/newsfirstlive-kannada/media/post_attachments/wp-content/uploads/2025/03/DHONI_KOHLI.jpg)
ಇಂದು ನಡೀತಿರೋ ಪಂದ್ಯ ಚೆನ್ನೈ vs ಬೆಂಗಳೂರು ದಂಗಲ್ ಅಲ್ವೇ ಅಲ್ಲ. ಇದು ಕೊಹ್ಲಿ vs ಧೋನಿ ನಡುವಿನ ಫೈಟ್ ಆಗಿ ಮಾರ್ಪಟ್ಟಿದೆ. ಚಿನ್ನಸ್ವಾಮಿ ಸ್ಟೇಡಿಯಂ ಇವತ್ತು ಕಿಕ್ಕಿರಿದು ತುಂಬೋದು ಪಕ್ಕಾ. ಗುರು-ಶಿಷ್ಯರ ನಡುವಿನ ಕಾಳಗದ ಕಿಚ್ಚು ಅಷ್ಟರಮಟ್ಟಿಗೆ ಕ್ರಿಕೆಟ್ ಲೋಕವನ್ನೇ ಆವರಿಸಿಬಿಟ್ಟಿದೆ. ಕೊಹ್ಲಿ.. ಕೊಹ್ಲಿ.. ಧೋನಿ.. ಧೋನಿ.. ಈ ಎರಡೇ ಹೆಸರುಗಳು ಇವತ್ತು ಚಿನ್ನಸ್ವಾಮಿ ಅಂಗಳದಲ್ಲಿ ಮಾರ್ದನಿಸಲಿದೆ.
ಇದನ್ನು ಓದಿ: ಪ್ರಸಿದ್ಧ ಕೃಷ್ಣ ಅದ್ಭುತ ಸ್ಪೆಲ್.. ಗೆಲುವಿನೊಂದಿಗೆ SRH ಮನೆಗೆ ಕಳುಹಿಸಿದ ಗಿಲ್ ಪಡೆ..!
ಕೊನೆಯ ಕದನ?
ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಇಂದಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಇಬ್ಬರೇ. ಎಲ್ಲರ ದೃಷ್ಟಿ ನೆಟ್ಟಿರೋದು ಕಿಂಗ್ ಕೊಹ್ಲಿ ಹಾಗೂ ಕೂಲ್ ಧೋನಿ ಮೇಲೆ. ರಣಕಣದಲ್ಲಿ ಇಬ್ಬರು ರಣಕಲಿಗಳ ಜಿದ್ದಾಜಿದ್ದಿನ ಹೋರಾಟ ನೋಡಲು ಇಡೀ ಕ್ರಿಕೆಟ್ ಲೋಕ ಕಾದು ಕುಳಿತಿದೆ. ಬಹುತೇಕ ಇದೇ ಪಂದ್ಯ ಕೊಹ್ಲಿ - ಧೋನಿ ಮುಖಾಮುಖಿಯಾಗೋ ಕೊನೆಯ ಪಂದ್ಯವಾಗೋ ಸಾಧ್ಯತೆಯಿದೆ. ಈಗಾಗಲೇ ಧೋನಿ ನಿವೃತ್ತಿಯ ಹಿಂಟ್ ಕೊಟ್ಟಿದ್ದು, ಇಂದಿನ ಪಂದ್ಯವೇ ಚಿನ್ನಸ್ವಾಮಿಯಲ್ಲಿ ಧೋನಿ ಆಡೋ ಕೊನೆಯ ಪಂದ್ಯವಾದ್ರೂ ಅಚ್ಚರಿ ಪಡಬೇಕಿಲ್ಲ.
ಫ್ಯಾನ್ಸ್ಗೆ ಕಾದಿದೆ ಸ್ಪೆಷಲ್ ಎಂಟರ್ಟೈನ್ಮೆಂಟ್
ಇಂದಿನ ಪಂದ್ಯ CSK vs RCB ನಡುವಿನ ಪಂದ್ಯ ಅನ್ನೋದಕ್ಕಿಂತ ಇದು ಧೋನಿ vs ಕೊಹ್ಲಿ ನಡುವಿನ ಕಾಳಗ ಎಂದೇ ಬಿಂಬಿತವಾಗಿದೆ. ಧೋನಿ-ಕೊಹ್ಲಿ ಎದುರುಬದುರು ಆಗ್ತಿರೋದ್ರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲಿದೆ. MS ಧೋನಿ-ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಯಾವತ್ತೇ ಮುಖಾಮುಖಿಯಾದ್ರೂ, ಫ್ಯಾನ್ಸ್ಗೆ ಫುಲ್ ಮೀಲ್ಸ್ ಫಿಕ್ಸ್. ಜಿದ್ದಿಗೆ ಬಿದ್ದವರಂತೆ ಹೋರಾಡೋದ್ರಲ್ಲಿ ಇಬ್ಬರನ್ನ ಮೀರಿಸೋರಿಲ್ಲ. ಬಾಲರ್ಗಳನ್ನು ನಿರ್ಧಯವಾಗಿ ದಂಡಿಸಿ, ರನ್ ಭರಾಟೆ ನಡೆಸೋದ್ರಲ್ಲಂತೂ ಇಬ್ಬರೂ ನಿಸ್ಸೀಮರು. ಫ್ಯಾನ್ಸ್ ಅಂತದ್ದೇ ಒಂದು ಜಿದ್ದಾಜಿದ್ದಿನ ಕಾಳಗದ ನಿರೀಕ್ಷೆಯಲ್ಲಿದ್ದಾರೆ.
ಇದನ್ನು ಓದಿ: ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಮಳೆಯ ಆತಂಕ.. ಹವಾಮಾನ ಇಲಾಖೆ ಏನು ಹೇಳಿದೆ..?
ಕೂಲ್ ಅಂಡ್ ಕಾಮ್ ಧೋನಿ, ಅಗ್ರೆಸ್ಸಿವ್ ಕೊಹ್ಲಿ
ಪಂದ್ಯದ ನಡುವೆ ಎಷ್ಟೇ ಒತ್ತಡವಿರಲಿ ಧೋನಿ ವ್ಯಕ್ತಿತ್ವ ಬದಲಾಗಲ್ಲ. ಕೂಲ್ ಅಂಡ್ ಕಾಮ್ ಆಗಿಯೇ ಎಂತಾ ಪ್ರೆಶರ್ ಇದ್ರೂ ಹ್ಯಾಂಡಲ್ ಮಾಡ್ತಾರೆ. ಕೊಹ್ಲಿಯದ್ದು ತದ್ವಿರುದ್ಧ ಅವತಾರ. ಫೀಲ್ಡ್ಗಿಳಿದ್ರೆ ಸಾಕು ಅಗ್ರೆಸ್ಸೀವ್ ಅವತಾರದಲ್ಲಿ ಮಿಂಚು ಹರಿಸ್ತಾರೆ. ಅಪ್ಪಿತಪ್ಪಿ ಯಾರಾದ್ರೂ ಕೆಣಕಿದ್ರೆ, ಉಗ್ರರೂಪವನ್ನೇ ತಾಳ್ತಾರೆ. ಈ ಆ್ಯಕ್ಷನ್-ರಿಯಾಕ್ಷನ್ಗಳು ಪಂದ್ಯಕ್ಕೇ ಟ್ವಿಸ್ಟ್ ಕೊಟ್ಟು ಬಿಡ್ತವೆ.
ಕೊಹ್ಲಿಯ ಕ್ಲಾಸ್ ಆಟಕ್ಕೆ ಚೆನ್ನೈ ಬೆಚ್ಚಿ ಬೀಳುತ್ತಾ?
ಆರ್ಸಿಬಿಯ ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಆಡ್ತಿರೋದ್ರಿಂದ ಕೊಹ್ಲಿಯ ಆರ್ಭಟವೇ ಚೆನ್ನೈಗಿರೋ ಮೊದಲ ಥ್ರೆಟ್. ಈ ಸೀಸನ್ನ ಐಪಿಎಲ್ನಲ್ಲಿ ಬೊಂಬಾಟ್ ಪರ್ಫಾಮೆನ್ಸ್ ನೀಡ್ತಾ ಇರೋ ವಿರಾಟ್ ಕೊಹ್ಲಿ ರನ್ ಕೊಳ್ಳೆ ಹೋಡಿತಿದ್ದಾರೆ. ಕ್ಲಾಸ್ ಆಟದಿಂದ ಮಾಸ್ ಮನರಂಜನೆ ನೀಡ್ತಿರೋ ವಿರಾಟ್ ಕೊಹ್ಲಿ ಸಾಲಿಡ್ ಟಚ್ನಲ್ಲಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭರ್ಜರಿ ಆಟವಾಡಿರೋ ವಿರಾಟ್ ಇಂದು ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಪ್ರಸಿದ್ಧ ಕೃಷ್ಣ ಅದ್ಭುತ ಸ್ಪೆಲ್.. ಗೆಲುವಿನೊಂದಿಗೆ SRH ಮನೆಗೆ ಕಳುಹಿಸಿದ ಗಿಲ್ ಪಡೆ..!
ಸೈಲೆಂಟಾಗೇ ಶಾಕ್ ಕೊಡ್ತಾರಾ ಕೂಲ್ ಧೋನಿ..?
ಪ್ಲೇ ಆಫ್ ದೃಷ್ಟಿಯಿಂದ ಇಂದಿನ ಪಂದ್ಯ ಆರ್ಸಿಬಿ ಪಾಲಿಗೆ ಮೋಸ್ಟ್ ಇಂಪಾರ್ಟೆಂಟ್. ಎಲಿಮಿನೇಟ್ ಆಗಿರೋ ಚೆನ್ನೈ ಈ ಪಂದ್ಯದಲ್ಲಿ ಕಳೆದುಕೊಳ್ಳೋದು ಏನೋ ಇಲ್ಲ. ಒಂದು ವೇಳೆ ಚೆನ್ನೈ ಗೆದ್ರೆ ಆರ್ಸಿಬಿಗೇ ಡ್ಯಾಮೇಜ್. ಈ ಸೀಸನ್ನಲ್ಲಿ ಮಾಹಿಯ ಮೋಡಿ ನಡೆದಿಲ್ಲ ಹಾಗಂತ ಕಡೆಗಣಿಸುವಂತಿಲ್ಲ. ವಿಕೆಟ್ ಹಿಂದೆ ನಿಂತು ಸೈಲೆಂಟಾಗೆ ರಣತಂತ್ರ ರೂಪಿಸೋ ಮಾಹಿ, ಎದುರಾಳಿಗೆ ಶಾಕ್ ಕೊಡೋದ್ರಲ್ಲಿ ಎತ್ತಿದ ಕೈ. ಡೆತ್ ಓವರ್ಗಳಲ್ಲಿ ಬ್ಯಾಟಿಂಗ್ಗಿಳಿದ್ರಂತೂ ಅಬ್ಬರಿಸಿ ಬಿಡ್ತಾರೆ. ಮಿಸ್ಟರ್ ಕೂಲ್ ಇದ್ದಷ್ಟು ಹೊತ್ತು, ಆರ್ಸಿಬಿಗೆ ಕಂಟಕ ತಪ್ಪಿದ್ದಲ್ಲ.
ಧೋನಿ vs ಕೊಹ್ಲಿ.. ಈ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆ ಬಹುಕಾಲದ್ದು. ಈ ಪ್ರಶ್ನೆಗೆ ಪಕ್ಕಾ ಉತ್ತರ ಇನ್ನೂ ಸಿಕ್ಕಿಲ್ಲ. ಪರ್ಫೆಕ್ಟ್ ಉತ್ತರ ಸಿಗೋದೂ ಇಲ್ಲ ಬಿಡಿ. ಈ ಚರ್ಚೆ ಆಗಾಗ ನಡೀತಾಲೆ ಇರುತ್ತೆ. ಇದೀಗ ಬೆಂಗಳೂರು - ಚೆನ್ನೈ ನಡುವೆ ಡು ಆರ್ ಡೈ ಕದನಕ್ಕೆ ಕೌಂಟ್ಡೌನ್ ಶುರು ಆಗ್ತಿದ್ದಂತೆ ಮತ್ತೆ ಇದೇ ಚರ್ಚೆ ನಡೀತಿದೆ. ನೆಚ್ಚಿನ ಆಟಗಾರನ ಪರ ಫ್ಯಾನ್ಸ್ ಬ್ಯಾಟ್ ಬೀಸ್ತಿದ್ದಾರೆ.
ಇದನ್ನೂ ಓದಿ: ಅಂಪೈರ್ ಜೊತೆ ಆಕ್ರೋಶಗೊಂಡು ಅಭಿಷೇಕ್ ಶರ್ಮಾ ಕಾಲಿಗೆ ಒದ್ದ ಗಿಲ್ VIDEO
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್