ಕೇವಲ ಒಂದೇ 1 ರನ್​​ನಿಂದ ಆರೆಂಜ್​ ಕ್ಯಾಪ್​ ಪಡೆದ ಕಿಂಗ್ ಕೊಹ್ಲಿ.. ಪರ್ಪಲ್ ಕ್ಯಾಪ್​ ಕೂಡ ಕನ್ನಡಿಗನಿಗೆ

author-image
Bheemappa
Updated On
ಕೇವಲ ಒಂದೇ 1 ರನ್​​ನಿಂದ ಆರೆಂಜ್​ ಕ್ಯಾಪ್​ ಪಡೆದ ಕಿಂಗ್ ಕೊಹ್ಲಿ.. ಪರ್ಪಲ್ ಕ್ಯಾಪ್​ ಕೂಡ ಕನ್ನಡಿಗನಿಗೆ
Advertisment
  • ಫ್ಯಾನ್ಸ್​ಗೆ ಮಸ್ತ್ ಮಜಾ ನೀಡುತ್ತಿರುವ ಐಪಿಎಲ್​ ಸೀಸನ್- 18
  • ಪರ್ಪಲ್, ಆರೆಂಜ್ ಕ್ಯಾಪ್​ಗಾಗಿ ಆಟಗಾರರ ಪೈಪೋಟಿ ಹೇಗಿದೆ?
  • ​ವಿರಾಟ್ ಕೊಹ್ಲಿ ನಂತರ ಸ್ಥಾನ ಪಡೆದಿರುವ ಬ್ಯಾಟ್ಸ್​ಮನ್ ಯಾರು?

2025ರ ಐಪಿಎಲ್​ ಟೂರ್ನಿಯಲ್ಲಿ ಈಗಾಗಲೇ ಪ್ಲೇ ಆಫ್​ನ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಇದರ ನಡುವೆ ರಾಜಸ್ಥಾನ್, ಚೆನ್ನೈ ಪ್ಲೇ ಆಫ್​ನಿಂದ ಹೊರ ಬಿದ್ದಿವೆ. ಬಲಿಷ್ಠ ತಂಡಗಳಲ್ಲಿನ ಬ್ಯಾಟ್ಸ್​ಮನ್​ಗಳ ನಡುವೆ ಆರೆಂಜ್ ಕ್ಯಾಪ್​ಗಾಗಿ ಹೋರಾಟ ನಡೆಯುತ್ತಿದೆ. ಟೂರ್ನಿಯಲ್ಲಿ ಒಂದೊಂದು ಬಾರಿ ಒಬ್ಬೊಬ್ಬರ ಬಳಿ ಇರುತ್ತಿರುವ ಆರೆಂಜ್ ಕ್ಯಾಪ್​, ಈಗ ಒಂದು ರನ್​ನಿಂದ ಕಿಂಗ್​ ಕೊಹ್ಲಿ ಬಳಿಗೆ ಬಂದಿದೆ.

ದಿ ಗ್ರ್ಯಾಂಡ್​ ಐಪಿಎಲ್​ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್​ಗಾಗಿ ನಡೆಯುವ ಪೈಪೋಟಿ ಕೂಡ ಮಸ್ತ್ ಮಜಾ ನೀಡುತ್ತಿದೆ. ಆರ್​​ಸಿಬಿಯ ಸ್ಟಾರ್​ ಪ್ಲೇಯರ್​ ವಿರಾಟ್​ ಕೊಹ್ಲಿ ಬಳಿಗೆ ಈಗಾಗಲೇ ಬಂದು ಹೋಗಿದ್ದ ಆರೆಂಜ್ ಕ್ಯಾಪ್ ಈಗ ಮತ್ತೆ ಕೊಹ್ಲಿ ತೆಕ್ಕೆಗೆ ಬಂದಿದೆ. ಪರ್ಪಲ್ ಕ್ಯಾಪ್ ಕೂಡ ಆರ್​ಸಿಬಿ ಪೇಸ್​ ಬೌಲರ್​ ಜೋಶ್ ಹೆಜಲ್ವುಡ್ (18 ವಿಕೆಟ್​) ಬಳಿಯಿಂದ ಗುಜರಾತ್​ ತಂಡದಲ್ಲಿ ಆಡುತ್ತಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ (19 ವಿಕೆಟ್ಸ್​) ಬಾಚಿಕೊಂಡಿದ್ದಾರೆ.

ಇದನ್ನೂ ಓದಿ:ಒಂದೇ ಓವರ್​, 32 ರನ್​.. ಕೇವಲ 14 ಬಾಲ್​ಗೆ ಅರ್ಧಶತಕ ಸಿಡಿಸಿದ RCB ಸ್ಫೋಟಕ ಬ್ಯಾಟರ್ ​

publive-image

ಕಿಂಗ್ ಕೊಹ್ಲಿ ಭಾರೀ ರನ್​​ಗಳ ಅಂತದಿಂದ ಏನು ಆರೆಂಜ್ ಕ್ಯಾಪ್ ಪಡೆದುಕೊಂಡಿಲ್ಲ. ಕೇವಲ ಒಂದೇ ಒಂದು ರನ್​​ ಅಂತರದಿಂದ ರನ್​ ಗಳಿಕೆಯಲ್ಲಿ ಅಗ್ರಜನಾಗಿದ್ದಾರೆ. 11 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 505 ರನ್​ ಗಳಿಸಿ ಮೊದಲ ಸ್ಥಾನ ಪಡೆದು ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ 5 ಬೌಂಡರಿ, 5 ಸಿಕ್ಸರ್​ಗಳಿಂದ 62 ರನ್​ ಬಾರಿಸೋ ಮೂಲಕ ಟೂರ್ನಿಯಲ್ಲಿ 505 ರನ್​ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ.

ಅದರಂತೆ ಕೊಹ್ಲಿ ನಂತರದ ಸ್ಥಾನ ಗುಜರಾತ್​ನ ಓಪನರ್​ ಸಾಯಿ ಸುದರ್ಶನ್ ಇದ್ದು 10 ಪಂದ್ಯಗಳಿಂದ 504 ರನ್​ಗಳನ್ನು ಗಳಿಸಿದ್ದಾರೆ. ಇನ್ನು ಮುಂಬೈನ ಸೂರ್ಯಕುಮಾರ್ ಕೂಡ ಈ ರೇಸ್​ನಲ್ಲಿದ್ದೂ ಒಮ್ಮೆ ಆರೆಂಜ್ ಕ್ಯಾಪ್​ಗೆ ಪಾತ್ರರಾಗಿದ್ದಾರೆ. ಸೂರ್ಯ 11 ಮ್ಯಾಚ್​ಗಳಿಂದ 475 ರನ್​ಗಳನ್ನು ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಸದ್ಯಕ್ಕಂತೂ ಈ ಮೂವರಲ್ಲೇ ಆರೆಂಜ್ ಕ್ಯಾಪ್ ಜಂಪ್ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment