/newsfirstlive-kannada/media/post_attachments/wp-content/uploads/2025/02/IND-VS-PAK-4-1.jpg)
ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಅಂದ್ರೆನೇ ರಣರೋಚಕ.. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ, ಪಾಕಿಗಳ ಬೇಟೆಯಾಡಿದೆ. ಮೊದಲ ಪಂದ್ಯ ಸೋತಿದ್ದ ರಿಜ್ವಾನ್ ಪಡೆಗೆ ರೋಹಿತ್ ಪಡೆ ಮತ್ತೊಂದು ಪೆಟ್ಟು ಕೊಟ್ಟಿದೆ. ರೋಹಿತ್ ಸೈನ್ಯ, ದುಬೈನಲ್ಲಿ ವಿಜಯೋತ್ಸವ ಆಚರಿಸಿದೆ. ಆ ಮೂಲಕ ಶತ್ರು ಪಾಕ್ ಸಂಹಾರವಾಗಿದೆ. ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳ ಸೆಲೆಬ್ರೇಷನ್ ಜೋರಾಗಿದೆ.
ಇದನ್ನೂ ಓದಿ:ಗೆಸ್ ಮಾಡಿ.. ಭಾರತ- ಪಾಕ್ ಪಂದ್ಯವನ್ನ ಆರಂಭದಿಂದ ಕೊನೆವರೆಗೆ ನೋಡಿದ ಈ ರಾಜಕಾರಣಿ ಯಾರು?
ಇದು ರಣರೋಚಕ ಸೆಲೆಬ್ರೇಷನ್.. ಬದ್ಧ ಎದುರಾಳಿಗಳ ಬಗ್ಗುಬಡಿದ ಸಂಭ್ರಮ.. ಸಾಂಪ್ರದಾಯಿಕ ಎದುರಾಳಿಗಳ ಮಗ್ಗಲ ಮುರಿದಿದ್ದಕ್ಕಾಗಿ ನಡೀತಿರೋ ಹರ್ಷೋದ್ಗಾರ.. ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಪಾಕ್ ಉಡೀಸ್ ಆಗಿರೋದಕ್ಕೆ ಪಟಾಕಿ ಸಿಡಿಸಿ ಮಾಡ್ತಿರೋ ಸೆಲಬ್ರೇಷನ್.
ಕಿಂಗ್ ಕೊಹ್ಲಿಯ ಅಬ್ಬರ.. ಪಾಕಿಸ್ತಾನ ಟೀಂ ತತ್ತರ!
ಒಂದೊಂದು ಶಾಟ್.. ಪಾಕಿಸ್ತಾನಿಗಳಿಗೆ ಕೊಟ್ಟ ಏಟು.. ಕೊಹ್ಲಿ ಕವರ್‌ಡ್ರೈವ್ವು.. ರಿಜ್ವಾನ್ ಟೀಂ ಫುಲ್ ಡಲ್ಲು.. ಶತಕದ ಚೇಸ್.. ವಿರಾಟ ರೂಪ ಕಂಡು ಪಾಕ್ ನಿಲ್.. ಇದು ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಮ್ಯಾಚ್.. ಪಾಕಿಸ್ತಾನ ಎದುರಿನ ಕಾಳಗದಲ್ಲಿ ಟೀಂ ಇಂಡಿಯಾ ವಿಜಯದ ಪತಾಕೆ ಹಾರಿಸಿದೆ. 6 ವಿಕೆಟ್‌ಗಳಿಂದ ಹಿಟ್‌ಮ್ಯಾನ್ ಪಡೆ ಭರ್ಜರಿ ಜಯ ದಾಖಲಿಸಿದೆ.
ಭಾರತ ಗೆಲುವು.. ಪಟಾಕಿ ಸಿಡಿಸಿ ಫ್ಯಾನ್ಸ್ ಸಂಭ್ರಮ!
ದುಬೈನಲ್ಲಿ ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನ ಬಗ್ಗುಬಡಿದಿದೆ. 6 ವಿಕೆಟ್‌ಗಳಿಂದ ಪಾಕಿಗಳನ್ನ ಸೋಲಿಸಿದೆ. ಅತ್ತ ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆ ದೇಶಾದ್ಯಂತ ಜೈ ಹೋ ಎಂಬ ಮಂತ್ರಘೋಷ ಮೊಳಗಿತ್ತು. ಎಲ್ಲೆಲ್ಲೂ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಾಗಿತ್ತು.
ಬೆಂಗಳೂರಿನಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಪಬ್‌ಗಳಲ್ಲಿ ವೀಕೆಂಡ್ ಮೋಜು ಮಾಡುತ್ತಾ ಕೊಹ್ಲಿ ಆಟ ನೋಡಿದವರು ರೊಚ್ಚಿಗೆದ್ದಿದ್ರು. ಕುಣಿದು ಕುಪ್ಪಳಿಸುತ್ತಾ ಟೀಂ ಇಂಡಿಯಾ ಗೆಲುವನ್ನ ಸಂಭ್ರಮಿಸಿದ್ರು.
ಬೆಳಗಾವಿಯಲ್ಲೂ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ನಗರದ ಗೊಂದಳಿ ಗಲ್ಲಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಯುವಕರು ಕುಣಿದು ಕುಪ್ಪಳಿಸಿದ್ರು. ಕೊಹ್ಲಿ ಶತಕ.. ಟೀಂ ಇಂಡಿಯಾ ಜಯವನ್ನ ಸಂಭ್ರಮಿಸುತ್ತಾ ಎಂಜಾಯ್ ಮಾಡಿದ್ರು.
ಹುಬ್ಬಳ್ಳಿಯಲ್ಲೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಜಯಭೇರಿ ಭಾರಿಸಿದ್ದನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಯ್ತು. ವಿರಾಟ್ ಕೊಹ್ಲಿ ಪರ ಜಯಘೋಷ ಕೂಗುತ್ತಾ ಯುವಕರು ತಮ್ಮ ಖುಷಿಯನ್ನ ವ್ಯಕ್ತಪಡಿಸಿದ್ರು. ಜೊತೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಪಾಕ್ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದ ಸಂಭ್ರಮ ಮನೆಮಾಡಿತ್ತು.
ದೇಶಾದ್ಯಂತ ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡುತ್ತಾ ಟೀಂ ಇಂಡಿಯಾ ಅಭಿಮಾನಿಗಳು ಸಂಭ್ರಮಪಟ್ರು. ಎಲ್ಲೆಲ್ಲೂ ಜೈ ಹೋ ಟೀಂ ಇಂಡಿಯಾ ಎಂಬ ಘೋಷ ಮೊಳಗಿತ್ತು. ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದನ್ನ ಗುಣಗಾನ ಮಾಡುತ್ತಾ ಯುವಕರು ಹುಚ್ಚೆದ್ದು ಕುಣಿದ್ರು. ಎಲ್ಲೆಲ್ಲೂ ತ್ರಿವರ್ಣ ಧ್ವಜ ಹಾರಿಸುತ್ತಾ ಸಖತ್ ಎಂಜಾಯ್ ಮಾಡಿದ್ರು.
ಇದನ್ನೂ ಓದಿ: ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಅಬ್ಬರ; ಪಾಕ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಕೊಹ್ಲಿ
ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿರೋ ಪಾಕಿಸ್ತಾನವೇ ಟೂರ್ನಿಯಲ್ಲಿ ಸೋತು ಸುಣ್ಣವಾಗಿದೆ. ಸಮಿಫೈನಲ್ ತಲುಪುವ ಕನಸು ನುಚ್ಚು ನೂರಾಗಿದೆ. ಭಾರತದ ಸಮಿಫೈನಲ್ ಹಾದಿ ಮತ್ತಷ್ಟು ಸುಗಮವಾಗಿದೆ. ಅದೇನೆ ಇರಲಿ, ಬದ್ಧವೈರಿಗಳ ವಿರುದ್ಧದ ಕ್ರಿಕೆಟ್ ಯುದ್ಧ ಗೆದ್ದ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಉತ್ಸಾಹ ಮತ್ತಷ್ಟು ಹೆಚ್ಚಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ