ಬೆಳಗ್ಗೆ ಮದುವೆಯಾದ್ರು.. ಸಂಜೆ ಮಚ್ಚಿನಿಂದ ಹೊಡೆದಾಡಿಕೊಂಡ್ರು!
ನಿನ್ನೆ ಪತ್ನಿ ಸಾವು.. ಇವತ್ತು ಚಿಕಿತ್ಸೆ ಫಲಕಾರಿಯಾಗದೇ ಪತಿ ಸಾವು
ಮದುವೆಯಾದ ದಿನವೇ ದುರಂತವಾಗಿ ಮಸಣ ಸೇರಿದ ನವಜೋಡಿ
ಕೋಲಾರ: ಮನೆಯವರನ್ನ ಒಪ್ಪಿಸಿ ಮದುವೆ ಎಂಬ ಮೂರು ಪದಗಳ ಬೆಸೆದು ಸಂಸಾರ ಶುರು ಮಾಡಬೇಕಿದ್ದ ಜೋಡಿ ಮೊದಲ ರಾತ್ರಿಗೂ ಮುನ್ನವೇ ದುರಂತ ಅಂತ್ಯ ಕಂಡ ಘಟನೆಯಿದು. ಬೆಳಗ್ಗೆ ಮದುವೆಯಾಗಿದ್ದ ನವ ಜೋಡಿ ಸಂಜೆಯೊಳಗೆ ಒಬ್ಬರಿಗೊಬ್ಬರು ಮಚ್ಚಿನೇಟು ಬೀಸಿದ್ದು ನಿನ್ನೆ ಪತ್ನಿ ಸಾವನ್ನಪ್ಪಿದ್ರೆ, ಇವತ್ತು ಪತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಖುಷ್ ಖುಷಿಯಾಗಿ ಮದುವೆಯಾದ್ರೋ ಇಲ್ವೋ ದ್ವೇಷಕ್ಕೆ ಮದುವೆಯಾದ್ರೋ ಒಂದು ಗೊತ್ತಿಲ್ಲ. ನಿನ್ನೆ ಬೆಳಗ್ಗೆ ಮೂರು ಗಂಟಿನ ಬಂಧನದಲ್ಲಿ ಬಂಧಿಯಾಗಿದ್ದ ಜೋಡಿ ಲೋಕದ ಬಂಧವನ್ನೇ ಕಳೆದುಕೊಂಡಿದ್ದಾರೆ. ಮನೆ ಮುಂದೆ ಚಪ್ಪರ ಹಾಕ್ಸಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದ ನವದಂಪತಿ ಸಂಜೆ ರೂಮಿನೊಳಗೆ ಹೋದವ್ರು ಪರಸ್ಪರ ಹೊಡೆದಾಡಿಕೊಂಡು ಜೀವ ಕಳಕೊಂಡಿದ್ದಾರೆ.
ಹೀಗೇ ಫೋಟೋ ಹೂವಿನ ಹಾರ ಹಾಕೊಂಡು ನಿಂತಿದ್ದಾರೆ ನೋಡಿ ಇವ್ರೇ ಲಿಖಿತಶ್ರೀ ಹಾಗೂ ನವೀನ್.. ನವೀನ್ ಆಂಧ್ರದ ಸಂತೂರ್ ಗ್ರಾಮದ ನಿವಾಸಿ.. ಹುಡುಗಿ ಕೋಲಾರದ ಬೈನೇಹಳ್ಳಿಯ ಗ್ರಾಮದವಳು.
ಇದನ್ನೂ ಓದಿ: ಭೀಕರ ಅಪಘಾತ.. ಅರ್ಧ ಕಿ.ಮೀ ಡೆಡ್‌ಬಾಡಿ ಧರಧರನೇ ಎಳೆದೊಯ್ದ ಕಾರು ಚಾಲಕ; ವಕೀಲ ಸಾವು
ಏಳು ಹೆಜ್ಜೆ ಇಟ್ಟವರು ಏಳು ಗಂಟೆಯೂ ಸರಿಯಾಗಿ ಬಾಳಲಿಲ್ಲ
ಆರು ತಿಂಗಳ ಹಿಂದೆ ಲಿಖಿತಳ ಮನೆಗೆ ಹೋಗಿ ನವೀನ್ ಮನೆಯವ್ರು ಹೆಣ್ಣು ನೋಡೋ ಶಾಸ್ತ್ರ ಮಾಡಿದ್ರಂತೆ. ನಂತ್ರ ಲಿಖಿತಳ ತಂದೆ ಅಷಾಢ ಮುಗಿದ ಮೇಲೆ ಮದುವೆ ಮಾಡಿಕೊಡ್ತೀನಿ ಅಂತಾ ಹೇಳಿದ್ಕೆ..ಮಂಗಳವಾರ ಸಂಜೆ ತಾಳಿ ತಂದು ನಿನ್ನೆ ಬೆಳಗ್ಗೆ ತಾನೇ ಮದುವೆ ಮಾಡ್ಕೊಂಡಿದ್ರು. ಸಂಜೆ 5 ಗಂಟೆ ಸುಮಾರಿಗೆ ರೂಮಿನೊಳಗೆ ಹೋಗಿದ್ದ ಲಿಖಿತ ಹಾಗೂ ನವೀನ್‌ಗೆ ಅದೇನಾಯ್ತೋ ಗೊತ್ತಿಲ್ಲ.. ಇಬ್ಬರು ಮಚ್ಚಿನಿಂದ ಹೊಡೆದಾಡಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನವವಧು ಲಿಖಿತ ನಿನ್ನೆ ಸಾವನ್ನಪ್ಪಿದ್ದಳು.
ಮನೆಯಲ್ಲಿ ಮಡದಿ, ಆಸ್ಪತ್ರೆಯಲ್ಲಿ ಪತಿಯ ಸಾವು
ಇನ್ನು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವರ ನವೀನ್‌ನನ್ನು ಕೋಲಾರದ ಕೆಜಿಎಫ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ರಾತ್ರಿಯೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕರೆತರಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇವತ್ತು ನವೀನ್ ಮೃತಪಟ್ಟಿದ್ದಾನೆ. ನಾನು ಲಿಖಿತ ಇಲ್ಲ ಅಂದ್ರೆ ಬದುಕಲ್ಲ ಅಂತ ಹೇಳಿಕೊಂಡಿದ್ದ ನವೀನ್ ಮನೆಯವ್ರ ಒಪ್ಪಿಗೆ ಪಡೆದೇ ತಾಳಿಕಟ್ಟಿದ್ದ. ಆದ್ರೆ ಈ ರೀತಿ ನವದಂಪತಿ ಹೊಡೆದಾಡಿಕೊಂಡು ಸಾವನ್ನಪ್ಪಿದ್ದು ಗ್ರಾಮಸ್ಥರನ್ನೇ ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ಮದ್ವೆಯಾದ ಕೆಲವೇ ಗಂಟೆಯಲ್ಲಿ ರೂಂಗೆ ಹೋಗಿದ್ದ ನವಜೋಡಿ.. ನಿನ್ನೆ ಮದುಮಗಳು, ಇಂದು ಮದುಮಗ ಸಾವು
ಆದ್ರೆ ಹುಡುಗಿ ಕಡೆಯವ್ರು ಮಾತ್ರ ಇಬ್ಬರು ಮಾತ್ರ ಮಾಡ್ಕೊಂಡಿಲ್ಲ ಬೇರೆ ಯಾರೋ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಬದುಕಿ ಬಾಳಬೇಕಿದ್ದ ನವದಂಪತಿ ಅದ್ಯಾವ ಕಾರಣಕ್ಕೆ ಹೊಡೆದಾಡಿಕೊಂಡ್ರೋ ಅಂತಾ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಅದೇನೇ ಇರ್ಲಿ.. ಕೂತು ಮಾತಾಡಿದ್ರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದ್ರೆ ಇಬ್ಬರು ಕೋಪ ಕೈಗೆ ಬುದ್ಧಿ ಕೊಟ್ಟು ಮಾಡ್ಕೊಂಡ ಯಡವಟ್ಟಿಗೆ ಮದುವೆ ಮನೆ ಈಗ ಸೂತಕದ ಮನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ