/newsfirstlive-kannada/media/post_attachments/wp-content/uploads/2025/04/KOHLI-bumrah.jpg)
ಮುಂಬೈ ಇಂಡಿಯನ್ಸ್ಗೆ ಜಸ್ಪ್ರಿತ್ ಬುಮ್ರಾ ಕಂಬ್ಯಾಕ್ ಮಾಡಿದ್ದಾರೆ. ಇಂದು ನಡೆಯಲಿರುವ RCB ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ. ಸಹಜವಾಗಿಯೇ ಆರ್‌ಸಿಬಿ ಕ್ಯಾಂಪ್ನಲ್ಲಿ ಗೇಮ್ಪ್ಲಾನ್ ಚೆಂಚ್ ಆಗಿದೆ.
ಗಾಯದ ನಂತರ ತಂಡಕ್ಕೆ ಮರಳಿರುವ ಬುಮ್ರಾ ಅವರನ್ನು ಕೊಹ್ಲಿ ಎದುರಿಸಲಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿಯನ್ನು ಬುಮ್ರಾ ಈಗಾಗಲೇ 5 ಬಾರಿ ಔಟ್ ಮಾಡಿದ್ದಾರೆ. ಕೊಹ್ಲಿ ಮತ್ತು ಬುಮ್ರಾ ಐಪಿಎಲ್‌ನ ಅತ್ಯುತ್ತಮ ಆಟಗಾರರು. ಪಂದ್ಯದಲ್ಲಿ ಇಬ್ಬರ ನಡುವೆ ಕಠಿಣ ಪೈಪೋಟಿ ಇರುತ್ತದೆ. ಬುಮ್ರಾ 16 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಯನ್ನು 5 ಬಾರಿ ಪೆವಿಲಿಯನ್‌ಗೆ ಕಳುಹಿಸಿದ್ದಾರೆ.
ಕೊಹ್ಲಿ ಬುಮ್ರಾ ಅವರ 95 ಎಸೆತಗಳನ್ನು ಎದುರಿಸಿದ್ದಾರೆ. 147.36 ಸ್ಟ್ರೈಕ್ ರೇಟ್‌ನಲ್ಲಿ 140 ರನ್ ಗಳಿಸಿದ್ದಾರೆ. 15 ಬೌಂಡರಿ, 5 ಸಿಕ್ಸರ್ ಇದರಲ್ಲಿ ಸೇರಿವೆ. ಆದಾಗ್ಯೂ ಅವರ ಸರಾಸರಿ ಕೇವಲ 28 ರನ್ ಆಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ದೈತ್ಯ ಬ್ಯಾಟಿಂಗ್ ಪಡೆ.. MI ವಿರುದ್ಧ 3 ಅಸ್ತ್ರ ಪ್ರಯೋಗಿಸಲು ರಜತ್ ಪ್ಲಾನ್..!
ಬೆನ್ನಿನ ಗಾಯದಿಂದಾಗಿ ಬುಮ್ರಾ ದೀರ್ಘಕಾಲದವರೆಗೆ ಕ್ರಿಕೆಟ್ ಮೈದಾನದಿಂದ ದೂರವಿದ್ದರು. 2025ರ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದರು. ಕೆಲವು ದಿನಗಳ ಹಿಂದೆ ಮುಂಬೈ ತಂಡವನ್ನು ಸೇರಿಕೊಂಡಿದ್ದರು. ಆದರೆ ಫಿಟ್ನೆಸ್ ವಿಭಾಗದಿಂದ ಬುಮ್ರಾಗೆ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ.
ಆರ್‌ಸಿಬಿ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಬೆವರು ಸುರಿಸಿದ್ದಾರೆ. ಬುಮ್ರಾಗೆ ಈ ಋತುವಿನ ಮೊದಲ ಪಂದ್ಯವಾಗಿದೆ. ಕೊಹ್ಲಿ ಈ ಋತುವಿನಲ್ಲಿ ಮೂರು ಪಂದ್ಯಗಳನ್ನು ಆಡಿದ್ದಾರೆ. 3 ಪಂದ್ಯಗಳಲ್ಲಿ 97 ರನ್ ಗಳಿಸಿದ್ದಾರೆ. ಇದರಲ್ಲಿ ಅರ್ಧಶತಕವೂ ಸೇರಿದೆ.
ಇದನ್ನೂ ಓದಿ: ರಾಜ್ಯದಲ್ಲಿ 1 ವಾರ ಪೂರ್ವ ಮುಂಗಾರು ಮಳೆಯ ಅಬ್ಬರ.. ಯಾವ ಜಿಲ್ಲೆಯಲ್ಲಿ ಹೆಚ್ಚು ಮಳೆ? ಎಷ್ಟು ದಿನ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್