾಕೆ?

    ವಿರಾಟ್​​, ರೋಹಿತ್​ ಶರ್ಮಾ ಕೂಡ ರಣಜಿ ಕ್ರಿಕೆಟ್​ ಆಡಲೇಬೇಕು

    ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​​​ ಬಿಸಿಸಿಐ ವಿರುದ್ಧ ಆಕ್ರೋಶ

ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿರೋ ಆಟಗಾರರು ರಣಜಿ ಟ್ರೋಫಿ ಆಡಲೇಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಷಾ ಎಚ್ಚರಿಕೆ ನೀಡಿದ್ದರು. ಇಷ್ಟಾದ್ರೂ ಇದನ್ನು ನಿರ್ಲಕ್ಷ್ಯ ಮಾಡಿದ್ದ ಕ್ರಿಕೆಟಿಗರಾದ ಇಶಾನ್‌ ಕಿಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ ಐಪಿಎಲ್​​ ತಯಾರಿಯಲ್ಲಿ ತೊಡಗಿದ್ದರು. ಇದರಿಂದ ಸಿಟ್ಟಿಗೆದ್ದ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೇ ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್​ಗೆ ಕೊಕ್​ ನೀಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಇಶಾನ್​, ಶ್ರೇಯಸ್​ ಅಯ್ಯರ್​ ರಣಜಿ ಆಡಲು ಮುಂದಾಗಿದ್ದಾರೆ. ಸದ್ಯ ಕ್ಯಾಪ್ಟನ್​ ರೋಹಿತ್​ ಶರ್ಮಾ, ಮಾಜಿ ನಾಯಕ ವಿರಾಟ್​ ಕೊಹ್ಲಿ ಕೂಡ ರಣಜಿ ಆಡಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ.

ಈ ಸಂಬಂಧ ಮಾತಾಡಿದ ಟೀಮ್​ ಇಂಡಿಯಾದ ವಿಶ್ವಕಪ್​ ವಿನ್ನರ್​ ಕೀರ್ತಿ ಆಜಾದ್​​, ಎಲ್ಲರೂ ರಣಜಿ ಕ್ರಿಕೆಟ್​ ಆಡಲೇಬೇಕು ಅನ್ನೋದು ಒಳ್ಳೆಯ ನಿರ್ಧಾರ. ಸದ್ಯ ಐಪಿಎಲ್​ ಇರೋ ಕಾರಣ ಎಲ್ಲರೂ ಆ ಟೂರ್ನಿ ಬಗ್ಗೆಯೇ ಗಮನ ಕೊಡುತ್ತಿದ್ದಾರೆ. ರಿಯಲ್​ ಕ್ರಿಕೆಟ್​ ಎಂದರೆ ಐದು ದಿನದ ಆಟ. ಹಾಗಾಗಿ ಬಿಸಿಸಿಐ ಈ ಆದೇಶ ಸರಿಯಾಗಿದೆ ಎಂದರು.

ಕೇವಲ ಶ್ರೇಯಸ್​ ಅಯ್ಯರ್​​, ಇಶಾನ್​ ಕಿಶನ್​ಗೆ ಮಾತ್ರ ಶಿಕ್ಷೆ ನೀಡುವುದಲ್ಲ. ಎಲ್ಲರೂ ರಣಜಿ ಕ್ರಿಕೆಟ್​ ಆಡಲೇಬೇಕು. ಫ್ರೀ ಇದ್ದಾಗ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಕೂಡ ರಣಜಿ ಆಡಬೇಕು. ಎಲ್ಲರಿಗೂ ಈ ರೂಲ್ಸ್​ ಅಪ್ಲೈ ಆಗಬೇಕು. ಅಯ್ಯರ್​, ಇಶಾನ್​ ವಿರುದ್ಧ ಮಾತ್ರ ಕ್ರಮ ಯಾಕೆ? ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಎಂದು ಆಜಾದ್​ ಆಕ್ರೋಶ ಹೊರಹಾಕಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕೊಹ್ಲಿ, ರೋಹಿತ್​ ಕೂಡ ರಣಜಿ ಆಡಲಿ‘- ಅಯ್ಯರ್​​​, ಇಶಾನ್​ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ದಿಗ್ಗಜರ​ ಆಕ್ರೋಶ!

https://newsfirstlive.com/wp-content/uploads/2023/08/Rohit-And-Kohli.jpg

Load More